ಹೊನ್ನಾವರ : ಸಾಮಾಜಿಕ ಪರಿಶೋಧನೆಯಿಂದ ಇಂದು ನರೇಗಾ ಯೋಜನೆಯ ಕಾಮಗಾರಿಗಳಲ್ಲಿ ಪಾರದರ್ಶಕತೆ ಹೆಚ್ಚಾಗಿದೆ. ಸ್ವಯಂ ಪ್ರೇರಿತವಾಗಿ ಗ್ರಾಮಸ್ಥರು ಪಂಚಾಯತ ಕಡೆಗೆ ಮುಖಮಾಡುವಂತಾಗಿದೆ ಸಾಮಾಜಿಕ ಪರಿಶೋಧನೆಯಿಂದ ಸಾಮಾಜಿಕ ಒಳಗೊಳ್ಳುವಿಕೆ ಸಾಧ್ಯ ಎಂದು ತಾಲೂಕಾ ಸೋಶಿಯಲ್ ಆಡಿಟರ್ ಉಮೇಶ ಮುಂಡಳ್ಳಿ ಹೇಳಿದರು. ಅವರು ಮಂಗಳವಾರ ತಾಲೂಕಿನ ಖರ್ವಾ ಗ್ರಾಮ ಪಂಚಾಯತನಲ್ಲಿ ನಡೆದ 2018-19ನೇ ಸಾಲಿನ ಒಂದನೇ ಹಂತದ ಸಾಮಾಜಿಕ ಪರಿಶೋಧನೆ ಗ್ರಾಮ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.

ಮಹಾತ್ಮಾ ಗಾಂಧಿ ನರೇಗಾ ಯೋಜನೆ ಆರ್ಥಿಕವಾಗಿ ಹಿಂದುಳಿದವರಿಗಾಗಿಯೇ ಇರುವ ಒಂದು ಮಹತ್ವಪೂರ್ಣ ಯೋಜನೆಯಾಗಿದ್ದು, ಗ್ರಾಮೀಣ ಜನರ ಆಶಾದೀಪವಾಗಿದೆ. ಸಮಾಜದಲ್ಲಿ ನಿರ್ಗತಿಕರು ಅಸಹಾಯಕರಿಗೆ ಯೋಜನೆ ಕೈದೀವಟಿಗೆಯಂತೆ ಕಾರ್ಯನಿರ್ವಹಿಸುತ್ತಿದೆ. ಅವಕಾಶಗಳು ಒಮ್ಮೊಮ್ಮೆ ಮಾತ್ರ ಒದಗಿ ಬರುವಂತದ್ದು ಆಗ ನಾವು ಅವಕಾಶ ಪಡೆಯುವಲ್ಲಿ ಮೀನ ಮೇಷ ಎಣಿಸಿದಲ್ಲಿ ಅದರಿಂದ ವಂಚಿತರಾಗುತ್ತೇವೆ. ಯೋಜನೆ ನಿಂತ ನೀರಲ್ಲ ಸದಾ ಹರಿಯುವ ನದಿಯಂತೆ. ಯೋಜನೆ ನಿಯಮದಂತೆ ಕಾಮಗಾರಿ ನಿರ್ವಹಿಸಿದ್ದಲ್ಲಿ ಅನೇಕ ಕಾಮಗಾರಿಗಳನ್ನು ಕೈಗೊಳ್ಳಬಹುದಾಗಿದೆ ಎಂದರು. ಈ ಬಗ್ಗೆ ಗ್ರಾಮದ ಸಾಮಾನ್ಯ ಜನರಿಗೆ ಅರಿವೂ ಮೂಡಿಸುವ ಅವಶ್ಯಕತೆ ಇದೆ ಆ ದಿಶೆಯಲ್ಲಿ ಸಾಮಾಜಿಕ ಪರಿಶೋಧನೆ ತಂಡ ಪರಿಶೋಧನೆ ಸಮಯದಲ್ಲಿ ಕೂಲಿಕಾರರನ್ನು ಬೇಟಿ ಮಾಡುವ ಮೂಲಕ ಯೋಜನೆಯ ಯಶಸ್ಸಿಗೆ ತನ್ನ ಪ್ರಯತ್ನ ಮುಂದುವರಿಸಿದೆ ಎಂದರು.
ಗ್ರಾಮಮಟ್ಟದಲ್ಲಿ ನಡೆಯುತ್ತಿರುವ ಹಲವು ಯೋಜನೆಗಳಲ್ಲಿ ಉದ್ಯೋಗ ಖಾತ್ರಿ ಯೋಜನೆ ಅತ್ಯಂತ ಉಪಯುಕ್ತವಾಗಿದ್ದು, ಯಾವುದೇ ಕಾಮಗಾರಿ ನಿರ್ವಹಿಸುವ ಮೊದಲು ಅವಶ್ಯ ದಾಖಲುಗಳನ್ನು ಸಂಗ್ರಹಿಸಿಕೊಂಡು ಮತ್ತು ಯೊಜನೆಯ ನಿಯಮ ಮೀರದಂತೆ ಕಾಮಗಾರಿ ನಿರ್ವಹಿಸಬೇಕಾಗಿದೆ. ಜೊತೆಗೆ ಕೆಲವು ತಾಂತ್ರಿಕ ಕಾರಣಗಳಿಂದ ಸಾಮಾಗ್ರಿ ಬಿಲ್ ಪಾವತಿಯಲ್ಲಿ ಅಲ್ಪ ವಿಳಂಭವಾಗುತ್ತಿದ್ದು. ಮುಂದಿನ ದಿನದಲ್ಲಿ ಈ ಬಗ್ಗೆ ಸೂಕ್ತ ಗಮನ ಹರಿಸುವುದಾಗಿ ಗ್ರಾಮಸಭೆಯಲ್ಲಿ ಗೌರವ ಉಪಸ್ತಿತಿ ವಹಿಸಿದ್ದ ಉದ್ಯೋಗ ಖಾತ್ರಿ ಯೋಜನೆಯ ಸಹಾಯಕ ನಿರ್ದೇಶಕರಾದ ಕೃಷ್ಣಾನಂದರವರು ಹೇಳಿದರು. ಈ ಸಂದರ್ಭದಲ್ಲಿ ಪರಿಶೋಧನಾ ವರದಿಯನ್ನು ನೆರೆದ ಗ್ರಾಮಸಭಾ ಸದಸ್ಯರ ಸಮ್ಮುಖದಲ್ಲಿ ಮಂಡಿಸಿ ಸಭೆಯ ತಿರ್ಮಾನಕ್ಕೆ ಬಿಡಲಾಯಿತು. ಗ್ರಾಮಸಭೆಯ ಅಧ್ಯಕ್ಷತೆಯನ್ನು ಪಶುಸಂಗೋಪನಾ ಇಲಾಖೆಯ ಸ.ನಿರ್ದೇಶಕರ ಪರವಾಗಿ ಆಗಮಿಸಿದ ಸಹಾಯಕ ಅಧಿಕಾರಿ ಕವಿತಾ ನಾಯ್ಕ ವಹಿಸಿದ್ದರು.

