ಕುಮಟಾ: ಹೊನ್ನಾವರ ವಿಧಾನಸಭಾ ಕ್ಷೇತ್ರದಲ್ಲಿ ದಾಖಲೆಯ ಗೆಲುವು ಸಾಧಿಸಿ ಶಾಸಕರಾದ ದಿನಕರ ಶೆಟ್ಟಿ ಯವರನ್ನು ಹೆಗಡೆ ಶಕ್ತಿ ಕೇಂದ್ರದ ಪರವಾಗಿ ಹೃದಯಸ್ಪರ್ಶಿಯಾಗಿ ಸನ್ಮಾನಿಸಲಾಯಿತು.ಹವ್ಯಕ ಸಮಾಜದದಿಂದಲೂ ಶಾಸಕರನ್ನು ಸನ್ಮಾನಿಸಿ ಅಭಿನಂದಿಸಲಾಯಿತು.

ನಂತರ ಅತಿಥಿಯಾಗಿ ಪಾಲ್ಗೊಂಡಿದ್ದ ಡಾ ಜಿ ಜಿ ಹೆಗಡೆ ಮಾತನಾಡಿ 20 ವರ್ಷಗಳ ನಂತರ ನಾವು ಶಾಸಕರನ್ನು ಆಯ್ಕೆ ಮಾಡಿಕೊಂಡಿದ್ದೇವೆ. ಎಲ್ಲ ಕಾರ್ಯಕರ್ತರ ಶ್ರಮದ ಫಲ ಇದು. ಮೋದಿಯವರ ಮೇಲೆ ದಿನಕರ ಶೆಟ್ಟಿಯವರ ಮೇಲೆ ನಂಬಿಕೆ ಇಟ್ಟು ಜನರು ಬಿಜೆಪಿಗೆ ಆಶೀರ್ವಾದ ಮಾಡಿದ್ದಾರೆ ಇದು ಹೀಗೆ ನಿರಂತರವಾಗಿರಲಿ ಎಂದರು.

ಇನ್ನೋರ್ವ ಅತಿಥಿ ಬಿಜೆಪಿ ಮುಖಂಡ ಸುಬ್ರಾಯ ವಾಳ್ಕೆ ಮಾತನಾಡಿ ಇಂದು ಬಿಜೆಪಿ ಇಂದ ನಾವು ನೀವು ಶಾಸಕರನ್ನು ಆಯ್ಕೆಮಾಡಿಕೊಂಡು ಹೊಸ ಉತ್ಸಾಹದಲ್ಲಿದ್ದೇವೆ . ಆದರೆ ನಮ್ಮ ಸರಕಾರ ರಾಜ್ಯದಲ್ಲಿ ಮಾಡಲು ಆಗಿಲ್ಲ ಎನ್ನುವ ನೋವು ಒಂದು ಕಡೆ ಇದೆ. ಆದರೆ ಈಗಿನ ಸರ್ಕಾರ “ಕೊ ಜಾ” ಸರ್ಕಾರ. ಇದು ಜಾಸ್ತಿ ದಿನ ಇದಕ್ಕೆ ಉಳಿಗಾಲವಿಲ್ಲ. ಹಾಗಾಗಿ ಕೆಲವೇ ತಿಂಗಳಲ್ಲಿ ಮತ್ತೆ ಚುನಾವಣೆ ನಡೆಯುವಂತೆ ಕಾಣುತ್ತಿದೆ. ಶಾಸಕರು ಎರಡನೇ ಬಾರಿ ನನ್ನನ್ನು ಆಯ್ಕೆ ಮಾಡಿದ್ದೀರಿ ಎನ್ನುತ್ತಾರೆ ಆದರೆ ಮೂರನೇ ಬಾರಿಗೆ ಆಯ್ಕೆ ಮಾಡಿದ್ದೀರಿ ಎನ್ನುವ ಕಾಲ ದೂರವಿಲ್ಲ ಎಂದು ಭವಿಷ್ಯ ನುಡಿದರು.

