ಕಾರವಾರ: ಕಳೆದ ವರ್ಷ ಪ್ರಥಮ ದರ್ಜೆ ಸಹಾಯಕರ ಹುದ್ದೆಗೆ ಪರೀಕ್ಷೆ ಬರೆದಿದ್ದ ದೇವಳಮಕ್ಕಿಯ ಯುವತಿಗೆ ಸರಕಾರಿ ಉದ್ಯೋಗ ಕೊಡಿಸುವುದಾಗಿ 2 ಲಕ್ಷ ರೂ. ಪಡೆದು ವಂಚನೆ ಮಾಡಿದ ರೈತ ಸಂಘದ ಉಪಾಧ್ಯಕ್ಷ ಶ್ಯಾಮ ವಾಲ್ಮಿಕಿಗೆ ತಾಲೂಕಿನ ಮಲ್ಲಾಪುರ ಪೊಲೀಸ್ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ತಲೆ ಮರಿಸಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಕಳೆದ ವರ್ಷ ಪ್ರಥಮ ದರ್ಜೆ ಸಹಾಯಕರ ಹುದ್ದೆಗೆ ಪರೀಕ್ಷೆ ಬರೆದಿದ್ದ ದೇವಳಮಕ್ಕಿಯ ಯುವತಿಗೆ ಸರಕಾರದಿ ಉದ್ಯೋಗ ಕೊಡಿಸುವುದಾಗಿ ನಂಬಿಸಿದ್ದ ಶ್ಯಾಮ್ ವಾಲ್ಮಿಕಿ ಹಣ ಬೇಡಿಕೆ ಇಟ್ಟಿದ್ದ. ಬೆಂಗಳೂರಿನ ಹೈಕೋರ್ಟ್ ವಕೀಲ ಹಾಗೂ ಯಲ್ಲಾಪುರದ ಪತ್ರಕರ್ತರೊಬ್ಬರು ಸೇರಿ ಯುವತಿಯಿಂದ ಚೆಕ್ ಪಡೆದುಕೊಂಡಿದ್ದರು. ಬಳಿಕ ತನಗೆ ವಂಚನೆಯಾಗುತ್ತಿದೆ ಎಂದು ಅರಿತ ಯುವತಿ ಕಾರವಾರ ತಾಲೂಕಿನ ಮಲ್ಲಾಪುರ ಪೊಲೀಸ್ ಠಾಣೆಯಲ್ಲಿ ಮೂವರ ವಿರುದ್ಧ ಪ್ರಕರಣ ದಾಖಲಿಸಿದ್ದಾಳೆ.
ಪ್ರಕರಣ ದಾಖಲಾದ ಬಳಿಕ ಶ್ಯಾಮ್ ತಲೆಮರಿಸಿಕೊಂಡಿದ್ದ ಬಳಿಕ ಇತನನ್ನು ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ ಎನ್ನಲಾಗಿದೆ. ಇನ್ನಿಬ್ಬರು ಆರೋಪಿಗಳು ತಲೆಮರಿಸಿಕೊಂಡಿದ್ದು ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದಾರೆ.
ಇಂತಹ ವಂಚನೆಯ ಜಾಲ ಹಲವೆಡೆ ಇದ್ದು ಈ ಬಗ್ಗೆ ಆರ್ವಜನಿಕರು ಎಚ್ಚರಿಕೆಯಿಂದ ಇರಬೇಕೆಂದು ಪೋಲೀಸ್ ಇಲಾಖೆ ತಿಳಿಸಿದೆ.