ಪಣಜಿ (ಗೋವಾ) – ಹಿಂದೂ ರಾಷ್ಟ್ರ ಇದು ಭಾರತದ ಬಹುಸಂಖ್ಯಾತ ಹಿಂದೂಗಳ ನೈಸರ್ಗಿಕ ಅಧಿಕಾರವಾಗಿದೆ. ಅದಕ್ಕಾಗಿ ವೈಚಾರಿಕ ನಿಲುವು ಮತ್ತು ಮಾಡಬೇಕಾದ ಕೃತಿ ಇದಕ್ಕೆ ದಾರಿಯನ್ನು ತೋರಿಸುವ ಸಪ್ತಮ ಅಖಿಲ ಭಾರತೀಯ ಹಿಂದೂ ಅಧಿವೇಶನವು ಹಿಂದುತ್ವನಿಷ್ಠರ ಅಭೂತಪೂರ್ವ ಉತ್ಸಾಹದಿಂದ ಯಶಸ್ವಿಯಾಗಿ ನಡೆಯಿತು. ಈ ಅಧಿವೇಶನದಲ್ಲಿ ಇತರ ಪ್ರಸ್ತಾಪದೊಂದಿಗೆ ಭಾರತ ಮತ್ತು ನೇಪಾಳ ಇವುಗಳನ್ನು ಹಿಂದೂ ರಾಷ್ಟ್ರವೆಂದು ಘೋಷಿಸುವ ಪ್ರಸ್ತಾವನೆಗೂ ಒಪ್ಪಿಗೆ ನೀಡಲಾಯಿತು. ಈ ಅಧಿವೇಶನಕ್ಕೆ ಭಾರತದಿಂದ ೧೮ ರಾಜ್ಯಗಳ ಸಹಿತ ನೇಪಾಳ, ಶ್ರೀಲಂಕಾ ಮತ್ತು ಬಾಂಗ್ಲಾದೇಶದಿಂದ ೧೭೫ ಕ್ಕೂ ಹೆಚ್ಚು ಹಿಂದುತ್ವನಿಷ್ಠ ಸಂಘಟನೆಗಳ ೩೭೫ ಕ್ಕೂ ಹೆಚ್ಚು ಪ್ರತಿನಿಧಿಗಳು ಉಪಸ್ಥಿತರಿದ್ದರು, ಎಂಬ ಮಾಹಿತಿಯನ್ನು ಹಿಂದೂ ಜನಜಾಗೃತಿ ಸಮಿತಿಯ ರಾಷ್ಟ್ರೀಯ ಮಾರ್ಗದರ್ಶಕರಾದ ಸದ್ಗುರು (ಡಾ.) ಚಾರುದತ್ತ ಪಿಂಗಳೆಯವರು ಆಯೋಜಿಸಿದ್ದ ಸಪ್ತಮ ಅಖಲ ಭಾರತೀಯ ಹಿಂದೂ ಅಧಿವೇಶನದ ಸಮಾರೋಪದ ಪತ್ರಕರ್ತರ ಪರಿಷತ್ತಿನಲ್ಲಿ ನೀಡಿದರು. ಈ ಪತ್ರಕರ್ತರ ಪರಿಷತ್ತಿನಲ್ಲಿ ಭಾರತ ರಕ್ಷಾ ಮಂಚ್‌ನ ರಾಷ್ಟ್ರೀಯ ಕಾರ್ಯದರ್ಶಿಗಳಾದ ಶ್ರೀ. ಅನೀಲ ಧೀರ್, ಹಿಂದೂ ಎಕ್ಸಿಸಟೆನ್ಸ್‌ನ ಸಂಪಾದಕರಾದ ಶ್ರೀ. ಉಪಾನಂದ ಬ್ರಹ್ಮಚಾರಿ, ಸನಾತನ ಸಂಸ್ಥೆಯ ರಾಷ್ಟ್ರೀಯ ವಕ್ತಾರರಾದ ಶ್ರೀ. ಚೇತನ ರಾಜಹಂಸ ಮತ್ತು ಹಿಂದೂ ಜನಜಾಗೃತಿ ಸಮಿತಿಯ ರಾಷ್ಟ್ರೀಯ ವಕ್ತಾರರಾದ ಶ್ರೀ. ರಮೇಶ ಶಿಂದೆಯವರು ಉಪಸ್ಥಿತರಿದ್ದರು.
