ರಾಜ್ಯ ಧಾರ್ಮಿಕ ಪರಿಷತ್‌ನ ಸದಸ್ಯ ಕಾರ್ಯದರ್ಶಿ ಸಿ. ಪಿ. ಶೈಲಜಾ ಮತ್ತು ನ್ಯಾಯಿಕ ಸದಸ್ಯ ಮಹಿಪಾಲ ದೇಸಾಯಿ ಬಾಡ ಶ್ರೀ ಕಾಂಚಿಕಾಂಬಾ ದೇವಸ್ಥಾನದ ದಾಖಲೆ ಪರಿಶೀಲಿಸಿ ಮುಜರಾಯಿ ಕಾಯಿದೆಯಂತೆ 2014-15 ರ ವಾರ್ಷಿಕ ಆದಾಯದ ವರದಿ ಪರಿಗಣಿಸಿ ಬಾಡ ಶ್ರೀ ಕಾಂಚಿಕಾಂಬಾ ದೇವಸ್ಥಾನ ” ಬಿ” ದರ್ಜೆಯ ದೇವಾಲಯವಲ್ಲವೆಂದು ತಿಳಿಸಿದ್ದಾರೆ. ಅಲ್ಲದೇ ಈ ದೇವಾಲಯ ” ಏ” ದರ್ಜೆಯ ದೇವಾಲಯವೆಂದು ಪರಿಗಣಿತವಾಗಿದ್ದು ” ಏ ” ಶ್ರೇಣಿಯ ದೇವಸ್ಥಾನಕ್ಕೆ “ವ್ಯವಸ್ಥಾಪನಾ ಸಮೀತಿ” ರಚಿಸುವ ಅಧಿಕಾರ ರಾಜ್ಯ ಧಾರ್ಮಿಕ ಪರಿಷತ್‌ಗೆ ಮಾತ್ರವೇ ಇದೆ ಹೀಗಾಗಿ ಜಿಲ್ಲಾ ಧಾರ್ಮಿಕ ಪರಿಷತ್ ನೇಮಕ ಮಾಡಿರುವ ಸಮೀತಿ ಅನೂರ್ಜೀತವೆಂದು ತಿಳಿಸಿದೆ. ಜಿಲ್ಲೆಯ ಏಳನೇ ದೊಡ್ಡ “ಏ” ಶ್ರೇಣಿಯ ದೇವಸ್ಥಾನವಾಗಿ ಬಾಡ ಶ್ರೀ ಕಾಂಚಿಕಾಂಬಾ ದೇವಸ್ಥಾನ ಸೇರ್ಪಡೆಯಾಗಿರುವುದು ಶ್ರೀ ದೇವಿಯ ಭಕ್ತರಲ್ಲಿ ಸಂತಸ ತಂದಿದೆ ಈ ಬೆಳವಣಿಗೆಯು ದಿನದಿಂದ ದಿನಕ್ಕೆ ದೇವಾಲಯ ಅಭಿವ್ರದ್ದಿಯಾಗುತ್ತಿರುವುದರ ಸಂಕೇತವಾಗಿದೆ.
ಈ ಹಿಂದೆ ಜಿಲ್ಲಾ ಧಾರ್ಮಿಕ ಪರಿಷತ್‌ನ ನಿರ್ಲಕ್ಷತನದಿಂದ ” ಬಿ ” ದರ್ಜೆಗೆ ಸೇರಿಸಿ ವ್ಯವಸ್ಥಾಪನಾ ಸಮೀತಿಯನ್ನು ರಚನೆ ಮಾಡಿರುವುದು ಸಾರ್ವಜನಿಕರಲ್ಲಿ ಚರ್ಚೆಯ ವಿಷಯವಾಗಿತ್ತು. ಮುಜರಾಯಿ ಇಲಾಖೆಯ ರಾಜ್ಯ ಧಾರ್ಮಿಕ ಪರಿಷತ್ ಈಗ ಪುನಃ ” ಏ ” ದರ್ಜೆಯ“ವ್ಯವಸ್ಥಾಪನಾ ಸಮೆತಿಯನ್ನು” ರಚುಸುವಾಗಲಾದರೂ ಸರಿಯಾದ ಕ್ರಮ ನಿರ್ವಹಿಸಬೇಕಿದೆ.
