ಜೇಮ್ಸ್ ಬಾಂಡ್ ಎಂದಾಕ್ಷಣ ತಟ್ ಅಂಥ ನೆನಪಿಗೆ ಬರೋದು ಅವರ ಆಕ್ಷನ್ ಚಿತ್ರಗಳು!. ಅಂದ ಹಾಗೆ ನೀವು ಜೇಮ್ಸ್ ಬಾಂಡ್ ಅಭಿಮಾನಿಯೇ? ಜೇಮ್ಸ್ ಬಾಂಡ್ ಹಾಲಿವುಡ್ ಆಕ್ಷನ್ ಚಿತ್ರಗಳನ್ನು ಯಾರು ತಾನೇ ಇಷ್ಟಪಡಲಾರರು? ವಿಲಕ್ಷಣ ಕ್ಷಣಗಳಲ್ಲಿ, ಹಾಟ್ ಹಾಟ್ ಹುಡುಗಿಯರ ನಡುವೆ ಬಾಂಡ್ ಕಾರುಗಳು ಅಷ್ಟೇ ಪ್ರಾಮುಖ್ಯತೆ ಗಿಟ್ಟಿಸುತ್ತವೆ.

ಇದೇ ಕಾರಣಕ್ಕೆ ಜೇಮ್ಸ್ ಬಾಂಡ್ ಬಳಕೆ ಮಾಡುತ್ತಿದ್ದ ಬಹುತೇಕ ಕಾರು ಮಾದರಿಗಳು ಅಂದಿಗೂ ಹಿಟ್ ಇಂದಿಗೂ ಹಿಟ್ ಅಂದ್ರೆ ತಪ್ಪಾಗುವುದಿಲ್ಲ. ಹೀಗಾಗಿಯೇ ಜೇಮ್ಸ್ ಬಾಂಡ್ ನಟಿಸಿರುವ ಬಹುತೇಕ ಚಿತ್ರಗಳಲ್ಲಿ ಅತಿ ಹೆಚ್ಚು ಬಳಕೆಯಾಗಿದ್ದ ಕಾರು ಮಾದರಿಯೊಂದು ದುಬಾರಿ ಬೆಲೆಗೆ ಹರಾಜಿಗಿಡಲಾಗಿದ್ದು, ಆ ವಿಶೇಷ ಕಾರಿನ ಬೆಲೆ ಕೇವಲ 14 ಕೋಟಿ ಅಷ್ಟೇ.

ಹೌದು, ಜೇಮ್ಸ್ ಬಾಂಡ್ ನಟಿಸಿರುವ ಗೋಲ್ಡ್‌ಫಿಂಗರ್, ಥಂಡರ್‌ಬಾಲ್, ಗೋಲ್ಡನ್‌ಐ, ಟುಮೊರೊ ನೆವರ್ ಡೈಸ್ ಚಿತ್ರಗಳಲ್ಲಿ ಹೆಚ್ಚಾಗಿ ಕಾಣಿಸಿಕೊಂಡಿದ್ದ ಆಸ್ಟನ್ ಮಾರ್ಟಿನ್ ಡಿಬಿ5 ಕಾರನ್ನು ಹರಾಜಿಗಿಡಲಾಗಿದ್ದು, ಮುಂದಿನ ತಿಂಗಳು 13ಕ್ಕೆ ಈ ಕಾರುನ್ನು ಖರೀದಿ ಅವಕಾಶ ನೀಡಲಾಗುತ್ತಿದೆ.

