ಕುಮಟಾ : ತಾಲೂಕಿನ ಹೆಗಡೆಯ ಗಾಂಧಿ ನಗರದ ನಿವಾಸಿ ಅದ ಗಣೇಶ ಮುಕ್ರಿಯವರ ಮಗನಾದ ಗಣೇಶ (ಗೌರೀಶ) ನಿನ್ನೆ ಮಧ್ಯಾಹ್ನ ೨:೦೦ ಗಂಟೆ ಇಂದ ನಾಪತ್ತೆಯಾಗಿದ್ದ ಎಂದು ಹೇಳಲಾಗಿತ್ತು. ಈತನ ಪತ್ತೆಗೆ ಪ್ರಯತ್ನ ನಡೆಸಲಾಗಿತ್ತು.

ಶನಿವಾರ ಶಾಲೆಯಿಂದ ಬಂದ ಗಣೇಶ ಮುಕ್ರಿ ಗೆಳೆಯರ ಜೊತೆ ಆಡಲು ಹೋದ ಗಣೇಶ ಪುನಃ ಮನೆಗೆ ಬರಲಿಲ್ಲ ಮನೆಯವರು ಹಾಗೂ ಊರಿನ ಗ್ರಾಮಸ್ಥರು ಊರಿನ ಎಲ್ಲಾ ಭಾಗದಲ್ಲು ಹುಡುಕಾಟ ನಡೆಸಿದರು. ಎಲ್ಲೂ ಸಿಗದ ಗಣೇಶ ಬಗ್ಗೆ ಕೊನೆಯಲ್ಲಿ ಪೋಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಲಾಗಿತ್ತು.

RELATED ARTICLES  ತಾಲೂಕಾ ಮಟ್ಟದ ಪ್ರತಿಭಾ ಕಾರಂಜಿ ವ್ಯವಸ್ಥೆಗೆ ಪಾಲಕರ ಆಕ್ರೋಶ: ಸ್ಥಳದಲ್ಲಿ ಇರದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಬಗ್ಗೆ ಅಸಮಾಧಾನ!

ಆದರೆ ಇಂದು ಮಳೆಗಾಲದಲ್ಲಿ ಮರೆಯಲೇ ಅಗದ ಘಟನೆ ನಡೆದಿದೆ. ಹೌದು, ಆ ಹುಡುಗ ಶವವಾಗಿ ಪತ್ತೆಯಾಗಿದ್ದಾನೆ. ಹುಡುಗ ಗೆಳೆಯರ ಜೊತೆ ಮಳೆಗಾಲದಲ್ಲಿ ಗುಳ್ಳೆಗಳು ತರಲು ನೀರಿಗೆ ಇಳಿದಾಗ ಈತನು ಮುಳುಗಿ ಮೃತಪಟ್ಟಿದ್ದಾನೆ ಎಂಬ ಬಗ್ಗೆ ಶಂಕಿಸಲಾಗಿದೆ. ಜೊತೆಯಲ್ಲಿ ಹೋದ ಗೆಳೆಯರು ಹೆದರಿಕೊಂಡು ಸುಮ್ಮನೆ ಇದ್ದರೂ ಆದರೆ ಇವತ್ತು ಬೆಳಿಗ್ಗೆಯಿಂದ ಕುಮಟಾ ಪೊಲೀಸ್ ಠಾಣೆಯ ಪಿಎಸ್ ಐ ಹಾಗೂ ಸಿಪಿಐ ಹಾಗೂ ಶಿಕ್ಷಣ ಇಲಾಖೆಯ ಅಧಿಕಾರಿಗಳು ಮತ್ತು ಊರಿನ ಗ್ರಾಮಸ್ಥರು ಹುಡುಕಾಟ ನಡೆಸುವಾಗ ಒಂದು ಉಪ್ಪುನೀರಿನಿಂದ ಕುಡಿದ ಚಿಕ್ಕ ಕೆರೆಯಲ್ಲಿ ಬಾಲಕ ಗಣೇಶ ಶವ ತೇಲುತ್ತಾ ಇರುವುದು ಕಂಡುಬಂದಿದೆ ಎನ್ನಲಾಗಿದೆ. ಕುಮಟಾ ಪೋಲೀಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ ತನಿಖೆ ಪ್ರಗತಿಯಲ್ಲಿದೆ.

RELATED ARTICLES  "ಕೊಂಡು ಓದುವ ಪ್ರವೃತ್ತಿಯೇ ಸಾಹಿತ್ಯದ ಬೆಳವಣಿಗೆಗೆ ನಿಜವಾದ ಪ್ರೇರಣೆ ". - ಅರ್ತಿಕಜೆ.