ಬಿಜೆಪಿ ಯ ಹಿರಿಯಣ್ಣ ವಿನೋದ ಪ್ರಭು ಮಾತನಾಡಿ ಬಹಳ ಒಳ್ಳೆಯ ವ್ಯಕ್ತಿಯನ್ನು ಇಂದು ಚುನಾಯಿಸಿದ್ದೀರಿ. 58 ಸಾವಿರ ಅದ್ಭುತ ಮತ ನೀಡಿ ಬಿಜೆಪಿ ಗೆ 20 ವರ್ಷಗಳಿಂದ ಇದ್ದ ನೋವನ್ನು ದೂರ ಮಾಡಿದ್ದೀರಿ ಇದಕ್ಕೆ ಕ್ಷೇತ್ರದ ಜನರನ್ನು ಅಭಿನಂದಿಸುತ್ತೇನೆ. ಲಕ್ಷಾಂತರ ಕಾರ್ಯಕರ್ತರ ಶ್ರಮದ ಫಲ ಇಂದು ಪ್ರಧಾನಿ ಆಗಿ ನರೇಂದ್ರ ಮೋದಿ ಯವರು ವೇಗದಲ್ಲಿ ದೇಶವನ್ನು ಮುನ್ನೆಡೆಸುತ್ತಿದ್ದಾರೆ. ದಿನಕರ ಶೆಟ್ಟಿ ಯವರು ಕೂಡ ತುಂಬಾ ಒಳ್ಳೆಯ ಗುಣಗಳನ್ನು ಹೊಂದಿದ್ದಾರೆ. ಯಾರೇ ಮನೆಗೆ ಬಂದರೂ ಕೂಡ ಪ್ರೀತಿಯಿಂದ ಅವರ ಸಮಸ್ಯೆ ಏನು ಅಂತ ಆಲಿಸಿ ಕೆಲಸ ಮಾಡಿ ಕಳುಹಿಸುವ ಉತ್ತಮ ವ್ಯಕ್ತಿ.. ಅವರನ್ನು ನಾನು ಕಾಲೇಜು ದಿನಗಳಿಂದಲೂ ನೋಡುತ್ತಿದ್ದೇನೆ.. ಅವರ ಮುಂದಾಳತ್ವದಲ್ಲಿ ಮುಂಬರುವ ಲೋಕಸಭಾ ಚುನಾವಣೆಯಲ್ಲಿಯೂ ನಮ್ಮ ಕ್ಷೇತ್ರದಲ್ಲಿ ಉತ್ತಮ ಲೀಡ್ ಕೊಡುವ ಮೂಲಕ ಸಂಸದರನ್ನು ಗೆಲ್ಲಿಸಬೇಕಾಗಿದೆ ಎಂದರು.

RELATED ARTICLES  ಚಿತ್ರಿಗಿ ಪ್ರೌಢಶಾಲೆ: ಎನ್.ಎಂ.ಎಂ.ಎಸ್.ವಿದ್ಯಾರ್ಥಿವೇತನಕ್ಕೆ ಆಯ್ಕೆ.

ರಾಜ್ಯ ಸದಸ್ಯ ಜಿ ಎಸ್ ಗುನಗ, ಎಸ್ ಎಸ್ ಹೆಗಡೆ, ಹಾಗೂ ಮಹಿಳಾ ಮೋರ್ಚಾ ಸದಸ್ಯೆ ಸುಮನಾ ಪಟಗಾರ ಗೆಲುವಿನ ಸಂಭ್ರಮವನ್ನು ಹಂಚಿಕೊಂಡರು.