ಮೆಟಾಲಿಕ್ ಗ್ರೇ ಬಣ್ಣವನ್ನು ಹೊಂದಿರುವ ಆಸ್ಟನ್ ಮಾರ್ಟಿನ್ ಡಿಬಿ5 ಕಾರುಗಳು ಜೇಮ್ಸ್ ಬಾಂಡ್ ನೆಚ್ಚಿನ ಕಾರು ಮಾದರಿಯಾಗಿದ್ದು, 1964ರಲ್ಲಿ ಬಿಡುಗಡೆಯಾಗಿದ್ದ ಗೋಲ್ಡ್ ಫಿಂಗರ್‌ನಿಂದ ಹಿಡಿದು 1995ರಲ್ಲಿ ತೆರೆಕಂಡಿದ್ದ ಗೋಲ್ಡನ್ ಐ ಚಿತ್ರದಲ್ಲೂ ಈ ವಿಶೇಷ ಸೆಡಾನ್ ಕಾರು ಬಳಕೆಯಾಗಿತ್ತು.

RELATED ARTICLES  ಲಾರಿಯಲ್ಲಿ ಸಾಗಿಸುತ್ತಿದ್ದ ಗೋವಾ ಮದ್ಯ ವಶಕ್ಕೆ.

ಇದಲ್ಲದೇ ಹಾಲಿವುಡ್ ನಟ ಜೇಮ್ಸ್ ಬಾಂಡ್ ಅವರು ಆಸ್ಟನ್ ಮಾರ್ಟಿನ್ ಸಂಸ್ಥೆಯ ಡಿಬಿ5 ಸರಣಿಯ ಮತ್ತೆರಡು ಐಷಾರಾಮಿ ಕಾರುಗಳನ್ನು ಸಹ ಆಕ್ಷನ್ ಚಿತ್ರಗಳಲ್ಲಿ ಮಿಂಚಿದ್ದು, ಅವುಗಳನ್ನು ಈಗಾಗಲೇ ದುಬಾರಿ ಬೆಲೆಗೆ ಹರಾಜು ಮಾಡಲಾಗಿದೆ.

2001ರಲ್ಲಿ ಹರಾಜು ಮಾಡಲಾಗಿದ್ದ ಡಿಬಿ5 ಸರಣಿ ಮೊದಲ ಕಾರು 5 ಕೋಟಿಗೆ ಮಾರಾಟಗೊಳ್ಳುವ ಮೂಲಕ ಭಾರೀ ಚರ್ಚೆಗೆ ಕಾರಣವಾಗಿತ್ತು. ಇದೇ ಕಾರಣಕ್ಕೆ 2018ರಲ್ಲಿ ಹರಾಜು ಮಾಡಲಾಡಲಾಗುತ್ತಿರುವ ಜೇಮ್ಸ್ ಬಾಂಡ್ ಅಚ್ಚುಮೆಚ್ಚಿನ ಕಾರಿನ ಮೇಲೆ ಎಲ್ಲರೂ ಕಣ್ಣು.

ಇದೀಗ ಅತಿಹೆಚ್ಚು ಜನಪ್ರಿಯ ಜೆಬಿ 007 ನೋಂದಣಿಯ ಕಾರುನ್ನು ಹರಾಜು ಮಾಡಲಾಗುತ್ತಿದ್ದು, ಗೋಲ್ಡನ್ ಐ ಚಿತ್ರದಲ್ಲಿರುವ ಫೆರಾರಿ 355 ಮತ್ತು ಆಸ್ಟನ್ ಮಾರ್ಟಿನ್ ಡಿಬಿ5 ಕಾರುಗಳ ನಡುವಿನ ಕಾರ್ ರೇಸ್‌ ಅನ್ನು ವೀಕ್ಷಣೆ ಮಾಡಿದಲ್ಲಿ ಜೆಬಿ ಅಭಿರುಚಿ ಹೇಗಿತ್ತು ಎಂಬುವುದು ಅವರ ಅಭಿಮಾನಿ ಬಲ್ಲರು.

RELATED ARTICLES  ಸಾವಿನ ದವಡೆಯಲ್ಲಿದ್ದ ಆತ ತನ್ನ ಪ್ರೇಯಸಿಗೆ ಬರೆದ ಪತ್ರವನ್ನು ಓದಿದರೆ ತಪ್ಪದೇ ಕಣ್ಣೀರಿಡಬೇಕಾಗುತ್ತದೆ…!

