ಕುಮಟಾ :ಖ್ಯಾತ ಚಲನ ಚಿತ್ರ ನಟ ನಿರ್ದೇಶಕ ಕಾಸರಗೋಡು ಚಿನ್ನಾ ಅವರ ಸಾರಥ್ಯದಲ್ಲಿ
ಕೊಂಕಣ ಎಜ್ಯುಕೇಶನ್ ಟ್ರಸ್ಟ ಸಹಯೋಗದೊಂದಿಗೆ ಕುಮಟಾ ತಾಲೂಕಿನ ಕೊಂಕಣಿ ಭಾಷಿಕ ವಿವಿಧ ಪಂಗಡಗಳ ಮಹಿಳೆಯರಿಗಾಗಿ ಎರಡು ದಿನಗಳ ರಂಗತರಬೇತಿ ಶಿಬಿರವನ್ನು ದಿನಾಂಕ 16/06/28 ಶನಿವಾರ ಹಾಗೂ 17/06/18 ರಂದು ಭಾನುವಾರ ಕುಮಟಾದ ಕೊಂಕಣ ಎಜ್ಯುಕೇಶನ್ ಟ್ರಸ್ಟ್ ನ ಸಭಾಭವನದಲ್ಲಿ ಜರುಗಲಿದ್ದು ಅರವತ್ತಕ್ಕೂ ಹೆಚ್ಚುಮಹಿಳೆಯರು ಈ ಶಿಬಿದ ಪ್ರಯೋಜನ ಪಡೆಯಲಿದ್ದಾರೆ ಎಂದು ಕಾರ್ಯಕ್ರಮದ ಸಂಚಾಲಕಿ ಸುಧಾಗೌಡ ತಿಳಿಸಿದರು.

ಕುಮಟಾದ ಪರಿವೀಕ್ಷಣಾ ಮಂದಿರದಲ್ಲಿ ಕರೆದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಇವರು ಈ ಕಾರ್ಯಕ್ರಮದ ಉದ್ಘಾಟಕರಾಗಿ ಶಾಸಕರಾದ ದಿನಕರ ಶೆಟ್ಟಿ ಅವರು ಆಗಮಿಸಲಿದ್ದಾರೆ ಅಧ್ಯಕ್ಷತೆಯನ್ನು ಕೊಂಕಣ ಸಂಸ್ಥೆಯ ಕಾರ್ಯದರ್ಶಿ ಮುರಳೀಧರ ಪ್ರಭು ವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.

RELATED ARTICLES  ಹೊನ್ನಾವರದಲ್ಲಿ ಪ್ರಮುಖರನ್ನು ಭೇಟಿಮಾಡಿ ಮಾತುಕತೆ ನಡೆಸಿದ ದಿನಕರ ಶೆಟ್ಟಿ

ಶಿಬಿರದಲ್ಲಿ ಶಿಬಿರದಲ್ಲಿ ಮೂಕಾಭಿನಯ,ಧ್ವನಿಗಳ ಬಳಕೆ ಸಂವಹನ ಕಲೆಗಳನ್ನು ತಿಳಿಸಿಕೊಡಲಾಗುವುದು ಎಂದು ಅವರು ಮಾಹಿತಿ ನೀಡಿದರು.

ಸುಧಾ ಗೌಡ,ನಿರ್ಮಲಾ ಪ್ರಭು.ಶೈಲಜಾ ಗುನಗಿ.ಶೃದ್ಧಾ ಭಟ್ ಮೊದಲಾದವರು ಉಪಸ್ಥಿತಿತರಿದ್ದರು.

ಕಾರ್ಯಕ್ರಮಕ್ಕೆ ಆಹ್ವಾನ

“ರಂಗ ಚಿನ್ನಾರಿ ಕಾಸರಗೋಡು” ಮತ್ತು ಕೊಂಕಣ ಎಜ್ಯುಕೇಶನ್ ಟ್ರಸ್ಟ್ (ರಿ) ಕುಮಟಾ
ಇವರ ಸಹಯೋಗದಲ್ಲಿ –

ಕೊಂಕಣಿ ಮಹಿಳೆಯರಿಗಾಗಿ ರಂಗ ಸಂಸ್ಕೃತಿ ಶಿಬಿರ:-

ದಿ- ೧೬-೦೬-೨೦೧೮, ಶನಿವಾರ ಮತ್ತು ದಿ- ೧೭-೦೬-೨೦೧೮ ಭಾನುವಾರ
ಸಮಯ:- ಮುಂಜಾನೆ ೯ ರಿಂದ ಸಾಯಂಕಾಲ ೪-೩೦.

