ಕುಮಟಾ:ಡಾ ಎ ವಿ ಬಾಳಿಗಾ ಮಹಾವಿದ್ಯಾಲಯದ ಪ್ರೈಮರಿ ಶಾಲೆಯಲ್ಲಿ ಪಾಲಕರು ಹಾಗೂ ಶಿಕ್ಷಕರಿಗಾಗಿ ವಿಶೇಷ ಕಾರ್ಯಾಗಾರ ಜರುಗಿತು.

ಶಿರಸಿ ಸಿದ್ದಾಪುರದ ಖ್ಯಾತ ವಕೀಲರು ಮತ್ತು ಲಯನ್ಸ್ ರವಿ ಹೆಗಡೆ ಹೂವಿನ ಮನೆ ಸಂಸ್ಕೃತಿ – ಸಂಸ್ಕಾರ ಎಂಬ ವಿಶೇಷ ಕಾರ್ಯಾಗಾರ ನಡೆಸಿದರು. ಮಕ್ಕಳು ಯಾವ ರೀತಿ ಉತ್ತಮ ಸಂಸ್ಕಾರ ದೊಂದಿಗೆ ನಮ್ಮ ಸಂಸ್ಕೃತಿ ಯನ್ನು ಮೈಗೂಡಿಸಿಕೊಂಡು ಬೆಳೆಯಬೇಕು ಹಾಗೂ ಇದರಲ್ಲಿ ಪಾಲಕರು ಮತ್ತು ಶಿಕ್ಷಕರ ಪಾತ್ರ ಏನು ಎನ್ನುವ ವಿಶೇಷ ಕಲ್ಪನೆಯನ್ನು ಸ್ಕ್ರೀನ್ ಮೂಲಕ ವಿವರಿಸಿದರು.. ಶಾಲೆಯ ಆಡಳಿತ ಮಂಡಳಿಯ ಈ ಹೊಸ ವಿಧಾನವನ್ನು ಎಲ್ಲ ಮಕ್ಕಳ ಪಾಲಕರು ಅತ್ಯಂತ ಸಂತಸದಿಂದ ಶ್ಲಾಘಿಸಿದರು.

RELATED ARTICLES  ಅಗ್ನಿದುರಂತಕ್ಕೀಡಾದ ಮನೆಗೆ ತೆರಳಿ ಅರ್ಥಿಕ ಸಹಾಯದ ಚೆಕ್ ನೀಡಿದ ಮಂಕಾಳ ವೈದ್ಯ

ಕಾರ್ಯಕ್ರಮದ ಮೊದಲು ಆಡಳಿತ ಮಂಡಳಿಯು ಪಾಲಕರು ತಮ್ಮ ಮಕ್ಕಳಿಗೆ ಏನಾದರೂ ಅನಾನುಕೂಲತೆ ಮತ್ತು ಏನಾದರೂ ಮಾರ್ಪಾಡು ಗಳು ಇದ್ದಲ್ಲಿ ತಿಳಿಸಬೇಕು ಎಂದಾಗ ಅನೇಕ ಪಾಲಕರು ತಮ್ಮ ಅನಿಸಿಕೆ ಹಂಚಿಕೊಂಡರು.

ಶಾಲೆಯ ಆಡಳಿತ ಮಂಡಳಿಯ ಕಾರ್ಯದರ್ಶಿ ವಿನೋದ ಪ್ರಭು ಪಾಲಕರ ಸಭೆಯಲ್ಲಿ ಮಾತನಾಡಿ ರವಿ ಹೆಗಡೆ ಯವರ ಸಾಧನೆ ಅದ್ಭುತ. ಅವರು ಅನೇಕ ದೇಶಗಳಲ್ಲಿ ತಮ್ಮ ಸಾಧನೆಗಳನ್ನು ಪರಿಚಯಿಸಿ ಬಂದವರು. ಅವರ ಈ ಹೊಸ ಕಲ್ಪನೆ ತಮಗೂ ತಿಳಿಯಲಿ ಅದರಿಂದ ತಮ್ಮ ಮಕ್ಕಳನ್ನು ಉತ್ತಮ ಸಂಸ್ಕಾರ ಸಂಸ್ಕೃತಿ ಯೊಂದಿಗೆ ಬೆಳೆಸಲು ಅನುಕೂಲ ಆಗಲಿ ಅನ್ನುವ ಉದ್ದೇಶದಿಂದ ಅವರನ್ನು ಕರೆಯಿಸಿ ತಮಗೆ ಈ ಕಾರ್ಯಕ್ರಮ ನೀಡಿದ್ದೇವೆ. ಇದರಿಂದ ತಾವು ಅನೇಕ ಹೊಸ ವಿಚಾರಗಳನ್ನು ತಿಳಿದುಕೊಳ್ಳಲು ಅನುಕೂಲವಾಗುತ್ತದೆ. ಇಲ್ಲಿ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ ಅವರ ಭವಿಷ್ಯ ಉಜ್ವಲ ವಾಗುವಂತೆ ಮಾಡಲು ಉತ್ತಮ ಶಿಕ್ಷಕ ವೃಂದ ಇದೆ ಅದರ ಜೊತೆಗೆ ಇಂತಹ ಕಾರ್ಯಕ್ರಮ ಇನ್ನಷ್ಟು ಸಹಾಯಕಾರಿಯಾಗುತ್ತದೆ ಎಂದರು.

RELATED ARTICLES  ಒಂದೇ ಕಡೆ ನಾಲ್ಕು ಹೆಬ್ಬಾವು : ಹಾವು ಕಂಡ ಜನ ಕಂಗಾಲು.

ವೇದಿಕೆಯಲ್ಲಿ ಶಾಲೆಯ ಚೇರಮನ್ ಅನಂತ ಪಿ ಶಾನಭಾಗ ಅಧ್ಯಕ್ಷತೆ ವಹಿಸಿದ್ದರು, ಅತಿಥಿಗಳಾಗಿ ಹರಿ ಪೈ ಮತ್ತು ಅಶೋಕ ಶಾನಭಾಗ ಆಗಮಿಸಿದ್ದರು.

ಶಾಲೆಯ ಮುಖ್ಯಾಧ್ಯಾಪಕಿ ಪ್ರಿಯಾ ನರೋನಾ ಎಲ್ಲರನ್ನೂ ಪರಿಚಯಿಸಿ ಸ್ವಾಗತಿಸಿದರು. ಶಿಕ್ಷಕಿ ಸ್ವಾತಿ ಪೈ ದೇವರ ಸ್ತುತಿ ಹಾಡಿದರು. ಶಿಕ್ಷಕಿ ಸೌಮ್ಯ ಲೋಕೆಶ್ವರ್ ನಿರೂಪಣೆ ಮಾಡಿದರು, ಕೊನೆಯಲ್ಲಿ ಶಿಕ್ಷಕಿ ರೇಖಾ ಹರಿಕಾಂತ ಎಲ್ಲರನ್ನು ವಂದಿಸಿದರು..