ದೇವಾಲಯದ ಧಾರ್ಮಿಕ ಕಾರ್ಯಗಳಿಗೆ ತೊಂದರೆ ಆಗದಂತೆ ಮಾನ್ಯ ಉಪ-ವಿಭಾಗಾಧಿಕಾರಿಗಳು “ವ್ಯವಸ್ಥಾಪನಾ ಸಮೆತಿಯನ್ನು” ಕೂಡಲೇ ರಚಿಸಿ ದಿನನಿತ್ಯ ನಡೆಯುವ ಸೇವೆಗಳಿಗೆ ಅಡಚಣೆ ಆಗದಂತೆ ನೋಡಿಕೊಳ್ಳಬೇಕಿದೆ. ಅಂತೆಯೇ ..ಈ ಹಿಂದೆ “ಜಿಲ್ಲಾ ಧಾರ್ಮಿಕ ಪರಿಷತ್” ರಚಿಸಿದ “ವ್ಯವಸ್ಥಾಪನಾ ಸಮೀತಿಗೆ” ಹಿಂದಿನ ಧರ್ಮದರ್ಶಿಗಳು ಅಧಿಕಾರ ಮತ್ತು ಲೆಕ್ಕ ಹಸ್ತಾನರಿಸದೇ ಇರುವುದರಿಂದ ಮಾನ್ಯ ಜಿಲ್ಲಾಧಿಕಾರಿಗಳ ಮಾರ್ಗದರ್ಶನದಂತೆ “ಜಿಲ್ಲಾ ಧಾರ್ಮಿಕ ಪರಿಷತ್” & ಮಾನ್ಯ ತಹಶೀಲ್ದಾರರಿಂದ ಉಗ್ರಾಣದ ಬೀಗ ಒಡೆಯುವ ಪರಿಸ್ಥಿತಿಯು ಏರ್ಪಟ್ಟಿತ್ತು ಇದು ಎಲ್ಲರಿಗೂ ತಿಳಿದ ವಿಷಯವಾಗಿದೆ.
ಹಿಂದಿನ ಧರ್ಮದರ್ಶಿಗಳ ಮೇಲೆ ತಹಶೀಲ್ದಾರ ರಿಂದ ಆ ಸಮಯದಲ್ಲಿ ಆರಕ್ಷಕ ಠಾಣೆಯಲ್ಲಿ ದೂರು ಕೂಡ ದಾಖಲಾಗಿತ್ತು ಮಾನ್ಯ “ರಾಜ್ಯ ಧಾರ್ಮಿಕ ಪರಿಷತ್ ಇಲಾಖೆಯರು“ಹಿಂದಿನ ಧರ್ಮದರ್ಶೀಯವರ ಮೇಲೆ ಸೂಕ್ತ ಕ್ರಮ ತೆಗೆದು ” ಏ ” ದರ್ಜೆಯ “ವ್ಯವಸ್ಥಾಪನಾ ಸಮೆತಿಯನ್ನು” ರಚಿಸಬೇಕಾಗಿದೆ. ಶ್ರೀ ದೇವಿಯ ಭಕ್ತರ ಹಿತದ್ರಷ್ಟಿಯಿಂದ “ರಾಜ್ಯ ಧಾರ್ಮಿಕ ಪರಿಷತ್ ಇಲಾಖೆ” ಸೂಕ್ತ ಪರಿಹಾರ ನೀಡುವ ಭರವಸೆಯಲ್ಲಿರುವ ಅಪಾರ ಭಕ್ತ ಸಮೂಹ.
ಲೇಖನ & ಸಂಗ್ರಹ-ಶ್ರೀ ವಸಂತ ನಾಯ್ಕ, ಬಾಡ ನ್ಯೂಸ್