ಯುವಾಬ್ರಿಗೇಡ್ ಶಿರಸಿ ತಾಲೂಕು ಘಟಕದ ವತಿಯಿಂದ ಸ್ವಚ್ಛ ಸಮಾಜ ಸ್ವಸ್ಥ ಸಮಾಜ ಉದ್ದೇಶದಿಂದ ಸ್ವಚ್ಛ ಹೆದ್ದಾರಿ ಯೋಜನೆಯಡಿಯಲ್ಲಿ ಶಿರಸಿಯಿಂದ ಸಿದ್ಧಾಪುರ ಹೋಗುವ ಹೆದ್ದಾರಿಯಲ್ಲಿ ನೀಲೆಕಣಿ ಪರಿಸರದಲ್ಲಿ ಮೊದಲ ಹಂತದ ಸ್ವಚ್ಛತಾ ಕಾರ್ಯವನ್ನು ಹಮ್ಮಿಕೊಳ್ಳಲಾಗಿತ್ತು.
ಮಾರ್ಗದ ಇಕ್ಕೆಲಗಳಲ್ಲಿ ಪ್ಲಾಸ್ಟಿಕ್ ತ್ಯಾಜ್ಯ, ವೈದ್ಯಕೀಯ ತ್ಯಾಜ್ಯಗಳಾದ ಸಿರಿಂಜ್, ಔಷಧಿ ಬಾಟಲಿಗಳು, ಮಾಂಸಾಹರದ ತ್ಯಾಜ್ಯ ಹಾಗೂ ಇತರ ತ್ಯಾಜ್ಯವಸ್ತುಗಳು ತುಂಬಿಕೊಂಡಿತ್ತು. ಇದರಿಂದ ಸಾರ್ವಜನಕಿರು ದೊಡ್ಡ ಮಟ್ಟದಲ್ಲಿ ತೊಂದರೆ ಅನುಭವಿಸಬೇಕಾದ ಪರಿಸ್ಥಿತಿ ಇತ್ತು. ಕೆಟ್ಟ ವಾಸನೆ ಒಂದು ಕಡೆಯಾದರೆ,ಪ್ರಮುಖವಾಗಿ ಮಳೆಗಾಲದಲ್ಲಿ ನೀರು ಹೋಗುವ ಮಾರ್ಗ ಅಸ್ತವ್ಯಸ್ತವಾಗಿ ನೀರು ನಿಂತುಕೊಳ್ಳುತ್ತಿತ್ತು. ಈ ಮೂಲಕ ಸುತ್ತಲಿನ ಪರಿಸವೂ ಹಾನಿಗೊಳಗಾಗಿತ್ತು.
ಇಂದು ಬೆಳಗ್ಗಿನಿಂದಲೇ ಆರಂಭಿಸಿದ ಯುವಾ ಕಾರ್ಯಕರ್ತರು ನಾಲ್ಕು ಗಂಟೆಗೂ ಅಧಿಕ ಕಾಲ ಸ್ವಚ್ಛತಾ ಕಾರ್ಯ ನೆರವೇರಿಸಿದರು. ಸುಮಾರು ಒಂದು ಲೋಡ್ ಟಿಪ್ಪರ್ ತ್ಯಾಜ್ಯವನ್ನು ವಿಲೇವಾರಿ ಮಾಡಿ ಪ್ರಾಥಮಿಕ ಹಂತದ ಸ್ವಚ್ಛತೆ ಮಾಡಲಾಯಿತು.
ಈ ಸಂಧರ್ಬದಲ್ಲಿ ನಗರಸಭೆಯವರ ಸಹಕಾರ ಶ್ಲಾಘನೀಯ. ಸ್ವಚ್ಛತೆ ಮಾಡಿರುವ ಪ್ರದೇಶ ನಗರಸಭೆ ವ್ಯಾಪ್ತಿಗೆ ಬರದೇ ಇದ್ದರೂ, ಪರಿಸರ ಕಾಳಜಿಯನ್ನು ವ್ಯಕ್ತಪಡಿಸಿದ ನಗರಸಭೆ ಅಧಿಕಾರಿಗಳು ತ್ಯಾಜ್ಯ ವಿಲೇವಾರಿ ವಾಹನವನ್ನು ಸ್ವಚ್ಛ ಮಾಡುವ ಸ್ಥಳಕ್ಕೇ ಕಳುಹಿಸಿ ನಮ್ಮ ಕಾರ್ಯವನ್ನು ಹಗುರಗೊಳಿಸಿದರು.
ಪರಿಸರದ ಸ್ವಾಸ್ಥ್ಯ ಕಾಪಿಡುವಲ್ಲಿ ಸಾರ್ವಜನಿಕರ ಸಹಕಾರವನ್ನು ಯುವಾ ಬ್ರಿಗೇಡ್ ನಿರೀಕ್ಷಿಸಿದೆ. ಪರಿಸರ ಸ್ವಚ್ಛತೆಗೆ ಕೈಜೋಡಿಸದೇ ಇದ್ದರೂ ಪರವಾಗಿಲ್ಲ ನಿಮ್ಮ ಕೈಯಾರೆ ಪರಿಸರ ಮಾಲಿನ್ಯಕ್ಕೆ ಕೈ ಹಾಕಬೇಡಿ ಎಂದು ಕಳಕಳಿಯಿಂದ ಸಮಸ್ತ ನಾಗರಿಕರನ್ನು ಯುವಾ ಬ್ರಿಗೇಡ್ ಕೇಳಿಕೊಂಡಿದೆ.
ಸ್ವಚ್ಛತಾ ಕಾರ್ಯ ಬರುವ ದಿನಗಳಲ್ಲಿ ಮುಂದುವರೆಯಲಿದ್ದು, ಸಾರ್ವಜನಿಕರಿಗೆ ಕೈಜೋಡಿಸಲು ಅವಕಾಶ ಇದೆ.
ವರದಿ : ಶಿಶಿರ ಹೆಗಡೆ.