ಕೊನೆಯಲ್ಲಿ ಶಾಸಕರು ಮಾತನಾಡಿ ಮೊದಲನೇದಾಗಿ ನಾನು ಸನ್ಮಾನ ಬೇಡ ಅಂದರೂ ಪ್ರೀತಿಯಿಂದ ಕರೆದು ಗೌರವಿಸಿದ್ದೀರಿ ಬಹಳ ದೊಡ್ಡ ಸಂಖ್ಯೆಯಲ್ಲಿ ಸೇರಿದ್ದೀರಿ ನಿಮಗೆಲ್ಲ ನಾನು ಚಿರರುಣಿ ಹಾಗೂ ನಾನೂ ಕೂಡ ಹೃದಯಪೂರ್ವಕ ಅಭಿನಂದನೆ ಸಲ್ಲಿಸುತ್ತೇನೆ.. ಈ ಹೆಗಡೆ ಜಿಲ್ಲಾ ಪಂಚಾಯತ ದಲ್ಲಿ ಕಳೆದ ಬಾರಿಗಿಂತಲೂ ಅತಿ ಹೆಚ್ಚಿನ ಮತ ನೀಡಿದ್ದೀರಿ.. ಬ್ರಾಹ್ಮಣರು, ಪಟಗಾರರು, ಹಾಲಕ್ಕಿ, ಮೀನುಗಾರ ಸಮಾಜದವರು ಹಾಗೂ ಇನ್ನುಳಿದ ಚಿಕ್ಕ ಪುಟ್ಟ ಸಮಾಜದವರೂ ಈ ಬಾರಿ ಅತಿ ಹೆಚ್ಚಿನ ಮತ ನೀಡಿ ಗೆಲ್ಲಿಸಿದ್ದೀರಿ ನಿಮ್ಮ ಜೊತೆ ಯಾವತ್ತೂ ನಾನಿದ್ದೇನೆ ಹಾಗೂ ಕ್ಷೇತ್ರದ ಕೆಲಸ ಮಾಡಲು ಬಹಳ ಉತ್ಸಾಹ ಹೊಂದಿದ್ದೇನೆ ಮೊದಲೂ ಕೂಡ ಶಾಸಕನಾದಾಗ ಕೆಲಸ ಮಾಡಿದ ಅನುಭವ ಇರುವುದರಿಂದ ಸಮಸ್ಯೆ ಆಗಬಾರದು. ಇನ್ನು ನನ್ನ ಬಗ್ಗೆ ಬಹಳ ಚರ್ಚೆ ನಡೆಯುತ್ತಿದೆ ನಾನು ಬಿಜೆಪಿಗೆ ಸುಮ್ಮನೆ ಬಂದಿಲ್ಲ ನಾನು ನನ್ನ ಶಕ್ತಿ ಇದ್ದುದರಿಂದಲೇ ಬಿಜೆಪಿಯ ಶಕ್ತಿ ಯ ಜೊತೆ ಬೆರೆತಿದ್ದೇನೆ. ಅದರ ಫಲ ನನ್ನ ಲೆಕ್ಕಾಚಾರ ಪಕ್ಕಾ ಆಗಿದೆ.

RELATED ARTICLES  ಬೆಟ್ಟದಲ್ಲಿ ಇಸ್ಪೀಟ್ ಜುಗರಾಟ : 7 ಜನ ಅರೆಸ್ಟ್ : ನಾಲ್ವರು ಪರಾರಿ.

ದಯವಿಟ್ಟು ನನಗೆ 58 ಸಾವಿರ ಮತ ನೀಡಿ ಗೆಲ್ಲಿಸಿದ್ದೀರಿ ನಿಮ್ಮ ಸೇವೆ ಮಾಡುವ ಕ್ಷೇತ್ರದ ಅಭಿವೃದ್ಧಿ ಪಡಿಸುವ ಹೊಣೆ ನನ್ನ ಮೇಲಿದೆ. ದಯವಿಟ್ಟು ನಿಮ್ಮ ಸಮಸ್ಯೆ ಏನೇ ಇದ್ದರೂ ನಮ್ಮ ಮನೆಗೆ ಬನ್ನಿ ಅದನ್ನು ಬಗೆಹರಿಸಲು ಪ್ರಾಮಾಣಿಕ ಪ್ರಯತ್ನ ಪಡುತ್ತೇನೆ. ಪಕ್ಷ ಕಟ್ಟುವ ಕೆಲಸ ಮಾಡುತ್ತೇನೆ ಮತ್ತು ಕುಮಟಾ ಪುರಸಭಾ ಚುನಾವಣೆಯಲ್ಲಿ ನಮ್ಮ ಪಕ್ಷದ ಹೆಚ್ಚಿನ ಅಭ್ಯರ್ಥಿಗಳನ್ನು ಗೆಲ್ಲಿಸಿ ನಮ್ಮ ಪಕ್ಷ ಅಧಿಕಾರಕ್ಕೆ ಏರುವಂತೆ ಎಲ್ಲ ಮುಖಂಡರ ಸಹಕಾರದಿಂದ ಮಾಡುತ್ತೇನೆ ಎಂದು ಘೋಷಿಸಿದರು.ಹೆಚ್ಚಿನ ಸಂಖ್ಯೆಯಲ್ಲಿ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು. ಸೀತಾರಾಮ ಗುನಗ, ಯೋಗೀಶ್ ಪಟಗಾರ ನಿರೂಪಣೆ ಮಾಡಿದರು.