ಶಿರಸಿ: ಸಹಕಾರಿ ಕ್ಷೇತ್ರದಲ್ಲಿ ಸದಸ್ಯರ ಅಗತ್ಯಗಳಿಗೆ ಅನುಗುಣವಾಗಿ ವಿನೂತನ ಸೇವೆ ಸೌಲಭ್ಯಗಳನ್ನು ಒದಗಿಸುತ್ತ ಬಂದಿರುವ ದಿ ತೋಟಗಾರ್ಸ್ ಕೋ-ಆಪರೇಟಿವ್ ಸೇಲ್ ಸೊಸೈಟಿ ಲಿ., ಶಿರಸಿ(ಉ.ಕ.) ಇದೀಗ ಸ್ವಂತ ಬ್ರ್ಯಾಂಡ್‍ನಲ್ಲಿ ಮೈಲುತುತ್ತವನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.

“ಟಿ.ಎಸ್.ಎಸ್. ಮೈಲುತುತ್ತ” ಹೆಸರಿನಲ್ಲಿ ಮಾರುಕಟ್ಟೆಗೆ ಬಂದಿರುವ ಈ ಉತ್ಪನ್ನಕ್ಕೆ ಪ್ರಾರಂಭಿಕ ಕೊಡುಗೆಯಾಗಿ 2 ಕೆ.ಜಿ. ಮೈಲುತುತ್ತ ಖರೀದಿಗೆ 1 ಕೆ.ಜಿ. ಕೃಷಿ ಸುಣ್ಣವನ್ನು ಉಚಿತವಾಗಿ ನೀಡಲಾಗುತ್ತಿದೆ. ಟಿ.ಎಸ್.ಎಸ್. ಮೈಲುತುತ್ತವು ಉತ್ತಮ ಗುಣಮಟ್ಟದ್ದಾಗಿದ್ದು, ಕೊಳೆರೋಗ ನಿಯಂತ್ರಣದಲ್ಲಿ ಪರಿಣಾಮಕಾರಿ ಫಲಿತಾಂಶ ನೀಡುತ್ತದೆ.
ಈಗಾಗಲೇ ಸ್ವಂತ ಬ್ರಾಂಡ್‍ನಲ್ಲಿ ಅನೇಕ ಉತ್ಪನ್ನಗಳನ್ನು ಮಾರುಕಟ್ಟೆಗೆ ಟಿ.ಎಸ್.ಎಸ್. ತಂದಿದೆ. ಟಿ.ಎಸ್.ಎಸ್. ಬೋರ್ಡೋ ಸುಣ್ಣ, ಟಿ.ಎಸ್.ಎಸ್. ಧಾರಾ ಪಶುಆಹಾರ, ಟಿ.ಎಸ್.ಎಸ್. ಗ್ರೀನ್ ಗೋಲ್ಡ್ ಸಾವಯುವಗೊಬ್ಬರ, ಟಿ.ಎಸ್.ಎಸ್. ಚಹಾಪುಡಿ, ಇತ್ಯಾದಿ ಬ್ರಾಂಡ್‍ಗಳಲ್ಲಿ ಗ್ರಾಹಕ ಉತ್ಪನ್ನಗಳನ್ನು ಸಂಘವು ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದು, ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ದೊರೆತಿದೆ.

RELATED ARTICLES  ಕೊಂಕಣದಲ್ಲಿ ‘ಸಜ್ಜನಿ’ ಹಾಗೂ ‘ಶಿಷ್ಯವೇತನ’ ಪುರಸ್ಕಾರ ಸಮಾರಂಭ

ಮುಂದಿನ ದಿನಗಳಲ್ಲಿ ಟಿ.ಎಸ್.ಎಸ್. ಅಗರಬತ್ತಿ ಮತ್ತಿತರ ಉತ್ಪನ್ನಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲಿದ್ದೇವೆ ಎಂದು ಟಿ.ಎಸ್.ಎಸ್.ನ ಆಡಳಿತ ಮಂಡಳಿಯು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

RELATED ARTICLES  ದೀಪಕ್‌ ಹತ್ಯೆ: "ಕಿಲ್ಲರ್‌ ಕಾಂಗ್ರೆಸ್" ಎಂದು ಟ್ವೀಟ್‌ ಮಾಡಿರುವ ಸಚಿವ ಅನಂತ್‌ ಕುಮಾರ್‌ ಹೆಗಡೆ