ಪ್ರಾಚೀನ ಕಾಲದಿಂದಲೂ ಇರುವ ಸೂಕ್ತಿ ಗೋಮಯೆ ವಸತೇ ಲಕ್ಷ್ಮೀ. ಆದರೆ ಗೋವಿನ ಹಾಲು ಮಾತ್ರ ಆರ್ಥಿಕ ಮೂಲ ಎನ್ನುವ ವಿದೇಶಿ ಚಿಂತನೆಯಿಂದಾಗಿ ಉಳಿದವು ಗೌಣವಾಗಿ ಗೋವನ್ನು ನೋಡುವ ದೃಷ್ಠಿಕೋನ ಬದಲಾಯಿತು. ಆದರೆ ಗೋವಿನ ಆರ್ಥಿಕ ಮೂಲ ಕೇವಲ ಹಾಲಲ್ಲ ಅನ್ನುವ ವಿಚಾರವನ್ನು ಜಗತ್ತಿಗೆ ತಿಳಿಪಡಿಸುವ ನಿಟ್ಟಿನಲ್ಲಿ ಗವ್ಯೋಧ್ಯಮವನ್ನು ಬೆಳೆಸಬೇಕಾಗಿದೆ. ಆನಿಟ್ಟಿನಲ್ಲಿ ಗವ್ಯ ಉತ್ಪನ್ನಗಳ ತರಬೇತಿ ಶಿಬಿರವನ್ನು ಆಯೋಜಿಸಲಾಗಿದೆ.
ಗವ್ಯ ಉತ್ಪನ್ನಗಳಲ್ಲಿ ಔಷಧೀಯ ಉತ್ಪನ್ನಗಳು, ಗೊಬ್ಬರಗಳು ಹಾಗೂ ಇತರೆ ಉತ್ಪನ್ನಗಳು ಇದ್ದು, ಅವುಗಳಲ್ಲಿ ಜನ ಸಾಮಾನ್ಯರು ಬಳಸಬಹುದಾದ ಉತ್ಪನ್ನಗಳ ಮಾಹಿತಿ ಮತ್ತು ಅವುಗಳ ತಯಾರಿಕಾ ವಿಧಾನಗಳನ್ನು ಪ್ರಾಯೋಗಿಕವಾಗಿ ತಿಳಿಸಿ ಕೊಡಲಾಗುತ್ತದೆ. ಆಸಕ್ತರು ಶಿಬಿರದಲ್ಲಿ ಭಾಗವಹಿಸಬಹುದು.
*ಸೂಚನೆಗಳು*
★ಮೊದಲ ಹಂತದಲ್ಲಿ ಮೂರು ದಿನಗಳ ತರಬೇತಿ ಶಿಬಿರಗಳು ನಡೆಯಲಿದ್ದು ಶಿಬಿರಾರ್ಥಿಗಳು ಅಲ್ಲಿಯೇ ಇರಬೇಕು.
★ಊಟ ತಿಂಡಿ ಮತ್ತು ವಸತಿ ವ್ಯವಸ್ಥೆ ಇರುತ್ತದೆ.
★ಶಿಬಿರದಲ್ಲಿ 50 ಜನರಿಗೆ ಮಾತ್ರ ಅವಕಾಶಗಳಿದ್ದು, ಶಿಬಿರದ ಶುಲ್ಕ 500/- ಆಗಿರುತ್ತದೆ.
★ಶಿಬಿರಾರ್ಥಿಗಳು ಮೊದಲೇ ನೋಂದಣಿ ಮಾಡಿಸಿಕೊಳ್ಳಬೇಕು.
*ದಿನಾಂಕ:- 15-06-18 ರಿಂದ 17-06-18 ರವರೆಗೆ*
*ಸಮಯ:- 15-06-18 ರ ಬೆಳಗ್ಗೆ 10 ಗಂಟೆಗೆ ಪ್ರಾರಂಭ.*
*17-06-18 ರ ಸಂಜೆ 4 ಗಂಟೆಗೆ ಮುಕ್ತಾಯ.*
*ಶಿಬಿರ ನಡೆಯುವ ಸ್ಥಳ:-*
ಮಹಾನಂದಿ ಗೋಲೋಕ, ಶ್ರೀರಾಮಚಂದ್ರಪುರ ಮಠ,
ಹೊಸನಗರ, ಶಿವಮೊಗ್ಗ ಜಿಲ್ಲೆ.
*ನೋಂದಣಿಗಾಗಿ ಸಂಪರ್ಕ:-*
ಡಾ.ರವಿ:-94839 42776
ಮಧು ಗೋಮತಿ:-9449595278
ಶಿಶಿರ ಹೆಗಡೆ:-9483484074