RELATED ARTICLES  ಕೇಂದ್ರ ಸರಕಾರದ ಯೋಜನೆಯನ್ನು ಮನೆ ಮನೆಗೆ ತಲುಪಿಸುತ್ತಿದ್ದೇವೆ: ನಾಗರಾಜ ನಾಯಕ

ಈ ಅವದಿಯಲ್ಲಿ ನಿರ್ವಹಿಸಿದ ಕಾಮಗಾರಿಗಳ ವಿವರವನ್ನು, ಹಿಂದಿನ ಸಭೆಯ ನಡಾವಳಿಯನ್ನು ಪಿಡಿಒ ಉದಯ ಖಾರ್ವಿ ಓದಿ ಹೇಳಿದರು. ಪಂಚಾಯತ ಉಪಾಧ್ಯಕ್ಷೆ ಮಾದೇವಿ ಹೆಗಡೆ, ಸದಸ್ಯರಾದ ನೇತ್ರಾವತಿ ನಾಯ್ಕ, ವೆಂಕ್ಟೇಶ ನಾಯ್ಕ, ಮೋಹನ ಡಯಾಸ್, ತ್ರಾಂತ್ರಿ ಸಹಾಯಕರಾದ ಪೂಜಾ ನಾಯ್ಕ, ಮನೋಜ ಮತ್ತು ಪಂಚಾಯತ ಸಿಬ್ಬಂದಿವರ್ಗದವರು, ವಿ.ಆರ್.ಪಿ.ಗಳು, ಅಂಗನವಾಡಿ ಮತ್ತು ಆಶಾ ಕಾರ್ಯಕರ್ತರು, ಯೋಜನೆ ಫಲಾನುಭವಿಗಳು ಹಾಜರಿದ್ದರು.

RELATED ARTICLES  ದನದ ಚರ್ಮ ಸಾಗಾಣ ಮಾಡುತಿದ್ದ ವಾಹನ ವಶಕ್ಕೆ!