ಕಾರಿನ ಎಂಜಿನ್ ಸಾಮರ್ಥ್ಯ
4.0-ಲೀಟರ್ ಸ್ಟ್ರೈಟ್ ಸಿಕ್ಸ್ ಎಂಜಿನ್ ಹೊಂದಿದ್ದ ಆಸ್ಟನ್ ಮಾರ್ಟಿನ್ ಡಿಬಿ5 ಕಾರುಗಳು 285-ಬಿಎಚ್‌ಪಿ ಮತ್ತು 380-ಎನ್‌ಎಂ ಟಾರ್ಕ್ ಉತ್ಪಾದನಾ ಕೌಶಲ್ಯ ಹೊಂದಿದ್ದವು. ಜೊತೆಗೆ 7.1 ಸೇಕೆಂಡುಗಳಲ್ಲಿ ಸೊನ್ನೆಯಿಂದ ನೂರು ಕಿ.ಮೀ ವೇಗ ಪಡೆಯುತ್ತಿದ್ದ ಈ ಕಾರುಗಳು ಗಂಟೆಗೆ 228 ಕಿ.ಮೀ ಟಾಪ್ ತಮ್ಮದಾಗಿಸಿಕೊಂಡಿದ್ದವು.

ಸದ್ಯ ಹರಾಜಿಗಿಡಲಾಗಿರುವ ಆಸ್ಟನ್ ಮಾರ್ಟಿನ್ ಡಿಬಿ5 ಕಾರಿನ ಬೆಲೆಯನ್ನು 2 ಬಿಲಿಯನ್‌ಗೆ ನಿಗದಿಪಡಿಸಲಾಗಿದ್ದು, ಇದು ಹರಾಜು ಪ್ರಕ್ರಿಯೆ ಸಂದರ್ಭದಲ್ಲಿ ಕಾರಿನ ದುಪ್ಪಟ್ಟಾಗುವ ಸಾಧ್ಯತೆಗಳಿವೆ. ಇದಕ್ಕೆ ಕಾರಣ ಜೇಮ್ಸ್ ಬಾಂಡ್ ಬಳಸಿದ ಕಾರುಗಳನ್ನು ಖರೀದಿಸಲು ಸಾವಿರಾರು ಅಗರ್ಭ ಶ್ರೀಮಂತರೂ ತುದಿಗಾಲಿನ ಮೇಲೆ ನಿಂತಿದ್ದಾರೆ.

ಒಟ್ಟಿನಲ್ಲಿ ಹಲವು ವಿಶೇಷತೆಗಳಿಗೆ ಕಾರಣವಾಗಿರುವ ಜೇಮ್ಸ್ ಬಾಂಡ್ ನೆಚ್ಚಿನ ಆಸ್ಟನ್ ಮಾರ್ಟಿನ್ ಡಿಬಿ5 ಸರಣಿ ಕಾರು ಮಾರಾಟಕ್ಕಿದ್ದು, ಇದು ಅವರ ಅಭಿಮಾನಿಗಳಲ್ಲಿ ಸುವರ್ಣಾವಕಾಶ ಎಂದೇ ಹೇಳಬಹುದು. ಹೀಗಾಗಿ ಐತಿಹಾಸಿಕ ಹಿನ್ನೆಲೆ ಹೊಂದಿರುವ ಡಿಬಿ5 ಕಾರು ಹರಾಜಿನಲ್ಲಿ ಎಷ್ಟರ ಮಟ್ಟಿಗೆ ಬೆಲೆ ಪಡೆದುಕೊಳ್ಳುತ್ತೆ ಎನ್ನುವುದೇ ಸದ್ಯದ ಕುತೂಹಲ ಸಂಗತಿಯಾಗಿದೆ.

ಡ್ರೈವ್ ಸ್ಪಾರ್ಕ ಕೃಪೆ.