ಕುಮಟಾ:ತಾಲೂಕಿನ ಮಿರ್ಜಾನ ಗ್ರಾಮದ ಖೈರೆಯ ಕಿರಿಯ ಪ್ರಾಥಮಿಕ ಶಾಲೆಯ ಹಿಂದುಗಡೆ ಸಂಗ್ರಹವಾದ ಗುಜರಿ ಸಾಮಗ್ರಿಗಳಲ್ಲಿ ಮಳೆಯ ನೀರು ಶೇಖರಣೆಗೊಂಡ ಪರಿಣಾಮ ಸೊಳ್ಳೆಗಳು ಉತ್ಪತ್ತಿಯಾಗಿದ್ದು, ಸೈನಿಕರಂತೆ ಬಂದೆರಗುವ ಸೊಳ್ಳೆಗಳು ಶಾಲಾ ಮಕ್ಕಳು ಹಾಗೂ ಶಿಕ್ಷಕರನ್ನು ಕಡಿದು ಹೈರಾಣಾಗಿಸಿದೆ. ಸೊಳ್ಳೆಗಳ ಕಾಡದಿಂದ ಮಕ್ಕಳನ್ನು ಭೊದಿಸುವ ಶಿಕ್ಷಕರು ಹಾಗೂ ಮಕ್ಕಳು ಪೇಚಾಡುವಂತಾಗಿತ್ತು. ಇದನ್ನು ಅರಿತು ಸಂಗ್ರಹಿಸಿಟ್ಟಿದ ಗುಜರಿ ಸಾಮಗ್ರಿಯನ್ನು 3 ದಿನದೊಳಗೆ ಖುಲ್ಲಾ ಪಡಿಸುವಂತೆ ಖಡಕ್ ನೋಟಿಸನ್ನು ಗುಜರಿ ವ್ಯಾಪಾರಿಗೆ ಪಿಡಿಓ ಲಂಬೋದರ ಗಾಂವ್ಕರ ಹಾಗೂ ಗ್ರಾಪಂ ಸದಸ್ಯರು ನೀಡಿದ್ದಾರೆ.
ಈ ಕುರಿತಂತೆ ಪತ್ರಿಕೆಗೆ ಮಾಹಿತಿ ನೀಡಿದ ಪಿಡಿಓ ಲಂಬೋದರ ಗಾಂವ್ಕರ ಕಳೆದ ಶುಕ್ರವಾರವೆ ನೋಟಿಸ್ ತಲುಪಿಸಲು ಬರಲಾಗಿತ್ತು. ಆ ದಿನ ಯಾರೂ ಇಲ್ಲದ ಕಾರಣ ವಾಪಸ್ಸಾಗಿದ್ದರು. ನೋಟಿಸ್ ನ್ನು ಗುಜರಿ ವ್ಯಾಪಾರಿಗೆ ನೇರವಾಗಿ ಕೈಗೆ ತಲುಪಿಸಬೇಕೆನ್ನುವ ಉದ್ದೇಶದಿಂದ ಸದಸ್ಯರ ಜೊತೆಗೂಡಿ ಬಂದಿರುವುದಾಗಿ ಸತ್ವಾಧಾರ ನ್ಯೂಸ್ ಗೆ ಮಾಹಿತಿ ನೀಡಿದರು.
ನೋಟಿಸ್ ಕೈಗೆ ಪಡೆದ ಗುಜರಿ ವ್ಯಾಪಾರಿ ಪುತ್ರ ನಿಗದಿತ ಅವದಿಯೊಳಗೆ ಗುಜಿ ಖಾಲಿ ಮಾಡಲು ಸಾದ್ಯಾವಾದಷ್ಟು ಪ್ರಯತ್ನಿಸುತ್ತೇನೆ ಎಂದರು. ಗ್ರಾ.ಪಂ ಸದಸ್ಯಯರಾದ ಗಣೇಶ ಅಂಬಿಗ, ಪರ್ಷು ಪರ್ನಾಂಡಿಸ್ ವಿನಾಯಕ ನಾಯ್ಕ ದೀಪಕ ಭಟ್ ಮಂಜುನಾಥ ಹರಿಕಾಂತ ಹಾಜರಿದ್ದರು.