ಕುಮಟಾ: ತಾಲೂಕಿನ ಪ್ರಸಿದ್ಧ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾದ ಪ್ರಗತಿ ವಿದ್ಯಾಲಯದ ಕನ್ನಡ ಮಾಧ್ಯಮ ಪ್ರೌಢ ಶಾಲೆಯಲ್ಲಿ ವಿದ್ಯಾರ್ಥಿ ಪರಿಷತ್ ನ ಉದ್ಘಾಟನಾ ಕಾರ್ಯಕ್ರಮ ನಡೆಯಿತು.

ಉದ್ಘಾಟಕರಾಗಿ ಶ್ರೀ ಎಂ ಎಚ್ .ಭಟ್ ಪ್ರಾಂಶುಪಾಲರು ಎಸ್ ಡಿ ಎಮ್ ಕಾಲೇಜ್ ಹೊನ್ನಾವರ ಇವರು ಆಗಮಿಸಿದ್ದರು. ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದ ಅವರು ಸಾಮಾಜಿಕ ಕಳಕಳಿ ಹಾಗೂ ