ಶ್ರೀ ಅಖಿಲ ಹವ್ಯಕ ಮಹಾಸಭೆ(ರಿ) ಬೆಂಗಳೂರು ವತಿಯಿಂದ ನಾಳೆ( 10.06.2018 ಭಾನುವಾರ) ಸಾರ್ವಜನಿಕ ಉಚಿತ ವೈದ್ಯಕೀಯ ತಪಾಸಣಾ ಶಿಬಿರ ಆಯೋಜಿಸಲಾಗಿದ್ದು, ನಾಡಿನ ಸುಪ್ರಸಿದ್ದ ವೈದ್ಯರಿಂದ ಉಚಿತ ವೈದ್ಯಕೀಯ ತಪಾಸಣೆ ಹಾಗೂ ಚಿಕಿತ್ಸೆ ಲಭ್ಯವಿರಲಿದೆ. ಮಲ್ಲೇಶ್ವರದಲ್ಲಿರುವ ಹವ್ಯಕ ಮಹಾಸಭೆಯ ಸಭಾಭವನದಲ್ಲಿ ಬೆಳಗ್ಗೆ 10.00 ರಿಂದ ಶಿಬಿರ ಆರಂಭವಾಗಲಿದೆ.
ಡಾ. ರವಿಶಂಕರ್, ಡಾ. ದಿವಾಕರ್ ಭಟ್, ಡಾ. ಬಿ ಎಸ್ ಭಟ್, ಡಾ. ಅರುನ್ ಅಡಕ್ಕೋಳಿ, ಡಾ. ಬಾಲಮುರಳಿ, ಡಾ. ಪ್ರಭಾಕರ್ ಅಲಗೋಡು, ಡಾ. ಎಸ್ ಆರ್ ಹೆಗಡೆ ಹಾಗೂ ಮಹಾಸಭೆಯ ಅಧ್ಯಕ್ಷರು ಹಾಗೂ ಪ್ರಸಿದ್ದ ವೈದ್ಯರಾದ ಡಾ. ಗಿರಿಧರ್ ಕಜೆ ಸೇರಿದಂತೆ ಹಲವಾರು ಪ್ರಸಿದ್ಧ ವೈದ್ಯರ ತಂಡ ಕಣ್ಣಿನ ತೊಂದರೆ, ದಂತ ಪರೀಕ್ಷೆ, ಚರ್ಮವ್ಯಾಧಿ, ಸ್ತ್ರೀರೋಗ, ಕ್ಯಾನ್ಸರ್, ವಯಸ್ಕರಲ್ಲಿ ಸಂಧು ನೋವು, ಬೆನ್ನು ನೋವು, ಅರೆ ತಲೆನೋವು ಸೇರಿದಂತೆ ಎಲ್ಲ ಬಗೆಯ ರೋಗಗಳಿಗೆ ಅಲೋಪತಿ – ಹೋಮಿಯೋಪತಿ ಹಾಗೂ ಆಯುರ್ವೇದ ವೈದ್ಯಪದ್ದತಿಯಲ್ಲಿ ಪರೀಕ್ಷೆ ಹಾಗೂ ಉಚಿತ ಚಿಕಿತ್ಸೆ ಲಭ್ಯವಿದೆ.
ಸರ್ವಸಮಾಜದ ಹಿತಕ್ಕಾಗಿ ಹವ್ಯಕ ಮಹಾಸಭೆಯ ವೈದ್ಯಕೀಯ ಹಾಗೂ ಆರೋಗ್ಯ ಸಮಿತಿ ಈ ಸಾರ್ವಜನಿಕ ಉಚಿತ ವೈದ್ಯಕೀಯ ತಪಾಸಣಾ ಶಿಬಿರವನ್ನು ಆಯೋಜಿಸುತ್ತಿದ್ದು, ಕರ್ನಾಟಕ ಕ್ಯಾನ್ಸರ್ ಸೊಸೈಟಿ, ಸುನೇತ್ರ ಕಣ್ಣಿನ ಆಸ್ಪತ್ರೆ ಹಾಗೂ ಟೊರ್ರೆಂಟ್ ಫಾರ್ಮ ಇವರುಗಳ ಸಹಯೋಗದಲ್ಲಿ ಕಾರ್ಯಕ್ರಮ ನಡೆಯಲಿದೆ. ಸಾರ್ವಜನಿಕರು ಇದರ ಸದುಪಯೋಗ ಪಡೆಯಬಹುದಾಗಿದ್ದು, ಹೆಚ್ಚಿನ ಮಾಹಿತಿಗಾಗಿ; ಮಹಾಸಭೆಯ ವೈದ್ಯಕೀಯ ಹಾಗೂ ಆರೋಗ್ಯ ಸಮಿತಿಯ ಸಂಚಾಲಕರಾದ ಡಾ. ಶ್ರೀಪಾದ್ ಹೆಗಡೆ ( 9448018654) ಹಾಗೂ ಮಹಾಸಭೆಯ ಕಾರ್ಯಾಲಯ 080-23348193 ಸಂಪರ್ಕಿಸಬಹುದಾಗಿದೆ.
ಸ್ಥಳ: ಶ್ರೀ ಅಖಿಲ ಹವ್ಯಕ ಮಹಾಸಭೆ(ರಿ) , 11ನೇ ಅಡ್ಡ ರಸ್ತೆ, 8ನೇ ಮುಖ್ಯ ರಸ್ತೆ, ಮಲ್ಲೇಶ್ವರ, ಬೆಂಗಳೂರು.
ಸಮಯ: ನಾಳೆ ಭಾನುವಾರ ಬೆಳಗ್ಗೆ 10.00 ರಿಂದ.