ಉತ್ತರ ಕನ್ನಡ:ಸಾಮಾಜಿಕ‌ ಜಾಲತಾಣವೀಗ ಪರಸ್ಪರ ಅವಹೇಳನಕಾರಿ ಮಾತುಗಳಿಗೆ ಸಾಕ್ಷಿಯಾಗುತ್ತಿದೆ. ತಮ್ಮ ಮನಸ್ಸಿಗೆ ಬಂದಂತೆ ಗೀಚುವ ಹಾಗೂ ಇತರರ ಮೇಲೆ ಹರಿ ಹಾಯುವ ಸಾಮಾನ್ಯ ಪ್ರಕರ್ಣಗಳು ಬರುತ್ತಿವೆಯಾದರೂ ಪೇಸ್​ಬುಕ್​ ಖಾತೆಯಲ್ಲಿ ಕೇಂದ್ರ ಸಚಿವ ಅನಂತಕುಮಾರ ಹೆಗಡೆ ವಿರುದ್ಧ ದ್ವೇಷ ಹುಟ್ಟುವ ರೀತಿಯಲ್ಲಿ ಸಂದೇಶ ರವಾನೆ ಮಾಡಿದ ಫೇಸ್​ಬುಕ್​ ಖಾತೆದಾರರ ವಿರುದ್ಧ ದೂರು ದಾಖಲಾಗಿದೆ.

RELATED ARTICLES  ರಾಡ್ ನಿಂದ ಮನೆ ಬಾಗಿಲು ಒಡೆದು ಕಳ್ಳತನ

ಕೇಂದ್ರ ಸಚಿವರ ವಿರುದ್ಧ ಅಶ್ಲೀಲ ಪದಗಳನ್ನು ಬಳಸಿ ಫೇಸ್​ಬುಕ್​ನಲ್ಲಿ ಪೋಸ್ಟ್​ ಹಾಕಿದ್ದ ರಾಜೇಶ್​ ಆದಿ ಉಡುಪಿ ಮತ್ತು ಮಂಜೇಗೌಡ ವಿರುದ್ಧ ಶಿರಸಿ ನಗರ ಠಾಣೆಯಲ್ಲಿ ದೂರು ದಾಖಲಾಖಲಾಗಿದೆ ಎಂದು ತಿಳಿದುಬಂದಿದೆ.

RELATED ARTICLES  ಯುನಿವರ್ಸಿಟಿ ಬ್ಲೂ ಆಗಿ ಹೊರಹೊಮ್ಮಿದ ನವೀನ ನಾಯ್ಕ.

ಕೇಂದ್ರ ಸಚಿವರ ಆಪ್ತ ಕಾರ್ಯದರ್ಶಿ ಸುರೇಶ್​ ಶೆಟ್ಟಿ ಪೊಲೀಸರಿಗೆ ದೂರು ನೀಡಿದವರು. ಇನ್ನು ಪೇಜಾವರ ಶ್ರೀಗಳು ಒಬ್ಬ ಹುಚ್ಚರಿದ್ದಾರೆ ಎಂದು ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಹೇಳಿದ್ದಾರೆ ಎಂಬಂತೆ ಈ ಇಬ್ಬರು ತಮ್ಮ ಫೇಸ್​ಬುಕ್​ ಖಾತೆಯಲ್ಲಿ ಬಿಂಬಿಸಿದ್ದರು ಎನ್ನಲಾಗಿದೆ.