21ನೇ ಫಿಫಾ ವಿಶ್ವಕಪ್ ಪಂದ್ಯಾವಳಿಯಲ್ಲಿ ಮೊರೊಕ್ಕೊ ವಿರುದ್ಧ ಇರಾನ್ ತಂಡ 1–0 ಗೋಲುಗಳಿಂದ ಗೆಲುವು ಸಾಧಿಸಿದೆ.
ಇಂದು ಕ್ರೆಸ್ಟೊವ್ ಸ್ಕಿ ಕ್ರೀಡಾಂಗಣದಲ್ಲಿ ನಡೆದ ಬಿ ಗುಂಪಿನ ಹಣಾಹಣಿಯಲ್ಲಿ ಇರಾನ್ ತಂಡ ಮೊರೊಕ್ಕೊವನ್ನು ಸೋಲಿಸುವ ಮೂಲಕ ಗೆಲುವಿನ ಅಭಿಯಾನ ಆರಂಭಿಸಿದೆ.
ಉಭಯ ತಂಡಗಳು ವಿಶ್ವಕಪ್ ನಲ್ಲಿ ಇದೇ ಮೊದಲ ಬಾರಿಗೆ ಮುಖಾಮುಖಿಯಾಗಿದ್ದು, 90 ನಿಮಿಷದ ರೋಚಕ ಹಣಾಹಣಿಯಲ್ಲಿ ಯಾವುದೇ ಗೋಲು ದಾಖಲಾಗಲಿಲ್ಲ. ಆದರೆ ಹೆಚ್ಚುವರಿ ಸಮಯದಲ್ಲಿ ಇರಾನ್ ಗೋಲು ಬಾರಿಸಿ ಗೆಲುವು ದಾಖಲಿಸಿತು.
ಮಸೌದ್ ಶೋಜಾಯಿ ಸಾರಥ್ಯದ ಇರಾನ್ ತಂಡ ವಿಶ್ವಕಪ್ ನಲ್ಲಿ ಒಮ್ಮೆಯೂ ನಾಕೌಟ್ ಹಂತ ಪ್ರವೇಶಿಸಿಲ್ಲ. ಟೂರ್ನಿಯಲ್ಲಿ ಒಟ್ಟು 12 ಪಂದ್ಯಗಳನ್ನು ಆಡಿರುವ ತಂಡ ಒಂದರಲ್ಲಿ ಗೆದ್ದಿದೆ. 1998ರ ವಿಶ್ವಕಪ್ ಟೂರ್ನಿಯ ಪಂದ್ಯದಲ್ಲಿ ಈ ತಂಡ 2–1 ಗೋಲುಗಳಿಂದ ಅಮೆರಿಕವನ್ನು ಸೋಲಿಸಿತ್ತು.