ಕುಮಟಾ: ರಂಗ ಚಿನ್ನಾರಿ ಕಾಸರಗೋಡು ಇವರ ಆಶ್ರಯದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಹಾಗೂ ಕೊಂಕಣ ಎಜುಕೇಶನ್ ಟ್ರಸ್ಟ ಕುಮಟಾ ಇವರ ಸಹಯೋಗದೊಂದಿಗೆ ಕುಮಟಾದ ಕೊಂಕಣ ಎಜ್ಯುಕೇಶನ್ ಟ್ರಸ್ಟ ಸಭಾಗ್ರಹದಲ್ಲಿ
ಕೊಂಕಣಿ ಮಹಿಳೆಯರಿಗಾಗಿ ರಂಗ ಸಂಸ್ಕೃತಿ ಶಿಬಿರ ಪ್ರಾರಂಭಗೊಂಡಿದೆ.
ಈ ಕಾರ್ಯಕ್ರಮವನ್ನು ಶಾಸಕ ದಿನಕರ ಕೆ ಶೆಟ್ಟಿಯವರು ಉದ್ಗಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ಕೊಂಕಣಿ ಭಾಷೆಯಲ್ಲಿ ಈ ವಿಧದ ಕಾರ್ಯಕ್ರಮ ಸಂಯೋಜನೆಗೊಳ್ಳುತ್ತಿರುವುದು ಉತ್ತಮವಾದ ಸಂಗತಿ ಎಂದರು. ಕಾರ್ಯಕ್ರಮದಲ್ಲಿ ಭಾಗವಹಿಸಿದ ಜನರಿಗೆ ಶುಭಹಾರೈಸಿದರು.
ಚಲನ ಚಿತ್ರ ನಿರ್ದೇಶಕರು ರಂಗ ಕರ್ತೃ ಮತ್ತು ಶಿಬಿರದ ನಿರ್ದೇಶಕರಾದ ಕಾಸರಗೋಡು ಚಿನ್ನಾ ಅವರು ಮಾತನಾಡಿ ಕೊಂಕಣಿ ಭಾಷೆಯ ಅಭಿವೃದ್ದಿಗೆ ನಾವು ಸರಕಾರವನ್ನೇ ಅವಲಂಬಿಸಿರಬಾರದು ನಮ್ಮ ಕೆಲಸ ನಾವು ಮಾಡಬೇಕು ಪ್ರತಿಫಲ ಸಿಕ್ಕೇ ಸಿಗುತ್ತದೆ ಎಂದರು. ಕೊಂಕಣಿ ಭಾಷೆಯ ಬೆಳವಣಿಗೆ ಹಾಗೂ ರಂಗಭೂಮಿ ಬಗೆಗೆ ವಿವರಿಸಿದರು.
ಜಿಲ್ಲಾ ಖಾದಿ ಗ್ರಾಮ ಉದ್ಯೋಗ ಸಂಸ್ಥೆ ಮಂಗಳೂರಿನ ಡಿಸ್ಟ್ರಿಕ್ಟ ಆಫೀಸರ ಆದ ಜ್ಯೋತಿ ನಾಯ್ಕ ಮಾತನಾಡಿ ಕೊಂಕಣಿ ಮಹಿಳೆಯರು ಹೆಚ್ಚು ಹೆಚ್ಚು ಸಾಮಾಜಿಕ ಚಟುವಟಿಕೆಗಳಲ್ಲಿ ಭಾಗವಹಿಸಬೇಕು ಎಂದರು. ಕೊಂಕಣಿ ಸಾಹಿತ್ಯ ಅಖಾಡೆಮಿಯ ಮಾಜಿ ಸದಸ್ಯರಾದ ಚಿದಾನಂದ ಭಂಡಾರಿಯವರು ಪ್ರಾಸ್ಥಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದ ಸಂಯೋಜನೆ ಹಾಗೂ ಉಪಯೋಗದ ಬಗೆಗೆ ವಿವರಿಸಿದರು.
ಕಾರ್ಯಕ್ರಮದಲ್ಲಿ ಕಸಾಪ ಜಿಲ್ಲಾದ್ಯಕ್ಷ ಅರವಿಂದ ಕರ್ಕಿಕೊಡಿ ,ಅರುಣ ಉಭಯಕರ, ಉದ್ಯಮಿ ಮುರಳೀಧರ ಪ್ರಭು ಸುದಾ ಗೌಡ ಹಾಗೂ ಇನ್ನಿತರ ಪ್ರಮುಖರು ಉಪಸ್ಥಿತರಿದ್ದರು.
ರಂಗಭೂಮಿ ಬಗೆಗೆ ಅರಿವು ಮೂಡಿಸುವ ಕಾರ್ಯಗಳು ಹಾಗೂ ತರಬೇತಿ ನಡೆಯಿತು. ಮಹಿಳೆಯರು ಇದರ ಸದುಪಯೋಗ ಪಡೆದರು.