ಸದ್ಗುರು (ಡಾ.) ಪಿಂಗಳೆಯವರು ಮುಂದೆ ಮಾತನಾಡುತ್ತಾ, “ಹಿಂದೂ ರಾಷ್ಟ್ರ-ಸ್ಥಾಪನೆಯ ವಿಷಯದಲ್ಲಿ ಸಮಾಜದಲ್ಲಿ ಜಾಗೃತಿಯನ್ನು ನಿರ್ಮಿಸಲು ಸಮಾನಂಶದ ಕಾರ್ಯಕ್ರಮದ ಅಂತರ್ಗತದಲ್ಲಿ ‘ಹಿಂದೂ ರಾಷ್ಟ್ರ ಜಾಗೃತಿ ಸಭೆ’, ‘ಗ್ರಾಮೀಣ ಮಟ್ಟದ ಹಿಂದೂ ರಾಷ್ಟ್ರ – ಜಾಗೃತಿ ಸಭೆ’, ‘ಹಿಂದೂ ರಾಷ್ಟ್ರ ಪರಿಸಂವಾದ’, ‘ಹಿಂದೂ ರಾಷ್ಟ್ರ ಸಂಪರ್ಕ ಅಭಿಯಾನ’, ‘೨೦೧೯ ರ ಪ್ರಯಾಗ ಕುಂಭಮೇಳದಲ್ಲಿ ಹಿಂದೂ ರಾಷ್ಟ್ರಜಾಗೃತಿ ಮತ್ತು ಸಂತಸಂಘಟನೆ’, ಇತ್ಯಾದಿ ವಿವಿಧ ಉಪಕ್ರಮವನ್ನು ಮುಂಬರುವ ವರ್ಷದಲ್ಲಿ ಹಮ್ಮಿಕೊಳ್ಳಲಾಗುವುದು, ಅದರೊಂದಿಗೆ ಶಿಕ್ಷಣ, ವಾಣಿಜ್ಯ, ಆಡಳಿತ ಮತ್ತು ರಾಜಕೀಯ ಕ್ಷೇತ್ರದಲ್ಲಿ ಸಮಾಜಿಕ ಪಿಡುಗುಗಳ ವಿರುದ್ಧ ಹೋರಾಟವನ್ನು ಮಾಡಿ ಸಮಾಜಹಿತಕ್ಕಾಗಿ ಉಪಕ್ರಮವನ್ನು ಹಮ್ಮಿಕೊಳ್ಳಲಾಗುವುದು. ಇದಕ್ಕಾಗಿ ವರ್ಷದಾದ್ಯಂತ ಆಂದೋಲನ, ಪತ್ರಕರ್ತರ ಪರಿಷತ್ತು, ಜನಜಾಗೃತಿ ಕಾರ್ಯಕ್ರಮ ಇತ್ಯಾದಿಗಳ ಆಯೋಜನೆಯನ್ನು ಮಾಡಲಾಗುವುದು”, ಎಂದರು.
