ಕುಮಟಾ:-ಶ್ರೀ ರಾಮಚಂದ್ರಾಪುರ ಮಠದ ಕುಮಟಾ ಮಂಡಲಾಂತರ್ಗತ ಹೆಗಡೆ ವಲಯದ ಸಭೆ ಹೆಗಡೆ ವಲಯ ಕಾರ್ಯಾಲಯದಲ್ಲಿ ಸಂಪನ್ನಗೊಂಡಿತು. ಗುರುವಂದನೆಯೊಂದಿಗೆ ಪ್ರಾರಂಭವಾದ ಸಭೆಯಲ್ಲಿ ಮಾಸಿಕ ಪ್ರಗತಿಯ ಪರಿಶೀಲನೆ ಮಾಡಲಾಯಿತು. ಪರಮಪೂಜ್ಯ ರಾಘವೇಶ್ವರ ಶ್ರೀಗಳ ಅಭಯ ಚಾತುರ್ಮಾಸ್ಯ ಬೆಂಗಳೂರಿನ ಶ್ರೀ ರಾಮಾಶ್ರಮದಲ್ಲಿ ನಡೆಯಲಿದ್ದು ವಲಯದ ಸರ್ವ ಸಹಕಾರ ನೀಡಲು ನಿರ್ಣಯವನ್ನು ಕೈಗೊಳ್ಳಲಾಯಿತು. ಮುಂದಿನ ಕಾರ್ಯಚಟುವಟಿಕೆಗಳನ್ನು ಕುರಿತು ಚರ್ಚಿಸಲಾಯಿತು. ಮೂಲಮಠ ನಿರ್ದೇಶಕ ರವೀಂದ್ರ ಭಟ್ಟ ಸೂರಿಯವರ ಮಾರ್ಗದರ್ಶನದಲ್ಲಿ ನಡೆದ ಸಭೆಯಲ್ಲಿ ವಲಯಾಧ್ಯಕ್ಷರಾದ ಸಿ.ಜಿ.ನಾರಾಯಣಮೂರ್ತಿ, ಮಾತ್ರ ಪ್ರಧಾನ ಗೋದಾವರಿ ಹೆಗಡೆ, ಕಾರ್ಯದರ್ಶಿ ಉಮಾಪತಿ, ಕೋಶಾಧ್ಯಕ್ಷ ಹರಿಶಂಕರ ಹೆಗಡೆ, ಮೂಲಮಠದ ಪಿ.ಆರ್.ಹೆಗಡೆ. ಗುರಿಕಾರರಾದ ಆರ್,ಎನ್,ಭಟ್ಟ. ಬಾಲಚಂದ್ರ ಭಾಗ್ವತ ಶ್ರೀ ಕಾರ್ಯಕರ್ತೆ ಗೀತಾ ಹೆಗಡೆ ಉಪಸ್ಥಿತರಿದ್ದರು. ರಾಮನಾಮ ಜಪ ಹಾಗೂ ಶಾಂತಿಮಂತ್ರದೊಂದಿಗೆ ಸಭೆ ಮುಕ್ತಾಯವಾಯಿತು.

RELATED ARTICLES  ನಕಲಿ ಫೇಸ್ಬುಕ್ ಖಾತೆ ತೆರೆದು ವಂಚನೆ : ಪಿಎಸ್‍ಐ ಹೆಸರಿನಲ್ಲಿ ಖಧೀಮರ ಕರಾಮತ್ತು

          ವರದಿ ಸಮಾಜ ಮಾಧ್ಯಮ ವಿಭಾಗ. ಹೆಗಡೆ