ಕಲೆ ಯಾರಿಗೆ ಒಲಿಯುತ್ತೆ ಎಂಬುದು ಯಾರಿಗೂ ಅರಿವಿಗೆ ಇರದ ಸಂಗತಿ. ಬದುಕಿನಲ್ಲಿ ಕಲೆಯ ನೆಲೆ ಕಂಡುಕೊಂಡವರು ಹಲವರು. ಬದುಕನ್ನೇ ಕಲೆಗೆ ಅರ್ಪಿಸಿದವರು ಇನ್ನೂ ಕೆಲವರು. ಹೌದು, ಇದು ಉದಯೋನ್ಮುಖ ಕಲಾವಿದನ ಕುರಿತಾಗಿ “ಸತ್ವಾಧಾರ ನ್ಯೂಸ್” ನೀಡುತ್ತಿರುವ ವರದಿ .
IMG 20180616 WA0004
ಈ ಕಲಾ ಪ್ರತಿಭೆಯೇ ಕು. ವಿನಾಯಕ ಹೆಬ್ಬಾರ, ಕುಮಟಾದ ವಿವೇಕ ನಗರ ನಿವಾಸಿ ರಾಮಚಂದ್ರ ಗಣಪತಿ ಹೆಬ್ಬಾರರ ಸುಪುತ್ರ. ಈತ ತಾಲೂಕಿನ ನೆಲ್ಲಿಕೇರಿಯ ಶಾಸಕರ ಮಾದರಿ ಶಾಲೆಯಲ್ಲಿ SSLC ಯನ್ನು ಈ ಬಾರಿ 84℅ ಅಂಕಗಳೊಂದಿಗೆ ಪೂರೈಸಿರುವ, ಬಾಲ್ಯದಿಂದಲೂ ಕಲಾಸಕ್ತ ವಿದ್ಯಾರ್ಥಿ.
IMG 20180616 WA0005
ಕಲಾ ದೇವತೆ ರಂಗವಲ್ಲಿಯ ರೂಪದಲ್ಲಿ ಈತನ ಕೈವಶ ಆಗಿದ್ದಾಳೆ ಎಂಬ ಮಟ್ಟಿಗೆ ಈತನ ಪ್ರತಿಭೆ ಬೆಳೆದಿದೆ. ರಂಗೋಲಿ ಬಿಡಿಸುವುದರಲ್ಲಿನ ಈತನ ಕೈಚಳಕ ಅಪಾರ ಮೆಚ್ಚುಗೆ ಪಡೆದಿದೆ.ಕುಂಚದಿಂದ ಚಿತ್ರಗಳನ್ನು ಬಿಡಿಸುವ ಈತನ ಹವ್ಯಾಸವೂ ಅಷ್ಟೇ ಪ್ರಶಂಸೆಗೆ ಪಾತ್ರವಾಗಿದ್ದಾನೆ.

RELATED ARTICLES  ದೇವತಾರ್ಚನೆ ಮತ್ತು ವಿಚಾರಗಳು..!