ಈ ಸಂದರ್ಭದಲ್ಲಿ ಶ್ರೀ. ಉಪಾನಂದ ಬ್ರಹ್ಮಚಾರಿಯವರು ಮಾತನಾಡುತ್ತಾ, “ಪಶ್ಚಿಮ ಬಂಗಾಲದ ಮಮತಾ ಬ್ಯಾನರ್ಜಿ ಸರಕಾರದ ಆಡಳಿತಾವಧಿಯಲ್ಲಿ ಸ್ಥಳೀಯ ಹಿಂದೂ, ಭಾಜಪ ಕಾರ್ಯಕರ್ತರು ಹಾಗೆಯೇ ಪಂಚಾಯತ ಚುನಾವಣೆಯಲ್ಲಿ ಆರಿಸಿ ಬಂದ ಜನಪ್ರತಿನಿಧಿಗಳ ಹತ್ಯೆ ಮಾಡಲಾಯಿತು. ಪಶ್ಚಿಮ ಬಂಗಾಲದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಹದಗೆಟ್ಟಿದೆ. ಆಡಳಿತಾರೂಢ ತೃಣಮೂಲ ಕಾಂಗ್ರೆಸ್ ವಿರೋಧ ಪಕ್ಷಗಳಿಗೆ ಚುನಾವಣೆಯಲ್ಲಿ ಸ್ಫರ್ಧಿಸಲೂ ಬಿಡುತ್ತಿಲ್ಲ, ತೃಣಮೂಲವು ಚುನಾವಣೆಯಲ್ಲಿ ಅನೇಕ ತಪ್ಪು ಕೃತ್ಯಗಳನ್ನು ಮಾಡುತ್ತಿದೆ. ಪಶ್ಚಿಮ ಬಂಗಾಲದಲ್ಲಿ ಪ್ರಜಾಪ್ರಭುತ್ವವೇ ಅಸ್ತಿತ್ವದಲ್ಲಿಲ್ಲ. ಹಾಗಾಗಿ ಅಲ್ಲಿ ರಾಷ್ಟ್ರಪತಿ ಆಳ್ವಿಕ ಜಾರಿಗೊಳಿಸಬೇಕು”, ಎಂದರು.
ಓಡಿಶಾದಿಂದ ಬಂದಿದ್ದ ಶ್ರೀ. ಅನೀಲ ಧೀರ ಇವರು ಮಾತನಾಡುತ್ತಾ, ಪಾಕಿಸ್ತಾನ, ನೇಪಾಳ, ಬಾಂಗ್ಲಾದೇಶ ಮತ್ತು ಶ್ರೀಲಂಕಾದಲ್ಲಿ ಹಿಂದೂ ಬಾಂಧವರ ಮೇಲಿನ ದೌರ್ಜನ್ಯದ ಪ್ರಮಾಣವು ಹೆಚ್ಚಾಗಿದೆ. ಹಿಂದೂಗಳ ಹತ್ಯೆ, ಮತಾಂತರ, ಸ್ತ್ರೀಯರ ಮೇಲೆ ಬಲಾತ್ಕಾರ, ಅದೇರೀತಿ ಹಿಂದೂಗಳ ಸಂಪತ್ತನ್ನು ಕಬಳಿಸುವುದು ಇವು ಪ್ರತಿನಿತ್ಯ ಆಗುತ್ತಿದೆ. ವಿದೇಶದಲ್ಲಿ ಹಿಂದೂಗಳ ವಂಶನಾಶವನ್ನು ತಡೆಯಲು ಭಾರತ ಸರಕಾರವು ಕಠಿಣ ಕ್ರಮದ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವ ಆವಶ್ಯಕತೆ ಇದೆ ಎಂದು ಹೇಳಿದರು.
