ಕುಮಟಾ: ಇಲ್ಲಿಯ ಚಿತ್ರಿಗಿಯ ಮಹಾತ್ಮಾ ಗಾಂಧಿ ಪ್ರೌಢಶಾಲೆ ಪರೀಕ್ಷಾ ಫಲಿತಾಂಶದ ಮರು ಮೌಲ್ಯಮಾಪನ ಪ್ರಕ್ರಿಯೆಯಲ್ಲಿ ಗಣಿತ ವಿಷಯದಲ್ಲಿ ಕಾರ್ತಿಕ ರವಿ ನಾಯ್ಕ ಉತ್ತೀರ್ಣನಾಗಿ ಶಾಲೆಯ ಫಲಿತಾಂಶವು ಶೇ. 96.55 ಆಗಿದ್ದು ಶಾಲೆಗೆ ಪ್ರಥಮ ಸ್ಥಾನ ಪಡೆದ ಕುಮಾರಿ ಐಶ್ವರ್ಯಾ ಗುರುನಾಥ ಶಾನಭಾಗ ಹೆಚ್ಚುವರಿ 11 ಅಂಕ ಗಳಿಸಿ 613 ಅಂಕ ದಾಖಲಿಸಿ ಕನ್ನಡ ಮಾಧ್ಯಮದಲ್ಲಿ ಜಿಲ್ಲೆಗೆ ದ್ವಿತೀಯ ಸ್ಥಾನ ಮತ್ತು ತಾಲೂಕಿಗೆ ಪ್ರಥಮ ಸ್ಥಾನ ಅಲ್ಲದೇ ಕೆನರಾ ಎಜುಕೇಶನ್ ಸೊಸೈಟಿಯ ಪ್ರೌಢಶಾಲೆಗಳಲ್ಲಿ ಅತಿ ಹೆಚ್ಚು ಶ್ರೇಯಾಂಕ ಪಡೆದಿರುತ್ತಾಳೆ.
ಅನುದಾನಿತ ಕನ್ನಡ ಮಾಧ್ಯಮ ಶಾಲೆಯಲ್ಲಿ ಅಪ್ರತಿಮ ಸಾಧನೆ ಗೈಯುತ್ತಿರುವ ಪ್ರೌಢಶಾಲೆ ಹಾಗೂ ಐಶ್ವರ್ಯಾಳ ಐತಿಹಾಸಿಕ ಸಾಧನೆಗೆ ಆಡಳಿತ ಮಂಡಳಿ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳು ಅಭಿನಂದಿಸಿದ್ದಾರೆ.