ಕುಮಟಾ: ತಾಲ್ಲೂಕಿನ ಹೆಗಡೆಯ ಗಾಂಧಿ ನಗರ ನಿವಾಸಿ ಮಂಜುನಾಥ ಮುಕ್ರಿ ಪುತ್ರ ಗಣೇಶ ಕೃಷಿ ಜಮೀನಿನ ಚಿಕ್ಕ ಕೆರೆಯಲ್ಲಿ ನಾಲ್ಕು ದಿನಗಳ ಹಿಂದೆ ಮುಳುಗಿ ಸಾವನ್ನಪ್ಪಿದ್ದ. ಘಟನಾ ಸ್ಥಳಕ್ಕೆ ಅಧಿಕಾರಿಗಳೊಂದಿಗೆ ಶಾಸಕ ದಿನಕರ ಶೆಟ್ಟಿ ಭೇಟಿ ನೀಡಿ ಗಣೇಶನ ತಂದೆ ತಾಯಿ ಕುಟಂಬಸ್ಥರಿಗೆ ಸಾಂತ್ವನ ಹೇಳಿ ಸರ್ಕಾರ ದಿಂದ ಪರಿಹಾರ ಕೊಡಿಸುವ ಭರವಸೆ ನೀಡಿದ್ದರು

RELATED ARTICLES  ಕಾರು ಮತ್ತು ಸ್ಕೂಟಿ ಅಪಘಾತ : ರಸ್ತೆ ಮೇಲೆ ಉರುಳಿಬಿದ್ದ ಮಹಿಳೆ

ಅದರಂತೆ ಕೇವಲ ನಾಲ್ಕು ದಿನಗಳಲ್ಲಿ ಸರ್ಕಾರದಿಂದ ನಾಲ್ಕು ಲಕ್ಷ ಮತ್ತು ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ಒಂದು ಲಕ್ಷ ಪರಿಹಾರ ಹಣವನ್ನು ಕೊಡಿಸುವಲ್ಲಿ ಶಾಸಕ ದಿನಕರ ಶೆಟ್ಟಿ ಯಶಸ್ವಿಯಾಗಿದ್ದು ಶುಕ್ರವಾರ ಮೃತ ಗಣೇಶನ ಮನೆಗೆ ಕಂದಾಯ ಅಧಿಕಾರಿಗಳ ಜೊತೆ ತೆರಳಿ ಬಾಲಕನ ತಂದೆ ತಾಯಿ ಮಗಳಿಗೆ ಪರಿಹಾರದ ಚೆಕ್ ವಿತರಿಸಿದರು.

ಈ ಸಂದರ್ಭದಲ್ಲಿ ಊರಿನ ಪ್ರಮುಖರಾದ ವಿನೋದ ಪ್ರಭು, ಧೀರೂ ಶಾನಭಾಗ, ಜಿ ಪಂ ಸದಸ್ಯ ಗಜು ಪೈ,ಪಂಚಾಯತ ಉಪಾಧ್ಯಕ್ಷೆ ನಾಗವೇಣಿ ಹೆಗಡೆ, ಸದಸ್ಯರಾದ ಪಿ ಡಿ ನಾಯ್ಕ, ರಾಜು ಮುಕ್ರಿ, ಸುಭಾಷ ಪಟಗಾರ, ಜಯಾ ಮುಕ್ರಿ ಸ್ಥಳೀಯರಾದ ವೆಂಕಟೇಶ್ ನಾಯ್ಕ, ಸುರೇಶ ಪಟಗಾರ, ನಿವೃತ್ತ ಮುಖ್ಯೋಧ್ಯಾಪಕ ಕೆ ಎನ್ ಮುಕ್ರಿ, ಈಶ್ವರ ಮುಕ್ರಿ, ಗಣೇಶ ಪಟಗಾರ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು..

RELATED ARTICLES  ಇಂದಿರಾ ಗಾಂಧಿ ಜಗತ್ತು ಕಂಡ ಮಹಾನ್ ನಾಯಕಿ -ಬಿ.ಸಿ.ಸಿ. ಅಧ್ಯಕ್ಷ ಜಗದೀಪ ತೆಂಗೇರಿ