ಶ್ರೀ. ರಮೇಶ ಶಿಂದೆಯವರು ಮಾತನಾಡುತ್ತಾ, ಸದ್ಯ ೨೦೧೯ ರ ಲೋಕಸಭಾ ಚುನಾವಣೆಯ ಚರ್ಚೆ ಆರಂಭವಾಗಿದೆ. ಇಂದು ದೇಶದಲ್ಲಿ ಯಾವುದೇ ‘ಸೆಕ್ಯುಲರ್’ ಪಕ್ಷದ ಸರಕಾರದ ತುಲನೆಯಲ್ಲಿ ಹಿಂದುತ್ವನಿಷ್ಠ ಪಕ್ಷದ ಸರಕಾರ ನಿರ್ಮಿಸುವುದು ಆವಶ್ಯಕವಿದೆ; ಆದರೆ ಹಿಂದುತ್ವನಿಷ್ಠ ರಾಜಕೀಯ ಪಕ್ಷಕ್ಕೆ ಹಿಂದೂಗಳ ಆವಶ್ಯಕತೆ ಇದೆ ಎಂದು ಅನಿಸುತ್ತಿದೆಯೇ, ಎಂಬ ಪ್ರಶ್ನೆಯು ಉದ್ಭವಿಸಿದೆ. ಅಧಿಕಾರಕ್ಕೆ ಬಂದನಂತರ ಎಲ್ಲ ರಾಜಕೀಯ ಪಕ್ಷಗಳು ಹಿಂದೂಗಳಿಗೆ ನೀಡಿದಂತಹ ಆಶ್ವಾಸನೆಯನ್ನು ದುರ್ಲಕ್ಷಿಸಿದ್ದಾರೆ. ಇನ್ನೊಂದೆಡೆ ಉತ್ತರಪ್ರದೇಶದಲ್ಲಿ ‘ಕೈರಾನಾ’ದಲ್ಲಿ ಮುಸಲ್ಮಾನ ಮೌಲ್ವಿಗಳು ಭಾಜಪಗೆ ಮತವನ್ನು ಹಾಕದಂತೆ ಮುಸಲ್ಮಾನರಿಗೆ ಫತ್ವಾವನ್ನು ಹೊರಡಿಸುತ್ತಿದ್ದಾರೆ, ಕ್ರೈಸ್ತ ಪಾದರಿಗಳು ಸರಕಾರವನ್ನು ಬದಲಾಯಿಸಲು ‘ಗಾಡ್’ಗೆ ಪ್ರಾರ್ಥನೆಯನ್ನು ಮಾಡಲು ಆರಂಭಿಸಿದ್ದಾರೆ. ಅಲ್ಪಸಂಖ್ಯಾತರ ತುಷ್ಟಿಕರಣ ಎಷ್ಟೇ ಮಾಡಿದರೂ, ವಾಸ್ತವದಲ್ಲಿ ಅವರು ಹಿಂದುತ್ವನಿಷ್ಠ ಪಕ್ಷಗಳ ವಿರುದ್ದವೇ ಆಗಿದೆ. ಅನೇಕ ರಾಜ್ಯಗಳಲ್ಲಿ ಬೇರೆ ಬೇರೆ ಅಭಿಪ್ರಾಯವುಳ್ಳ ಜಾತ್ಯತೀತ ರಾಜಕೀಯ ಪಕ್ಷಗಳು ತಮ್ಮ ತಮ್ಮಲ್ಲಿಯ ಬೇಧಭಾವವನ್ನು ಮರೆತು ಹಿಂದುತ್ವದ ವಿರುದ್ದ ಒಟ್ಟಾಗುತ್ತಿದ್ದಾರೆ. ಇದನ್ನೆಲ್ಲಾವನ್ನು ಗಮನಿಸಿದರೆ ಬಹುಸಂಖ್ಯಾತ ಹಿಂದುತ್ವನಿಷ್ಠರೂ ಸಂಘಟಿತರಾಗಿ ರಾಜಕೀಯ ಪಕ್ಷದ ಆಶ್ವಾಸನೆಗಳತ್ತ ವಿಶ್ವಾಸವನ್ನಿಡದೇ, ರಾಜಕೀಯ ಪಕ್ಷಗಳ ಮುಂದೆ ತಮ್ಮ ಬೇಡಿಕೆಯನ್ನು ಇಡುವುದು ಆವಶ್ಯಕವಿದೆ. ಆ ದೃಷ್ಟಿಯಿಂದ ದೇಶದಾದ್ಯಂತ ಹಿಂದೂಗಳ ಸಮಸ್ಯೆಯ ಅಭ್ಯಾಸವನ್ನು ಮಾಡಿ ಹಿಂದೂಗಳ ‘ಚುನಾವಣೆಯ ಬೇಡಿಕೆಪತ್ರ’ವನ್ನು ಮಾಡಲಿದ್ದೇವೆ. ಅದರಲ್ಲಿ ಹಿಂದೂ ರಾಷ್ಟ್ರದ ಬೇಡಿಕೆ ಪ್ರಾಮುಖ್ಯವಾಗಿ ಇರುವುದು, ಎಂದು ಹೇಳಿದರು.
