ಕುಮಟಾ :ಈ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಭಾರೀ ಅಂತರದ ಗೆಲುವನ್ನು ಸಾಧಿಸಿದ ಶಾಸಕ ದಿನಕರ ಶೆಟ್ಟಿವರನ್ನು ದೇವಗಿರಿ ಗ್ರಾಮ ಪಂಚಾಯತದ ವ್ಯಾಪ್ತಿಯ ನಾಗರಿಕರು ಸೇರಿ ಧಾರೇಶ್ವರದಲ್ಲಿ ಇಂದು ಸನ್ಮಾನಿಸಿ ಅಭಿನಂದಿಸಿದರು.

ಹಿರಿಯರಾದ ಶ್ರೀ ಜಿ ವಿ ಹೆಗಡೆ, ಪಂಚಾಯತ್ ಅಧ್ಯಕ್ಷ ಎಸ್. ಟಿ .ನಾಯ್ಕ, ದೇವಾಲಯದ ಮೊಕ್ತೇಸರ ಎಲ್. ಎಂ. ಪ್ರಭು ಹಾಗೂ ಇತರರು ಶಾಸಕರಿಗೆ ಶಾಲು ಹೊದೆಸಿ ಫಲಪುಷ್ಪ ನೀಡಿ ಗೌರವಿಸಿ ಅಭಿನಂದಿಸಿದರು.

ಬಹು ವರ್ಷಗಳಿಂದ ಕುಮಟಾದಲ್ಲಿ ಭಾಜಪಾ ಶಾಸಕತ್ವವನ್ನು ಕಳೆದುಕೊಂಡಿತ್ತು .ಈಗ ಸ್ಥಾನ ಸಿಕ್ಕಿರುವುದು ತನಗೆ ಅತಿಯಾದ ಸಂತಸ ತಂದಿದೆ, ಶಾಸಕರು ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸಲಿ ಎಂದು ಹಿರಿಯರಾದ ಜಿ ವಿ ಹೆಗಡೆ ಹಾರೈಸಿದರೆ, ನೂತನ ಶಾಸಕರು ಅಭಿವೃದ್ಧಿಪರ ಕೆಲಸಗಳನ್ನ ಹೆಚ್ಚು ಮಾಡಲಿ ,ಬಿಜೆಪಿಯ ಸರ್ಕಾರ ಬಂದು ನಮ್ಮ ಶಾಸಕರು ಸಚಿವರಾಗಲಿ ಎಂದು ಗ್ರಾ ಪಂ ಅಧ್ಯಕ್ಷ ಸುರೇಶ್ ನಾಯ್ಕ ನುಡಿದು ಅಭಿನಂದಿಸಿ ಶುಭ ಕೋರಿದರು. ಊರಿನ ನಾಗರಿಕರು ಮಾತನಾಡಿ ಅಭಿನಂದಿಸಿದರು.
ಕೆಲವು ಸ್ಥಾನಿಕ ಸಮಸ್ಯೆಗಳನ್ನು,ಆಗಬೇಕಾದ ಅಭಿವೃದ್ಧಿ ಕಾರ್ಯಗಳನ್ನು ಶಾಸಕರ ಗಮನಕ್ಕೆ ತರಲಾಯಿತು.

RELATED ARTICLES  ಇಬ್ಬರು ಗೋ ಕಳ್ಳತನ ಆರೋಪಿಗಳನ್ನು ಬಂಧಿಸಿದ ಪೊಲೀಸರು.

