ಹೊನ್ನಾವರ: ಜನ ಯಾವ ಮಟ್ಟಕ್ಕೆ ಇಳಿದಿದ್ದಾರೆ ಎಂಬುದೇ ತಿಳಿಯುತ್ತಿಲ್ಲ. ಹೌದು ಈ ಘಟನೆ ನಿಜವಾಗಿಯೂ ಅನ್ಯಾಯ ಪ್ರತಿಭಟಿಸೋರಿಗೆ ಭಯ ಹುಟ್ಟಿಸುವಂತೆ ಮಾಡಿದೆ.
ಮರಳು ಸಾಗಿಸುವ ಲಾರಿಗಳಿಂದ ರಸ್ತೆ ಹಾಳಾಗುತ್ತಿರುವುದನ್ನು ಪ್ರಶ್ನಿಸಿದ ಗ್ರಾಮಸ್ಥರಿಬ್ಬರ ಮೇಲೆ ಮಾರಣಾಂತಿಕ ಹಲ್ಲೇ ನಡೆಸಿದ ಘಟನೆ ತಾಲೂಕಿನ ಮಾಳ್ಕೋಡನಲ್ಲಿ ನಡೆದಿದೆ ಎಂದು ವರದಿಯಾಗಿದೆ.

RELATED ARTICLES  ತಾಲೂಕ ಮಟ್ಟದ ವಾಲಿಬಾಲ್ ಪಂದ್ಯಾವಳಿ ಮತ್ತು ಸನ್ಮಾನ ಕಾರ್ಯಕ್ರಮ

ರೇತಿ ಸಾಗಾಟದ ವಿಚಾರಕ್ಕೆ ಸಂಭಂದಿಸಿದಂತೆ ತಮ್ಮ ಊರಿನ ರಸ್ತೆ ಹಾಳಾಗುತ್ತದೆ ಎಂದು ಪ್ರಶ್ನಿಸಿದ ಕಿರಣ ಶ್ರೀಧರ ನಾಯ್ಕ ಎನ್ನುವವರ ಮೇಲೆ ಮರಳು ಸಾಗಾಟ ನಡೆಸುವ ಗ್ರಾಮ ಪಂಚಾಯತ್ ಸದಸ್ಯ ಗಜಾನನ ಗೌಡ,ಗಣೇಶ ಗೌಡ,ಹನ್ಮಂತ ಗೌಡ,ಕಿರಣ ಗೌಡ ಎಂಬುವವರು ಹಿಂಬದಿಯಿಂದ ಬಂದು ಕಬ್ಬಿಣದ ರಾಡ್‍ನಿಂದ ತಲೆಗೆ,ಕೈ ಹಾಗೂ ದೇಹದ ಅಂಗಾಗಳ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ. ಈ ವಿಷಯ ಗ್ರಾಮದಲ್ಲಿ ತಲ್ಲಣ ಮೂಡಿಸಿದೆ.

RELATED ARTICLES  ಅಪರಿಚಿತ ಶವ ಪತ್ತೆ

ಈ ಕುರಿತು ಮಂಕಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಗಾಯಾಳುಗಳಿಗೆ ತಾಲೂಕಾ ಆಸ್ಪತ್ರಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ .ಪೊಲೀಸರು ಆರೋಪಿಗಳ ಶೋಧ ಕಾರ್ಯ ನಡೆಸಿದ್ದಾರೆ.