ಈ ಸಮಯದಲ್ಲಿ ಶ್ರೀ. ಚೇತನ ರಾಜಹಂಸ್ ಇವರು ಮಾತನಾಡುತ್ತಾ, ಈ ದೇಶದಲ್ಲಿ ಪ್ರತಿಯೊಬ್ಬ ನಾಗರಿಕರಿಗೆ ಸಂಚಾರಸ್ವಾತಂತ್ರ ಇದೆ, ಅಂದರೆ ಯಾರನ್ನೂ ಎಲ್ಲಿಯೂ ಹೋಗಲು ತಡೆಯಲಾರದು. ಹೀಗಿರುವಾಗ ಸಂವಿಧಾನವನ್ನು ಅವಮಾನಿಸಿ ಗೋವಾದಲ್ಲಿ ಭಾಜಪ ಸರಕಾರವು ಶ್ರೀರಾಮ ಸೇನೆಯ ಸಂಸ್ಥಾಪಕ ಅಧ್ಯಕ್ಷರಾದ ಶ್ರೀ. ಪ್ರಮೋದ ಮುತಾಲಿಕ ಇವರನ್ನು ಗೋವಾಗೆ ಬರಲು ನಿರ್ಬಂಧವನ್ನು ಹಾಕಿದ್ದಾರೆ. ಇದರ ಬಗ್ಗೆ ಅಖಿಲ ಭಾರತೀಯ ಹಿಂದೂ ಅಧಿವೇಶನವು ನಿಷೇಧದ ಠರಾವನ್ನು ಅನುಮೋದಿಸಿದೆ. ಗೋವಾದಲ್ಲಿಯ ಆರ್ಚಬಿಶಪ್ ಇವರು ದೇಶದಲ್ಲಿ ಸಂವಿಧಾನವು ಅಪಾಯದಲ್ಲಿದೆ, ಎಂದು ಘೋಷಿಸಿ ಕ್ರೈಸ್ತ ಸಮುದಾಯಕ್ಕೆ ರಾಜಕೀಯದಲ್ಲಿ ಸಕ್ರೀಯವಾಗಿರಲು ಹೇಳಿದ್ದಾರೆ. ಪ್ರತ್ಯಕ್ಷದಲ್ಲಿ ನೈಜೆರಿಯನ್, ರಶಿಯನ್, ಮತ್ತು ಯುರೋಪಿನ್ ಪ್ರವಾಸಿಗರಿಂದಾಗಿ ಗೋವಾದ ನಗರ ಹಾಗೂ ಸಾಂಸೃತಿಕ ಜೀವನವು ಅಪಾಯದಲ್ಲಿದೆ. ಇದರ ಬಗ್ಗೆ ಆರ್ಚಬಿಶಪ ಎಂದಿಗೂ ಮಾತನಾಡುತ್ತಿಲ್ಲ, ಇದು ಗಂಭೀರವಾದ ವಿಷಯವಾಗಿದೆ. ಎಂದು ಹೇಳಿದರು.
ಸಪ್ತಮ ಅಖಿಲ ಭಾರತೀಯ ಹಿಂದೂ ಅಧಿವೇಶನದ ಠರಾವು
೧. ವಿಶ್ವಕಲ್ಯಾಣಕ್ಕಾಗಿ ಭಾರತವನ್ನು ಹಿಂದೂ ರಾಷ್ಟ್ರವೆಂದು ಘೋಷಿಸಲು ಎಲ್ಲಾ ಹಿಂದೂ ಸಂಘಟನೆಗಳು ಕಾನೂನಿನ ಮಾರ್ಗದಿಂದ ಪ್ರಯತ್ನ ಮಾಡುವವು. ಭಾರತದ ಸಂಸತ್ತಿನಲ್ಲಿ ಬಹುಸಂಖ್ಯಾತ ಹಿಂದೂ ಸಮಾಜಕ್ಕೆ ನ್ಯಾಯಯುತ ಅಧಿಕಾರವನ್ನು ಕೊಡಲು ದೇಶವನ್ನು ಹಿಂದೂ ರಾಷ್ಟ್ರವೆಂದು ಘೋಷಿಸಿ.
