ಅಂಕೋಲಾ: ಲಾರಿ ಮತ್ತು ಗದಗದಿಂದ ಗೋಕರ್ಣಕ್ಕೆ ಬರುತ್ತಿದ್ದ ಟೆಂಪೋ ಟ್ರಾವೆಲರ್ ನಡುವೆ ಡಿಕ್ಕಿ ಸಂಭವಿಸಿದೆ. ಈ ಪರಿಣಾಮ ಮೂವರು ಪ್ರಯಾಣಿಕರು ಗಂಭೀರ ಗಾಯಗೊಂಡಿರುವ ಘಟನೆ ಅಂಕೋಲಾದ ಸುಂಕಸಾಳದಲ್ಲಿ ಸಂಭವಿಸಿದೆ.

RELATED ARTICLES  ಮರಣ ಹೊಂದಿದ ಗೋವನ್ನು ಪೈಶಾಚಿಕವಾಗಿ ಎಳೆದುಕೊಂಡು ಹೋದ ವಿಡಿಯೋ ವೈರಲ್ : ಸಾರ್ವಜನಿಕರ ಆಕ್ರೋಶ.

15 ಜನ ಪ್ರಯಾಣಿಕರಿದ್ದ ಟೆಂಪೋ ಟ್ರಾವೆಲರ್ ಗದಗದಿಂದ ಗೋಕರ್ಣಕ್ಕೆ ಬರುತ್ತಿತ್ತು. ಆ ಟ್ರಾವೆಲರ್ ಮತ್ತು ಲಾರಿ ನಡುವೆ ಸಂಭವಿಸಿದ ಅಪಘಾತದಲ್ಲಿ ಟೆಂಪೋದಲ್ಲಿದ್ದ ಬಸವರಾಜ್​​ ಅಣ್ಣಿಗೇರಿ, ಕೃಷ್ಣ ಅಣ್ಣಿಗೇರಿ ಮತ್ತು ಶಕುಂತಲಾ ಗಂಭೀರ ಗಾಯಗೊಂಡಿದ್ದಾರೆ ಎನ್ನಲಾಗಿದೆ. ಗಾಯಗೊಂಡರವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಈ ಕುರಿತು ಅಂಕೋಲಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES  "ಗೋಕರ್ಣ ಗೌರವ" ಕಾರ್ಯಕ್ರಮದಲ್ಲಿ ಭಾಗವಹಿಸಿದ ಶ್ರೀ ಶ್ರೀ ವೀರಭದ್ರೇಶ್ವರ ಸ್ವಾಮಿಗಳು.