ಕುಮಟಾ: ನನ್ನ ಕನಸಿನ ಹೊನ್ನಾವರ ಹಾಗೂ ಯುವಾ ಬ್ರಿಗೇಡಿನ ಸದಸ್ಯರು ಇಂದು ಕುಮಟಾ-ಹೊನ್ನಾವರದ ಶಾಸಕರಾದ ಶ್ರೀ ದಿನಕರ್ ಕೆ. ಶೆಟ್ಟಿಯವರನ್ನು ಭೇಟಿಯಾಗಿ ಹೊನ್ನಾವರ ಬಸ್ ಸ್ಟ್ಯಾಂಡ್ ಅಧಿಕಾರಿಗಳು ಹಲವು ವರ್ಷದಿಂದ ಅನುಸರಿಸಿ ಬರುತ್ತಿರುವ ಸಾರಿಗೆಯ ನಿಯಮ ಬಾಹಿರ ಚಟುವಟಿಕೆಯನ್ನು ಗಮನಕ್ಕೆ ತಂದು ಅದಕ್ಕೆ ಶಾಸಕರಿಂದ ಪರಿಹಾರವನ್ನು ದೊರಕಿಸಿಕೊಡುವಲ್ಲಿ ಯಶಸ್ವಿಯಾಗಿದ್ದಾರೆ.

ಹೌದು, ಬಹುದಿನದಿಂದ ಹೊನ್ನಾವರದ ಜನತೆಯು ರಾತ್ರಿ ೮:೦೦ ರ ನಂತರ ಯಾವುದೇ ದೂರದ ಊರಿಗೆ ತೆರಳುವ ಸಾರಿಗೆ ಬಸ್ಸ್ ಹೊನ್ನಾವರದ ಬಸ್ ಸ್ಟ್ಯಾಂಡ್ ಗೆ ಹೊಗದೆ ಶರಾವತಿ ವೃತ್ತದ ಹತ್ತಿರ ನಿಂತು ಪ್ರಯಾಣಿಕರನ್ನು ಹತ್ತಿಸುವುದು ಹಾಗೂ ಇಳಿಸುವುದನ್ನೇ ರೂಢಿ ಮಾಡಿ ಬಂದಿದ್ದರು. ಮಂಗಳೂರಿನಿಂದ ರೋಣ, ಗದಗ, ಗಜೆಂದ್ರಘಡ, ಹುಬ್ಬಳ್ಳಿ ಧಾರವಾಡ ಮಾರ್ಗವಾಗಿ ಹೊಗುವ ಬಸ್ಸಿಗೆ ರಾತ್ರಿ ೨ ರ ವರೆಗ ಕಾಯುತ್ತಾ ನಿಲ್ಲುತ್ತಿದ್ದ ಪ್ರಯಾಣಿಕರಲ್ಲಿ ಹೆಂಗಸರು, ಏಳೆಯ ಕಂದಮ್ಮಗಳು, ಹಾಗೂ ಮಕ್ಕಳು ಇರುತ್ತಿದ್ದರು. ಕುಳಿತು ಕೊಳ್ಳಲು ಕಿಂಚಿತ್ತು ಸೌಲಭ್ಯವಿಲ್ಲದ ಜಾಗದಲ್ಲಿ ಇವರುಗಳು ಬಸ್ಸಿಗೆ ಕಾಯುತ್ತಾ ನಿಲ್ಲುವುದನ್ನು ಗಮನಿಸಿದ ನನ್ನ ಕನಸಿನ ಹೊನ್ನಾವರ ತಂಡ ಇಂದು ಶಾಸಕರಿಗೆ ಭೇಟಿ ಇಟ್ಟು ಸಮಸ್ಯೆಯ ಬಗ್ಗೆ ವಿವರಿಸಿದಾಗ ತಕ್ಷಣ ಶಾಸಕರು ಶಿರಸಿ ವಲಯ ಸಾರಿಗೆ ವ್ಯವಸ್ಥಾಪಕರಿಗೆ ಕ್ರಮ ಕೈಗೊಳ್ಳಲು ಸೂಚಿಸಿ, ಹೊನ್ನಾವರದ ಬಸ್ಸ್ ಸ್ಟ್ಯಾಂಡಿಗೆ ಎಲ್ಲಾ ಬಸ್ಸು ಖಡ್ಢಾಯವಾಗಿ ಹೊಗಲು ಸೂಚಿಸಲಾಯಿತು.

RELATED ARTICLES  ಜಪಾನಿನಲ್ಲಿರುವ ವಿಜ್ಞಾನಿಯಿಂದ ತವರಿನ ಶಾಲೆಗೆ ಕೊಡುಗೆ

ನನ್ನ ಕನಸಿನ ಕರ್ನಾಟಕದ ಸದಸ್ಯರಾದ ಗೌರವ ಕಲ್ಯಾಣಪುರ್, ರಾಘವ ಮೇಸ್ತ ಹಾಗೂ ಯುವ ಬ್ರಿಗೇಡ್ ನ ಗಜಾನನ ಶೇಟ್, ರಾಮದಾಸ್ ಹಳದೀಪುರ ಹಾಗೂ ಚೇತಕ್ ಶೇಟ್ ಈ ಸಂದರ್ಭದಲ್ಲಿ ಹಾಜರಿದ್ದು.

RELATED ARTICLES  ಪೆಟ್ರೋಲ್ ಬಂಕ್ ಗೆ ತಿರುಗುತ್ತಿದ್ದ ಇನ್ನೋವಾ ಕಾರಿಗೆ ಹಿಂದಿನಿಂದ ಬಂದು ಬೈಕ್ ಡಿಕ್ಕಿ : ಸವಾರರು ಆಸ್ಪತ್ರೆಗೆ ದಾಖಲು.