IMG 20170703 WA0016
ಮುಳ್ಳೇರಿಯಾ : ಹವ್ಯಕ ಮಂಡಲದ ಮಾಸಿಕ ಸಭೆಯು ಶ್ರೀ ರಾಮಚಂದ್ರಾಪುರ ಮಠದ ಅಂಗ ಸಂಸ್ಥೆಯಾದ ಸುಳ್ಯ ವಲಯದ ಅರಂಬೂರು ಸರಳಿಕುಂಜ ಧರ್ಮಾರಣ್ಯದಲ್ಲಿ ದಿನಾಂಕ 02-06-2017 ಆದಿತ್ಯವಾರದಂದು ಬೆಳಗ್ಗೆ ಜರಗಿತು
* ಸಭೆಯು ಧ್ವಜಾರೋಹಣ, ಶಂಖನಾದ, ಗುರುವಂದನೆಯೊಂದಿಗೆ ಪ್ರೋ ಶ್ರೀ ಕೃಷ್ಣ ಭಟ್ ರವರ ಅಧ್ಯಕ್ಷತೆ ಯಲ್ಲಿ ಪ್ರಾರಂಭ ವಾಯಿತು. ಮಂಡಲ ಕಾರ್ಯದರ್ಶಿ ಬಾಲ ಸುಬ್ರಹ್ಮಣ್ಯ ಸರ್ಪಮಲೆ ಪ್ರಾಸ್ಥಾವಿಕ, ಗತಸಭಾವರದಿ ನೀಡಿ ಸಭಾ ನಿರ್ವಹಣೆ ಮಾಡಿದರು.
* ವಿಶೇಷ ಅಭ್ಯಾಗತರಾಗಿ ಮಹಾ ಮಂಡಲದ ಜೀವಿಕ ವಿಭಾಗದ ಪ್ರಧಾನರಾದ ಬಾಲಸುಬ್ರಹ್ಮಣ್ಯ ಭಟ್ ಮತ್ತು ಬೆಂಗಳೂರು ಮಂಡಲ ಕಾರ್ಯದರ್ಶಿ ಶ್ರೀಕಾಂತ ಹೆಗ್ಡೆ ಅವರು ಭಾಗವಹಿಸಿದರು. ಬಾಲಸುಬ್ರಹ್ಮಣ್ಯ ಭಟ್ ಅವರು ಸಂಘಟನಾತ್ಮಕ ವಿಷಯ ಮತ್ತು ಜೀವಿಕಾ ವಿಭಾಗದ ಕಾರ್ಯಯೋಜನೆ ಬಗ್ಗೆ ಸಮಗ್ರಮಾಹಿತಿಗಳನ್ನಿತ್ತು ಡಾ ಕೃಷ್ಣ ಮೂರ್ತಿ ಅವರ ಬಗ್ಗೆ ಪ್ರಶಸ್ತಿ ವಿಚಾರವಾಗಿ ವಿವರಣೆಗಳನ್ನಿತ್ತರು. ಶ್ರೀಕಾಂತ ಹೆಗ್ಡೆ ಅಭಯಾಕ್ಷರ ಅಭಿಯಾನ ಅಭಯಚಾತುರ್ಮಾಸದ ಬಗ್ಗೆ ವಿವರಣೆಗಳನ್ನಿತ್ತರು.
* ಶ್ರೀ ರಾಮಚಂದ್ರಾಪುರ ಮಠದ ಕಾಮದುಘಾ ಯೋಜನೆಯ ಸಂಚಾಲಕರಾದ ಡಾ // ವೈ ವಿ ಕೃಷ್ಣಮೂರ್ತಿ ಅವರಿಗೆ ಅನವರತ ಗೋಸೇವೆಯನ್ನು ಗುರುತಿಸಿ ವಿರಾಟ್ ಹಿಂದೂಸ್ತಾನ್ ಸಂಘಂ ಸಂಘಟನೆಯು ದೇಶೀಯ ಮಟ್ಟದ ವಿಶೇಷ ಗೋಸೇವಾ ಪ್ರಶಸ್ತಿ ನೀಡಿದ್ದು ಆಪ್ರಯುಕ್ತ ಶ್ರೀಯುತರನ್ನು ಮಂಡಲವತಿಯಿಂದ ಗೌರವಿಸಿ ಸನ್ಮಾನಿಸಲಾಯಿತು.
* ಗೋಕರ್ಣ ಅಶೋಕೆಯಲ್ಲಿ ನಡೆದ ಶ್ರೀ ಮಲ್ಲಿಕಾರ್ಜುನ ದೇವರ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಕಾರ್ಯಕ್ರಮದಲ್ಲಿ ತಾಮ್ರ ಕಲಶ ಮತ್ತು ರಜತ ಕಲಶ ಸೇವೆ ಮಾಡಿಸಿದವರಿಗೆ ಪ್ರಸಾದವನ್ನು ವಲಯದವರ ಮೂಲಕ ವಿತರಿಸಲಾಯಿತು.
* ಶ್ರೀ ಗುರುಗಳು ಆಶೀರ್ವದಿಸಿ ಅನುಗ್ರಹಿಸಿ ನೀಡಿರುವ ರುದ್ರಾಕ್ಷಿಯನ್ನು ಎಲ್ಲಾ ವಲಯದವರಿಗೆ ಹಸ್ಥಾಂತರಿಸಲಾಯಿತು ಹಾಗೂ ರುದ್ರಾಕ್ಷಿಯನ್ನು ವ್ಯಾಸ ಮಂತ್ರಾಕ್ಷತೆಯೊಂದಿಗೆ ಪ್ರತಿ ಮನೆಗಳಿಗೆ ತಲುಪಿಸಲು ತೀರ್ಮಾನಿಸಲಾಯಿತು.
* ಉಪಾಧ್ಯಕ್ಷ ಕುಮಾರ್ ಪೈಸಾರಿ, ಕೋಶಾಧಿಕಾರಿ ಸುಬ್ರಹ್ಮಣ್ಯ ಭಟ್ ಗಬ್ಬಲಡ್ಕ, ಮಂಡಲ ಗುರಿಕ್ಕಾರ ಮೊಗ್ರ ಸತ್ಯನಾರಾಯಣ ಭಟ್ , ಮೂಲಮಠ ಅಶೋಕೆಯ ಪ್ರತಿನಿಧಿ ಯಂ ಯನ್ ಹರೀಶ್ ಶುಂಠಿಕೊಪ್ಪ, ಮಂಡಲ ಪದಾಧಿಕಾರಿಗಳು ಹಾಗೂ ವಲಯ ಪದಾಧಿಕಾರಿಗಳು ಮೊದಲಾದವರು ಸಭೆಯಲ್ಲಿ ಪಾಲ್ಗೊಂಡರು.
* ಸುಳ್ಯ ಹವ್ಯಕ ವಲಯದ ಪದಾಧಿಕಾರಿಗಳು, ಗುರಿಕ್ಕಾರರು ಹಾಗು ಧರ್ಮಾರಣ್ಯದ ಅಭಿವೃದ್ಧಿ ಸಮಿತಿಯ ಪದಾಧಿಕಾರಿಗಳು ಸಭೆಯನ್ನು ಯಶಸ್ಸು ಗೊಳಿಸಲು ಸಹಕರಿಸಿದರು.

RELATED ARTICLES  ನಿಮ್ಮ ರಾಶಿಯ ಪ್ರಕಾರ ನಿಮ್ಮ ಇಂದಿನ ದಿನ ಹೇಗಿರಲಿದೆ ಗೊತ್ತಾ? ದಿನಾಂಕ 24-11-2018 ರ ರಾಶಿ ಭವಿಷ್ಯ ಇಲ್ಲಿದೆ.