ಸ್ಥಳ:- ಕೊಂಕಣ ಎಜ್ಯುಕೇಶನ್ ಟ್ರಸ್ಟ ಸಭಾಭವನ

ಉದ್ಘಾಟನಾ ಕಾರ್ಯಕ್ರಮ
ದಿ: ೧೬-೦೬-೧೮ ಮುಂಜಾನೆ ೯.೩೦

ಉದ್ಘಾಟಕರು :- ಶ್ರೀ ದಿನಕರ ಕೆ. ಶೆಟ್ಟಿ, ಮಾನ್ಯ ಶಾಸಕರು ಕುಮಟಾ ಹೊನ್ನಾವರ ವಿಧಾನಸಭಾಕ್ಷೇತ್ರ.

ಅಧ್ಯಕ್ಷತೆ:- ಶ್ರೀ ಮುರಳೀಧರ ಪ್ರಭು, ಖ್ಯಾತ ಉದ್ಯಮಿಗಳು. ಹಾಗೂ ಕಾರ್ಯದರ್ಶಿಗಳು ಕೊಂಕಣ ಎಜ್ಯುಕೇಶನ್ ಟ್ರಸ್ಟ.

RELATED ARTICLES  "ನನ್ನೊಳಗಿನ ನಾನು" ಮತ್ತು "ನಮ್ಮ ಹಬ್ಬಗಳು" ಕೃತಿ ಲೋಕಾರ್ಪಣೆ.

ಮುಖ್ಯ ಅತಿಥಿಗಳು- ಶ್ರೀಮತಿ ಜ್ಯೋತಿ ನಾಯ್ಕ
ಡಿಸ್ಟ್ರಿಕ್ಟ ಆಫೀಸರ್
ಜಿಲ್ಲಾ ಖಾದಿ ಗ್ರಾಮೋದ್ಯೋಗ ಕಛೇರಿ, ಮಂಗಳೂರು.

ಸಮಾರೋಪ ಸಮಾರಂಭ
ದಿ:- ೧೭-೬- ೨೦೧೮
ಮಧ್ಯಾಹ್ನ ೩-೦೦ ಗಂಟೆಯಿಂದ

ಅಧ್ಯಕ್ಷತೆ- ಶ್ರೀ ಕಾಸರಗೋಡು ಚಿನ್ನಾ

ಪ್ರಮಾಣ ಪತ್ರ ವಿತರಣೆ-

ಶ್ರೀ ರಾಮನಾಥ (ಧೀರೂ) ಶಾನಭಾಗ, ಉದ್ಯಮಿಗಳು ಹಾಗೂ ಅಧ್ಯಕ್ಷರು ಎ.ಪಿ.ಎಂ.ಸಿ ಕುಮಟಾ.

ಶ್ರೀ ಸುಬ್ರಾಯ ವಾಳ್ಕೆ, ಉದ್ಯಮಿಗಳು ಹಾಗೂ ಚಲನಚಿತ್ರ ನಿರ್ಮಾಪಕರು.

ಮುಖ್ಯ ಅತಿಥಿಗಳು: ಶ್ರೀಮತಿ ಛಾಯಾ ಅರುಣ ಉಭಯಕರ
ಸಮಾಜ ಸೇವಕರು, ಮಲ್ಲಾಪೂರ

ಸರ್ವರನ್ನೂ ಸ್ವಾಗತಿಸುವವರು:-
ಶ್ರೀಮತಿ ಸುಧಾ ಬಿ ಗೌಡ.
ಅದ್ಯಕ್ಷರು: ರಂಗ ಸಂಸ್ಕೃತಿ ಶಿಬಿರ.

ಶ್ರೀಮತಿ ನಿರ್ಮಲಾ ಪ್ರಭು
ಕಾರ್ಯದರ್ಶಿ: ರಂಗ ಸಂಸ್ಕೃತಿ ಶಿಬಿರ.