ಕುಮಟಾ :ಇಲ್ಲಿನ ವಿವೇಕ ನಗರ ವಿಕಾಸ ಸಂಘದ ಸದಸ್ಯರು ಶನಿವಾರ ಜರುಗಿದ ಸಂಘದ ಕಾರ್ಯಕಾರಿಣಿ ಯ ಮಾಸಿಕ ಸಭೆಯಲ್ಲಿ ಯು.ಪಿ.ಎಸ್.ಸಿ.ಅಭ್ಯಸಿಸುತ್ತಿರುವ ಪ್ರತಿಭಾವಂತ ವರುಣ ಚಂದ್ರ ಅವರ ಅಕಾಲಿಕ ನಿಧನದ ಬಗ್ಗೆ ಮೌನಾಚರಣೆ ಮಾಡಿ ಶೃದ್ಧಾಂಜಲಿ ಸಲ್ಲಿಸಿದರು.

ಸಂಘದ ಅಧ್ಯಕ್ಷ ಪ್ರೊ.ಎಮ್.ಆರ್.ನಾಯಕ ರವರು ಮಾತನಾಡುತ್ತ ಯಾರಿಗೇ ಆಗಲಿ ಸಮಸ್ಯೆ,ಕಷ್ಟಗಳು ಎದುರಾದಾಗ ಅವನ್ನು ಸಹನೆ ಹಾಗೂ ಧೈರ್ಯದಿಂದ ಅವನ್ನು ಎದುರಿಸಿ ಪರಿಹಾರ ಕಂಡುಕೊಳ್ಳಬೇಕೇ ವಿನಃ ಆತ್ಮಹತ್ಯೆಯಂತಹ ಕಠಿಣ ನಿರ್ಧಾರಕ್ಕೆ ಮುಂದಾಗಬಾರದು ಎಂದರು.

RELATED ARTICLES  ವಿದ್ಯುತ್ ನಿಗಮದ ಸಂಸ್ಥಾಪನಾ ದಿನಾಚರಣೆ

ವರುಣ ಚಂದ್ರ ಅವರ ಕುಟುಂಬವು ಹಲವು ವರ್ಷಗಳಿಂದ ಕುಮಟಾದ ನಮ್ಮ ವಿವೇಕ ನಗರ ನಿವಾಸಿಗಳಾಗಿದ್ದು , ಇವರ ತಂದೆ ಡಾ.ಸುಭಾಶ್ಚಂದ್ರ ಇವರು ಸ್ಥಳೀಯ ಡಾ.ಎ.ವಿ.ಬಾಳಿಗಾ ಮಹಾವಿದ್ಯಾಲಯದಲ್ಲಿ ಸಸ್ಯ ಶಾಸ್ತ್ರ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ಅನಂತರ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ದಲ್ಲಿ ಸೇವೆ ಸಲ್ಲಿಸುತ್ತ ವಿಜ್ಙಾನಿಯೂ ಆಗಿ ಜನಪ್ರಿಯರಾಗಿದ್ದಾರೆ.

RELATED ARTICLES  ಮಿರ್ಜಾನಿನ ಸಮೀಪ ಬೈಕ್ ಅಪಘಾತ : ಸವಾರನ ಕೈ ಕಾಲಿನ ಮೇಲೆ ಹರಿದ ಲಾರಿ.

ವಿವೇಕ ನಗರದೊಂದಿಗೆ ವಿಶೇಷ ಸಂಬಂಧ ಸಂಪರ್ಕ ಹೊಂದಿರುವ ಇವರಿಗೆ ಹಾಗೂ ಇವರ ಕುಟುಂಬದವರಿಗೆ ಪುತ್ರನ ಅಕಾಲಿಕ ಅಗಲುವಿಕೆಯ ದುಃಖವನ್ನು ಸಹಿಸುವ ಶಕ್ತಿಯನ್ನು ಭಗವಂತ ಕರುಣಿಸಲಿ ಎಂದೂ ಪ್ರಾರ್ಥಿಸಿ, ಅಗಲಿದ ವರುಣ ಚಂದ್ರ ಅವರಿಗೆ ಶೃದ್ಧಾಂಜಲಿ ಸಲ್ಲಿಸಲಾಯಿತು.

ಕಾರ್ಯದರ್ಶಿ ದತ್ತಾತ್ರೇಯ ಭಟ್ಟ ಸಹಿತ ಸಂಘದ ಪದಾಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡರು.