ಟೊಮೆಟೊ ಪೇಸ್ಟ್ ತಯಾರಿಸಿ ಅದಕ್ಕೆ ಸ್ವಲ್ಪ ಓಟ್ ಮೀಲ್ಸ್ ಮತ್ತು ಒಂದು ಚಮಚ ಮೊಸರು ಸೇರಿಸಬೇಕು. ನಂತರ ಚೆನ್ನಾಗಿ ಮಿಶ್ರ ಮಾಡಿ ಮುಖಕ್ಕೆ ಹಚ್ಚಿ 2-3 ನಿಮಿಷ ಉಜ್ಜಿ ಹಾಗೇ ಬಿಡಬೇಕು. ನಂತರ ತಣ್ಣೀರಿನಿಂದ ಮುಖ ತೊಳೆಯಿರಿ. ಈ ರೀತಿ ಮಾಡಿ ಬಿಸಿಲಿನಿಂದ ಮುಖ ಕಪ್ಪಾಗಿದ್ದರೆ ಹೋಗಲಾಡಿಸಿ ಹೊಳೆಯುವ ಮುಖವನ್ನು ಪಡೆಯಬಹುದು.

ಟೊಮಟೊ ಪೇಸ್ಟ್ ಮಾಡಿ ನಿಂಬೆ ರಸ ಹಾಕಿ ಮಿಶ್ರ ಮಾಡಿ ಮುಖಕ್ಕೆ ಹಚ್ಚಿ 10 ನಿಮಿಷ ಬಿಡಿ. ನಂತರ ತಣ್ಣೀರಿನಿಂದ ಅಥವಾ ಹದ ಬಿಸಿ ನೀರಿನಿಂದ ಮುಖ ತೊಳೆಯಿರಿ.ಈ ರೀತಿ ದಿನಾ ಮೊಡವೆ ಕಡಿಮೆಯಾಗುತ್ತದೆ.

RELATED ARTICLES  ಈ ಹಣ್ಣುಗಳನ್ನು ಮಿಕ್ಸ್ ಮಾಡುವ ಮುನ್ನ… ಅದರಿಂದಾಗುವ ಹಾನಿಯ ಬಗ್ಗೆ ತಿಳಿದುಕೊಳ್ಳಿ!

ಟೊಮೆಟೊ ಮತ್ತು ಮುಲ್ತಾನಿ ಮಿಟ್ಟಿ ಮಿಶ್ರ ಮಾಡಿ ಹಚ್ಚಿದರೆ ತುಂಬಾ ಪ್ರಯೋಜನ ಪಡೆಯಬಹುದು. ಹೀಗೆ ಮುಖಕ್ಕೆ ಹಚ್ಚಿಕೊಂಡು 10 ನಿಮಿಷಗಳಿಗಿಂತ ಅಧಿಕ ಕಾಲ ಬಿಡಬೇಡಿ. ನಂತರ ಹದ ಬಿಸಿ ನೀರಿನಿಂದ ಮುಖವನ್ನು ಶುಚಿಗೊಳಿಸಿ.
ಮೂಗಿನ ಹತ್ತಿರ ಬ್ಲ್ಯಾಕ್ ಹೆಡ್ಸ್ ಇದ್ದರೆ ಆ ಭಾಗಕ್ಕೆ ಟೊಮೆಟೊದಿಂದ ಉಜ್ಜಿದರೆ ಬ್ಲ್ಯಾಕ್ ಹೆಡ್ಸ್ ಹೋಗಲಾಡಿಸಬಹುದು.

RELATED ARTICLES  ಚಳಿಗಾಲದಲ್ಲಿ ಮಾಂಸ, ಹಾಲಿನ ಉತ್ಪನ್ನಗಳ ಅಧಿಕ ಸೇವನೆಯಿಂದ ದೂರವಿರಿ

ಗಂಧದ ಪುಡಿಯನ್ನು ಬಳಸಿದರೆ ತ್ವಚೆಗೆ ಒಳ್ಳೆಯದು ಎಂದು ಗೊತ್ತು. ಈ ಗಂಧದ ಪುಡಿಯನ್ನು ಟೊಮೆಟೊ ರಸದ ಜೊತೆ ಮಿಶ್ರ ಮಾಡಿ ಹಚ್ಚಿದರೆ ತ್ವಚೆಯ ಕಾಂತಿ ಹೆಚ್ಚಿಸುತ್ತದೆ.