ಸಾಧನೆಗೆ ಯಾವುದು ಅಡ್ಡಿಯಿಲ್ಲ ಎಂಬುದು ಒಂದು ಮಾತು. ಆದರೆ ಸಾಧನೆಗೆ ವಯಸ್ಸೂ ಕೂಡಾ ಲೆಕ್ಕ ಇರಲ್ಲ ಎಂಬುದು ಇವರನ್ನು ನೋಡಿದರೆ ಅರ್ಥವಾಗುತ್ತದೆ.

ಹೌದು , ಪವನ್ ಕುಮಾರ್ ಎನ್​ ಆರ್​ ಹೆಸರಿನ ಇವರು ಜನ ಮಾನಸದಲ್ಲಿ ಸಾಧಕ ಎಂದೇ ಬಿಂಬಿತರಾಗಿರುವವರು. ಇವರ ವಯಸ್ಸು ಇದೀಗ ಕೇವಲ 20 ವರ್ಷ. ಇವರ ಸಾಧನೆ ಮಾತ್ರ 200 ವರ್ಷದ್ದು. ಈಗ ಇವರು ವಿದ್ಯಾರ್ಥಿಯೂ ಹೌದು, ಇಂಟರ್ನೆಟ್ ಉದ್ಯಮಿಯೂ ಹೌದು.ಲೀಲಾಜಾಲವಾಗಿ ಕಂಪ್ಯೂಟರ್ನಲ್ಲಿ ಪ್ರೋಗ್ರಾಮ್ ಗಳನ್ನು ಬರೆಯಬಲ್ಲ ಕಂಪ್ಯೂಟರ್ ಪ್ರೋಗ್ರಾಮಿನರ್ ಆಗಿರುವವರು ಇವರು. ವಯಸ್ಸಿನಲ್ಲಿ ಚಿಕ್ಕವರಾದ ಇವರು ಸಾಧನೆಯಲ್ಲಿ ಮಾತ್ರ ಮಹತ್ತರ ಎತ್ತರ ಬೆಳೆದ ಅದ್ಭುತ ಪ್ರತಿಭೆ. ತಮ್ಮ ಈ ವಯಸ್ಸಿನಲ್ಲಿಯೇ ತಮ್ಮ ಕೊಠಡಿಯನ್ನು ಸ್ವಾಡ್ ರೂಮ್‌ಆಗಿ ಬದಲಾಯಿಸಿಕೊಂಡ ಪ್ರತಿಭಾನ್ವಿತ ವ್ಯಕ್ತಿತ್ವದ, ಸೃಜನಶೀಲ ಹಾಗೂ ಹೊಸತನದತ್ತ ಮುಖ ಮಾಡಿದ ಯುವ ಪ್ರತಿಭೆ.

received 2123848344503555

ಪ್ರಾರಂಭಿಕ ಜೀವನ

ಪವನ್ ಕುಮಾರ್ ಎನ್​ ಆರ್ ಅಕ್ಟೋಬರ್ 27, 1997 ರಲ್ಲಿ ಕರ್ನಾಟಕದ ಚಿತ್ರದುರ್ಗ ನಗರದಲ್ಲಿರುವ ಕುರುಬ ಕುಟುಂಬದಲ್ಲಿ ಜನಿಸಿದರು. ಇವರು ರುದ್ರಮುನಿ ಹಾಗೂ ನಿರ್ಮಲಾ ದಂಪತಿಗಳ ಸುಪುತ್ರ. ತಂದೆ ರುದ್ರಮುನಿಯವರು ಚಿತ್ರದುರ್ಗ ಜಿಲ್ಲೆಯ KVIC CSP ಕೇಂದ್ರೀಯ ಗವರ್ನಮೆಂಟ್ ಉದ್ಯೋಗಿಯಾಗಿದ್ದು, ತಾಯಿ ನಿರ್ಮಲಾ ಗೃಹಿಣಿಯಾಗಿದ್ದಾರೆ.

RELATED ARTICLES  ಸನಾತನ ಸಂಸ್ಕಾರಗಳನ್ನು ಉಳಿಸಿ ಬೆಳೆಸುವ ಸಲುವಾಗಿ "ಸಂಸ್ಕಾರೋತ್ಸವ" ಕಾರ್ಯಕ್ರಮ

ಚಲನಚಿತ್ರದಲ್ಲಿ ಅಭಿನಯ

received 2123850827836640

ಚಲನಚಿತ್ರ ಅಭಿನಯದಲ್ಲಿ ಅಪಾರ ಆಸಕ್ತಿ ಹೊಂದಿದ್ದ ಇವರು 2006 ರಲ್ಲಿ ಅಂದರೆ ತನ್ನ 9ನೇ ವಯಸ್ಸಿನಲ್ಲಿಯೇ ಪವನ್ ಕುಮಾರ್ “ಭಂಟಾ” ಚಿತ್ರದಲ್ಲಿ ಬಾಲ ಕಲಾವಿದರಾಗಿ ನಟಿಸಿದವರು. ಅನಿವಾರ್ಯ ಕಾರಣದಿಂದ ಇವರು ಆನಂತರದ ದಿನಗಳಲ್ಲಿ ಸಿನಿಮಾದಿಂದ ದೂರ ಉಳಿದರು.

