ಶಿರಸಿ :ದಿ ತೋಟಗಾರ್ಸ್ ಕೋ-ಆಪರೇಟಿವ್ ಸೇಲ್ ಸೊಸೈಟಿಯ ಕೃಷಿ ವಿಭಾಗದಲ್ಲಿ ಜೂನ್ 15 ರಿಂದ ಜುಲೈ 15, 2018 ರವರೆಗೆ “ಹಸಿರು ಮಾಸ” ಸಸ್ಯಗಳ ಪ್ರದರ್ಶನ ಮತ್ತು ಮಾರಾಟ ಮೇಳ ಆಯೋಜಿಸಲಾಗಿದೆ. ಹಸಿರು ಮಾಸದ ಪ್ರಯುಕ್ತ ಒಂದು ತಿಂಗಳ ಕಾಲ ನಡೆಯುವ ಸಸ್ಯಗಳ ಪ್ರದರ್ಶನ ಹಾಗೂ ಮಾರಾಟ ಮೇಳಕ್ಕೆ ಶಿರಸಿಯ ತೋಟಗಾರಿಕಾ ಇಲಾಖೆ ಹಿರಿಯ ಸಹಾಯಕ ನಿರ್ದೇಶಕರಾದ ಶ್ರೀ ಸತೀಶ ಹೆಗಡೆ, ಸಹಾಯಕ ತೋಟಗಾರಿಕಾ ಅಧಿಕಾರಿಯಾದ ಶ್ರೀ ಗಣೇಶ ಹೆಗಡೆ ಇವರು ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಸಂಘದ ಆಡಳಿತ ಮಂಡಳಿ ನಿರ್ದೇಶಕರಾದ ಶ್ರೀ ಸಿ.ಎನ್. ಹೆಗಡೆ ಹೂಡ್ಲಮನೆ, ಸಂಸ್ಥೆಯ ಪ್ರಧಾನ ವ್ಯವಸ್ಥಾಪಕರಾದ ಶ್ರೀ ರವೀಶ ಹೆಗಡೆ ಹಾಗೂ ಸಂಘದ ಸಿಬ್ಬಂದಿಗಳು ಮತ್ತು ಸದಸ್ಯರುಗಳು ಹಾಜರಿದ್ದರು.
ಹಸಿರು ಮಾಸದ ಪ್ರಯುಕ್ತ ಮುಂದಿನ ಒಂದು ತಿಂಗಳ ಕಾಲ ನಡೆಯುವ ಸಸ್ಯಗಳ ಪ್ರದರ್ಶನ ಮತ್ತು ಮಾರಾಟ ಮೇಳದಲ್ಲಿ ವಿವಿಧ ಬಗೆಯ ಹಣ್ಣು,(ದಾಳಿಂಬೆ, ಮಾವು, ಚಿಕ್ಕು, ಮೂಸಂಬಿ, ಪೇರಲೆ, ಗಮ್‍ಲೆಸ್ ಹಲಸು, ರಾಮಫಲ, ಲಕ್ಷ್ಮಣಫಲ, ಬೆಣ್ಣೆಹಣ್ಣು, ಸಿಹಿಕಂಚಿ ಇತ್ಯಾದಿ) ಹೂವು, (ದಾಸವಾಳ, ಡಚ್‍ಗುಲಾಬಿ, ಗಿಡ್ಡತಳಿ ಗುಲಾಬಿ, ಕಸಿಸಂಪಿಗೆ, ಸುಗಂಧರಾಜ, ಮಲ್ಲಿಗೆ, ಪಾರಿಜಾತ, ಕಣಗಿಲೆ ಇತ್ಯಾದಿ) ಔಷಧಿ ಸಸ್ಯಗಳು, ಸಾಂಬಾರ ಬೆಳೆಯ ಸಸ್ಯಗಳು, ತೋಟಗಾರಿಕಾ ಸಸ್ಯಗಳು ಹಾಗೂ ಅನೇಕ ಅಲಂಕಾರಿಕ ಸಸ್ಯಗಳ ಪ್ರದರ್ಶನ ಹಾಗೂ ಮಾರಾಟ ನಡೆಯಲಿದ್ದು ಸದಸ್ಯರು ಹಾಗೂ ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಈ ಮೇಳದ ಪ್ರಯೋಜನ ಪಡೆಯಬೇಕೆಂದು ಪ್ರಕಟಣೆÉಯಲ್ಲಿ ತಿಳಿಸಲಾಗಿದೆ.

RELATED ARTICLES  ಜಿಲ್ಲಾ ಮಟ್ಟದ 17ವರ್ಷ ವಯೋಮಿತಿಯೊಳಗಿನ ಪ್ರೌಢಶಾಲೆಗಳ ಇಲಾಖಾ ಕ್ರೀಡಾಕೂಟ ಸಂಪನ್ನ.

ಟಿ.ಎಸ್.ಎಸ್. ಲಿ., ಶಿರಸಿ