೨. ನೇಪಾಳವನ್ನು ಹಿಂದೂ ರಾಷ್ಟ್ರವೆಂದು ಘೋಷಿಸಬೇಕು, ಅದಕ್ಕಾಗಿ ‘ಅಖಿಲ ಭಾರತೀಯ ಹಿಂದೂ ಅಧಿವೇಶನ’ದ ಸಂಪೂರ್ಣ ಬೆಂಬಲವಿದೆ.
೩. ಕೇಂದ್ರ ಸರಕಾರವು ಬಹುಸಂಖ್ಯಾತ ಹಿಂದೂ ಸಮಾಜದ ತೀವ್ರ ಭಾವನೆಯನ್ನು ಗಮನದಲ್ಲಿಟ್ಟುಕೊಂಡು ಸಂಪೂರ್ಣ ದೇಶದಲ್ಲಿ ಗೋಹತ್ಯಾನಿಷೇಧ, ಮತಾಂತರನಿಷೇಧ ಮತ್ತು ಅಯೋಧ್ಯೆಯಲ್ಲಿ ಶ್ರೀರಾಮಮಂದಿರವನ್ನು ಕಟ್ಟಲು ಇವುಗಳ ಬಗೆಗಿನ ಕೂಡಲೇ ನಿರ್ಣಯವನ್ನು ತೆಗೆದುಕೊಳ್ಳಬೇಕು.
೪. ಅಂತರಾಷ್ಟ್ರೀಯ ಮಾನವಧಿಕಾರ ಸಂಘಟನೆ, ಅದೇ ರೀತಿ ಭಾರತ ಸರಕಾರದ ಮೂಲಕ ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಶ್ರೀಲಂಕಾದಲ್ಲಿಯ ಹಿಂದೂಗಳ ಮೇಲೆ ಆಗುವಂತಹ ದೌರ್ಜನ್ಯದ ತನಿಖೆಯನ್ನು ಮಾಡಬೇಕು ಮತ್ತು ಇಲ್ಲಿಯ ಅಲ್ಪಸಂಖ್ಯಾತ ಹಿಂದೂಗಳಿಗೆ ರಕ್ಷಣೆಯನ್ನು ಪೂರೈಸಬೇಕು.
೫. ನಿರಾಶ್ರಿತ ಕಾಶ್ಮೀರಿ ಹಿಂದೂಗಳನ್ನು ಪುಃನ ಜಮ್ಮು-ಕಾಶ್ಮೀರದಲ್ಲಿ ಆಶ್ರಯವನ್ನು ಕೊಡಬೇಕು. ಅದಕ್ಕಾಗಿ ಕಾಶ್ಮೀರ ಕಣಿವೆಯಲ್ಲಿ ಸ್ವತಂತ್ರ ‘ಪನೂನ ಕಾಶ್ಮೀರ’ ಎಂಬ ಕೇಂದ್ರಾಡಳಿತ ಪ್ರದೇಶವನ್ನು ನಿರ್ಮಾಣ ಮಾಡಬೇಕು.
೬. ಜಮ್ಮು ಸಹಿತ ಸಂಪೂರ್ಣ ಭಾರತದಲ್ಲಿ ಕಾನೂನುಬಾಹಿರವಾಗಿ ವಾಸಿಸುತ್ತಿರುವ ರೋಹಿಂಗ್ಯಾ ಮುಸಲ್ಮಾನರನ್ನು ಕೂಡಲೇ ಹೊರಗಟ್ಟಬೇಕು.
೭. ಗೋವಾ ರಾಜ್ಯದಲ್ಲಿ ಕಾನನನ್ನು ದುರುಪಯೋಗಪಡಿಸಿಕೊಂಡು ಶ್ರೀರಾಮ ಸೇನೆಯ ಸಂಸ್ಥಾಪಕರಾದ ಶ್ರೀ. ಪ್ರಮೋದ ಮುತಾಲಿಕ ಇವರ ಮೇಲಿನ ಪ್ರವೇಶನಿಷೇಧವನ್ನು ಹಾಕಿದ ಕೃತ್ಯವನ್ನು ಅಖಿಲ ಭಾರತೀಯ ಹಿಂದೂ ಅಧಿವೇಶನ ಖಂಡಿಸುತ್ತದೆ.