IMG 20180615 WA0006 01

ವಿವೇಕನಗರದ ಶ್ರೀ ಲಕ್ಷ್ಮೀ ನರಸಿಂಹ ದೇವಸ್ಥಾನ ಹಾಗೂ ಮಾನೀರ ಅಮ್ಮನವರ ದೇವಾಲಯಗಳಲೆಲ್ಲಾ ವಿಶೇಷ ಉತ್ಸವ ಹಬ್ಬಹರಿದಿನಗಳಲ್ಲಿ ಈತನು ಬಿಡಿಸುವ ರಂಗೋಲಿಯನ್ನು ಕಂಡ ಪ್ರತಿಯೋರ್ವರೂ ಈ ಕಲಾಕಾರನ ಕುರಿತು ವಿಚಾರಿಸುತ್ತಿರುತ್ತಾರೆ.
IMG 20180616 WA0009
ಶಾಲಾ ವಿದ್ಯಾರ್ಥಿಗಳಿಗಾಗಿ ನಡೆಸಲ್ಪಡುವ ಕಲಾ ಸ್ಪರ್ಧೆಗಳಲ್ಲಿ ಭಾಗವಹಿಸಿ ಸೈ ಎನಿಸಿಕೊಂಡಿರುವುದಷ್ಟೇ ಅಲ್ಲದೇ ರಾಜ್ಯಮಟ್ಟದವರೆಗಿನ ವಿವಿಧ ಕಲಾ ಸ್ಪರ್ಧೆಗಳಲ್ಲಿಯೂ ಭಾಗವಹಿಸಿ ಪುರಸ್ಕೃತನಾಗಿರುವುದು ಹೆಮ್ಮೆಯ ಸಂಗತಿ.
IMG 20180616 WA0017
ಕು.ವಿನಾಯಕನಿಗೆ ಈ ಕಲೆಯು ಕುಟುಂಬದ ಬಳವಳಿ ಎಂದರೂ ತಪ್ಪಿಲ್ಲ.ಈತನ ತಂದೆ ರಾಮಚಂದ್ರ ಹೆಬ್ಬಾರ ರವರೂ ಕೂಡ ಭಕ್ತಿ ಸಂಗೀತ – ಕಲೆಯ ಆರಾಧಕರಾಗಿರುತ್ತಾರೆ.ಪ್ರತಿ ವರ್ಷ ಶ್ರೀ ಗಣೇಶ ಚತುರ್ಥಿಯಲ್ಲಿ ತಮ್ಮ ಮನೆಯಲ್ಲಿ ಪೂಜಿಸುವ ಮಣ್ಣಿನ ಗಣಪತಿಯನ್ನು ತಾವೇ ಸ್ವತಃ ಸುಂದರವಾಗಿ ತಯಾರಿಸುವ ರೂಢಿಯಿಟ್ಟುಕೊಂಡವರು.ಹೀಗೆ ಕುಟುಂಬದ ಹಿನ್ನೆಲೆಯೂ ಕು.ವಿನಾಯಕನ ಕಲಾಸಕ್ತಿಗೆ ಪೂರಕವಾಗಿದೆ.
IMG 20180616 WA0006
ಕಳೆದ ಎಸ್.ಎಸ್.ಎಲ್.ಸಿ.ಯಲ್ಲಿ ಶೇಕಡಾ 84 ರಷ್ಟು ಅಂಕ ಗಳಿಸಿರುವ ಈತನು ಮೆಕ್ಯಾನಿಕಲ್ ಡಿಪ್ಲೋಮಾ ಕಲಿಯುವ ಆಸಕ್ತಿ ಹೊಂದಿದ್ದು ಪ್ರವೇಶ ಪಡೆಯಲು ಅರ್ಹತೆ ಹೊಂದಿರುತ್ತಾನೆ.
IMG 20180616 WA0002
ಕು.ವಿನಾಯಕ ಹೆಬ್ಬಾರ ಈತನು ತನ್ನ ಶೈಕ್ಷಣಿಕ ವಿದ್ಯಾಭ್ಯಾಸದಲ್ಲಿ ಉನ್ನತ ಸಾಧನೆಗೈಯ್ಯುವುದರ ಜೊತೆಗೆ ತನ್ನ ಈ ಕಲಾರಾಧನೆಯನ್ನೂ ಮುಂದುವರೆಸುತ್ತ ಈ ರಂಗದಲ್ಲಿಯೂ ಹೆಚ್ಚಿನ ಸಾಧನೆ ಗೈಯ್ಯುವಂತಾಗಲೆಂದು ಹೆಬ್ಬಾರ ಕುಟುಂಬದ ಹಿತೈಷಿ ಜಯದೇವ ಬಳಗಂಡಿಯವರು ಆಶಿಸಿ, ಅಭಿನಂದಿಸಿ, ಶುಭಕೋರಿದ್ದಾರೆ.

RELATED ARTICLES  ಕುಮಟಾದಲ್ಲಿ ಅಣಕು ಸಂಸತ್ ಸ್ಪರ್ಧೆ ಜಿಲ್ಲಾ ಮಟ್ಟಕ್ಕೆ 12 ವಿದ್ಯಾರ್ಥಿಗಳ ಆಯ್ಕೆ

IMG 20180616 WA0008