ಸಂಸ್ಥಾಪಕನಾಗಿ ಹೆಗ್ಗಳಿಕೆ

received 2123848364503553

ಮಂಗಳೂರಿನಲ್ಲಿರುವ ಶ್ರೀನಿವಾಸ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಸದ್ಯ ಸಿವಿಲ್ ಇಂಜಿನಿಯರಿಂಗ್ ಓದುತ್ತಿರುವ ಇವರು 2017 ರ ಫೆಬ್ರವರಿ 19 ರಂದು ಗ್ಲೋಬಲ್ ನ್ಯೂಸ್ ಮೀಡಿಯಾ ಆಧಾರಿತ “ಸ್ಕ್ವಾಡ್” ಅನ್ನೋ ಹೆಸರಿನ ವೆಬ್​ಸೈಟ್​ ಅನ್ನು ರಚಿಸಿ, ಅದರಲ್ಲಿ ಇಂದು ಉನ್ನತ ಮಟ್ಟದ ಯಶಸ್ಸು ಗಳಿಸಿದ್ದಾರೆ. “ಸ್ಕ್ವಾಡ್” ಸೈಟ್​ ಒಂದು ಜಾಗತಿಕ, ಮನರಂಜನೆ ಮತ್ತು ಸುದ್ದಿ-ಮಾಧ್ಯಮ ಆಧಾರಿತ ಸಾಮಾಜಿಕ ನೆಟ್​ವರ್ಕ್ ವೆಬ್​ಸೈಟ್​ ಆಗಿದ್ದು, ಆ ಮೂಲಕ ಇಂದು ರಾಜ್ಯ, ರಾಷ್ಟ್ರಮಟ್ಟದಲ್ಲೂ ಹೆಸರು ಪಡೆಯುತ್ತಿದ್ದಾರೆ. ಈ ಸಾಧನೆ ಇವರು ಮಾಡಿದ್ದು ಈ 19ರ ವಯೋಮಾನದಲ್ಲಿ ಎಂಬುದೇ ಎಲ್ಲರೂ ಮೂಗಿನ ಮೇಲೆ ಬೆರಳಿಡುವ ಸಂಗತಿ.

RELATED ARTICLES  ಸಿ.ಇ.ಟಿ ಫಲಿತಾಂಶ : ಕೊಂಕಣ ವಿದ್ಯಾರ್ಥಿಗಳ ಅಮೋಘ ಸಾಧನೆ - ವಿಧಾತ್ರಿಯ ಅಕಾಡಮಿಯ ಕಾರ್ಯಕ್ಕೆ ಪಾಲಕರಿಂದ ಮೆಚ್ಚುಗೆ.

ಇವಿಷ್ಟೇ ಅಲ್ಲದೇ ಅಲ್ಲದೇ 2018 ರ ಕ್ರಂಚ್ಬೇಸ್ ಪಟ್ಟಿಯಲ್ಲಿ ಕರ್ನಾಟಕದಿಂದ ಅಗ್ರ 50 ಭಾರತೀಯ ಸಂಸ್ಥಾಪಕರಲ್ಲಿ ಇವರು ಒಬ್ಬರಾಗಿದ್ದಾರೆ ಎಂಬುದೇ ನಮಗೆ ಹೆಮ್ಮೆ.

ಸಾಧಕ ಹೇಗಿರಬೇಕು? ಎಂಬ ಪ್ರಶ್ನೆಗೆ ನೈಜ ಉತ್ತರವಾಗಿ ಪವನ್ ಕುಮಾರ್ ಎನ್​ ಆರ್ ಇರುವುದು ಆತನ ಕುಟುಂಬಕ್ಕೆ ಹೆಮ್ಮೆಯಾದರೆ. ಸಾಧನೆಯ ಹಾದಿಯಲ್ಲಿ ನಾವು ಹೇಗೆ ಇರಬೇಕು ಎಂಬುದಕ್ಕೆ ಅವರಿಂದ ಪಾಠ ಕಲಿಯಬೇಕಾಗಿರುವುದು ನಾವುಗಳು.

received 2123848404503549

ಇಂದಿನ ದಿನದಲ್ಲಿ ಉದ್ಯೋಗದ ಬೆನ್ನುಹತ್ತಿದ ಯುವ ಪೀಳಿಗೆಗೆ ಪವನ್ ಕುಮಾರ್ ಎನ್​ ಆರ್ ಮಾದರಿಯಾಗಿ ನಿಂತಿದ್ದಾರೆ. ಇವರ ಯಶಸ್ಸು ಇನ್ನಷ್ಟು ಹೆಚ್ಚಲಿ. ಇವರ ಬದುಕಿನ ಸಾಧನೆಗೆ ಎಲ್ಲರೂ ಬಲ ತುಂಬಲಿ ಯಶಸ್ಸು ಇವರ ಸಾಧನೆಯ ಬಹುಮಾನವಾಗಲಿದೆ ಎಂಬ ಸದಾಶಯದೊಂದಿಗೆ ಅವರನ್ನು ಸತ್ವಾಧಾರ ನ್ಯೂಸ್ ಅಭಿನಂದಿಸುತ್ತಿದೆ.