೮. ನಾಸ್ತಿಕರ ಹತ್ಯೆಯ ಪ್ರಕರಣದಲ್ಲಿ ತನಿಖಾ ತಂಡದಿಂದ ಸನಾತನ ಸಂಸ್ಥೆಯ ಅಮಾಯಕ ಸಾಧಕರ ಶೋಷಣೆಯಾಗಬಾರದು, ಅದಕ್ಕಾಗಿ ಕೇಂದ್ರ ಸರಕಾರವು ಕೃತಿ ಮಾಡಬೇಕು.
ಹಿಂದುತ್ವನಿಷ್ಠ ಸಂಘಟನೆಗಳು ಅಧಿವೇಶನದಲ್ಲಿ ನಿರ್ಧರಿಸಿದ ಸಮಾನ ಕೃತಿಯ ಕಾರ್ಯಕ್ರಮ !
೧. ೨೨೩ ಸ್ಥಳಗಳಲ್ಲಿ ಸಣ್ಣ, ಮಧ್ಯಮ ಮತ್ತು ದೊಡ್ಡ ಧರ್ಮಜಾಗೃತಿ ಸಭೆ, ಅದೇ ರೀತಿ ಒಂದು ವಕ್ತಾರರ ಸಭೆಯನ್ನು ತೆಗೆದುಕೊಳ್ಳುನ ನಿರ್ಧಾರ !
೨. ೪೨ ಹೊಸ ಸ್ಥಳದಲ್ಲಿ ಪ್ರತಿತಿಂಗಳು ರಾಷ್ಟ್ರೀಯ ಹಿಂದೂ ಆಂದೋಲನ ನಡೆಯಲಿದೆ !
೩. ಒಟ್ಟು ೫೬ ಸ್ಥಳದಲ್ಲಿ ಹಿಂದೂ ರಾಷ್ಟ್ರ ಸಂಘಟಕ ತರಬೇತಿ ಕಾರ್ಯಾಗಾರ ತೆಗೆದುಕೊಳ್ಳುವ ನಿರ್ಧಾರ !
೪. ೩೬ ಸ್ಥಳಗಳಲ್ಲಿ ಹಿಂದೂ ರಾಷ್ಟ್ರದ ಬಗ್ಗೆ ಪರಿಸಂವಾದದ ಆಯೋಜನೆ ಆಗಲಿದೆ !
೫. ೪೮೫ ಸ್ಥಳಗಳಲ್ಲಿ ‘ಗ್ರಾಮೀಣಮಟ್ಟದ ಹಿಂದೂ ರಾಷ್ಟ್ರ – ಜಾಗೃತಿ ಸಭೆ’ಗಳ ಆಯೋಜನೆ ಆಗುವುದು !
೬. ದೇಶದಾದ್ಯಂತ ೨೬ ಜಿಲ್ಲಾಮಟ್ಟದ, ೧೦ ಪ್ರಾಂತೀಯ ಹಾಗೂ ೩ ರಾಜ್ಯಮಟ್ಟದ ಹಿಂದೂ ಅಧಿವೇಶನದ ನಿರ್ಧಾರ !
೭. ೯೫ ಸ್ಥಳಗಳಲ್ಲಿ ಶೌರ್ಯ ಜಾಗರಣ ಶಿಬಿರ, ೫೦ ಸ್ಥಳಗಳಲ್ಲಿ ವಕ್ತಾರರ ತರಬೇತಿ ಕಾರ್ಯಾಗಾರ, ೬೦ ಸ್ಥಳದಲ್ಲಿ ಸೋಶಿಯಲ್ ಮಿಡಿಯಾ ಶಿಬಿರ, ೪೦ ಸ್ಥಳಗಳಲ್ಲಿ ಸಾಧನಾ ಶಿಬಿರ ತೆಗೆದುಕೊಳ್ಳುವ ನಿರ್ಧಾರ !