ಗೌರವ ಸ್ವೀಕರಿಸಿದ ಶಾಸಕ ದಿನಕರ ಶೆಟ್ಟಿಯವರು ಮಾತನಾಡಿ ತಾನು ನಿರೀಕ್ಷಿಸಿದ ಮಟ್ಟಕ್ಕಿಂತ ಹೆಚ್ಚಿನ ಅಂತರದ ಗೆಲುವು ಹೊಂದುವಲ್ಲಿ ಶ್ರಮಿಸಿ ಸಹಕರಿಸಿದ ಎಲ್ಲ ಕಾರ್ಯಕರ್ತರು ಹಾಗೂ ಮತದಾರರಿಗೆ ಮನಸಾರೆ ಕೃತಜ್ಞತೆ ಸಲ್ಲಿಸುತ್ತ ಕ್ಷೇತ್ರದ ಜನತೆಗೆ ಚಿರ ಋಣಿಯಾಗಿರುವುದಾಗಿ ತಿಳಿಸಿದರು.ಈ ಹಿಂದೆ ತಾನು ಶಾಸಕನಾಗಿ ಕೆಲಸ ಮಾಡಿದ ಅನುಭವ ಹೊಂದಿದ್ದು ಜನಸೇವೆಯಲ್ಲಿ -ಕ್ಷೇತ್ರದ ಅಭಿವೃದ್ಧಿಯಲ್ಲಿ ಸುಲಭವಾಗಿ ತೊಡಗಿಸಿಕೊಳ್ಳುವೆನೆಂದರು.ವಿನೂತನವಾಗಿ ಪ್ರತಿ ಶುಕ್ರವಾರ ಕುಮಟಾ ತಹಶೀಲ್ದಾರ ಕಛೇರಿಯಲ್ಲಿ ಅಧಿಕಾರಿಗಳೊಂದಿಗೆ ಜನರ ಸಮಸ್ಯೆಗಳನ್ನು ಆಲಿಸಿ ಪರಿಹರಿಸಲು ಕಾರ್ಯವನ್ನು ಈಗಾಗಲೇ ಜಾರಿಗೆ ತಂದಿದ್ದೇನೆ ,ಇದರ ಸದುಪಯೋಗವನ್ನು ಎಲ್ಲರೂ ಪಡೆಯುವಂತಾಗಲಿ ಎಂದು ಆಶಯ ವ್ಯಕ್ತಪಡಿಸಿದರು. ವಿಶೇಷವಾಗಿ ರೆವಿನ್ಯೂ ಇಲಾಖೆಯೇ ಪ್ರಧಾನವಾಗಿ ಇತರೇ ಸರಕಾರಿ ಕಛೇರಿಗಳಲ್ಲಿಯೂ ಗರಿಷ್ಠವಾಗಿರುವ ಭೃಷ್ಟಾಚಾರ ನಿಗ್ರಹಕ್ಕಾಗಿ ಪ್ರಯತ್ನ ಮಾಡುತ್ತೇನೆಂದರು. ಈ ಹಿಂದೆ ಈ ಪ್ರದೇಶಗಳಲ್ಲಿ ಶಾಲೆ, ರಸ್ತೆ ಹಾಗೂ ಇತರ ಅಭಿವೃದ್ಧಿ ಪರ ಕೆಲಸಗಳನ್ನು ಮಾಡಿದಂತೆಯೇ ಮುಂದೆಯೂ ಜನರ ಸೇವೆಗಾಗಿ ತಾನು ಯಾವತ್ತೂ ಲಭ್ಯನಿರುತ್ತೇನೆಂದರು. ತನ್ನ ಕೆಲಸಗಳಲ್ಲಿ ಜನತೆಯ ಸಹಕಾರವೂ ಮುಖ್ಯವಾಗಿರುತ್ತಿದ್ದು ಅದನ್ನೂ ತಾವುಗಳು ಕೊಟ್ಟು ಸ್ಪಂದಿಸಲು ಕೋರಿದರು.

RELATED ARTICLES  ಚುನಾವಣೆ : ಕಾಂಗ್ರೆಸ್ ನ ಸ್ಪರ್ಧಿಗಳ ಮೊದಲ ಪಟ್ಟಿ ಬಿಡುಗಡೆ.

ಧಾರೇಶ್ವರದ ಧಾರಾನಾಥ ಸಭಾಭವನದಲ್ಲಿ ನಡೆದ ಸರಳ ಸಮಾರಂಭದಲ್ಲಿ ನೂರೈವತ್ತಕ್ಕೂ ಅಧಿಕ ಜನರು ಸೇರಿದ ಸಭಾ ಜಾರ್ಯಕ್ರಮದಲ್ಲಿ ಕುಮಾರ ಭಟ್ಟ ಸ್ವಾಗತಿಸಿದರೆ ರಾಮು ಅಡಿ ನಿರ್ವಹಣೆ ಮಾಡಿ ವಂದಿಸಿದರು.