ಶಿರಸಿ:ತಾಲೂಕಿನ ಮಂಜುಗುಣಿ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಅಧಿಕ ಮಾಸದ ನಿಮಿತ್ತ ಜೂ.9ರಂದು ವಿಶೇಷ ಧಾರ್ಮಿಕ ಪೂಜಾ ಕೈಂಕರ್ಯಗಳು ನೆರವೇರಲಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾಧಿಗಳು ಪಾಲ್ಗೊಂಡು ದೇವರ ದರ್ಶನ ಪಡೆಯಬೇಕೆಂದು ದೇವಸ್ಥಾನ ಆಡಳಿತ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ.

RELATED ARTICLES  ರಸಪ್ರಶ್ನೆಯಲ್ಲಿ ಶಿಕ್ಷಕ ಕಿರಣ ಪ್ರಭು ರಾಜ್ಯಮಟ್ಟಕ್ಕೆ

ಶುಕ್ರವಾರ ಮುಂಜಾನೆಯಿಂದ ಗರ್ಭಗುಡಿಯಲ್ಲಿ ದೇವರ ಮೂಲ ಮೂರ್ತಿಗೆ ಶತಧಾರಾಕ್ಷೀರಾಭಿಷೇಕ, ಮಹಾಪೂಜೆ, 33 ಅಪೂಪ ನೈವೇದ್ಯ, ಮಂಗಳಾರತಿ ನಡೆಯಲಿದೆ. ದೇಗುಲದ ನವರಂಗ ಮಂಟಪದಲ್ಲಿ ರಜತಪೀಠದಲ್ಲಿ ವೆಂಕಟರಮಣ ಉತ್ಸವ ಮೂರ್ತಿಗೆ ವಿಷ್ಣುಸಹಸ್ರನಾಮ ಸ್ತೋತ್ರಮಂತ್ರಗಳಿಂದ ತುಳಸಿ ಅರ್ಚನೆ ನಡೆಯಲಿದೆ.

ಭಕ್ತಾಧಿಗಳ ಸೇವೆಗಾಗಿ 333 ದೀಪಾರಾಧನೆ, ದೀಪ ನಮಸ್ಕಾರ, 33 ಅಪೂಪ ಪೂಜೆ ಹಾಗೂ ದಾನ, ದೇವರ ಪಾದುಕೆಗೆ ದ್ರವ್ಯಾಂಜಲಿ ಸಮರ್ಪಣೆಗೆ ಅವಕಾಶ ಕಲ್ಪಿಸಲಾಗಿದೆ. ಮಧ್ಯಾಹ್ನ ಪ್ರಸಾದ ಭೋಜನ ವಿತರಣೆ ಕಾರ್ಯಕ್ರಮವು ಜರುಗಲಿದೆ. ಭಕ್ತಾಧಿಗಳು ಕಾರ್ಯಕ್ರಮದ ಹೆಚ್ಚಿನ ಮಾಹಿತಿಗಾಗಿ 08283-246079 ಸಂಪರ್ಕಿಸಬಹುದಾಗಿದೆ.

RELATED ARTICLES  ಕುಟುಂಬಕ್ಕೆ ಆಸರೆಯಾಗಿದ್ದ ಯುವಕ ಸಾವು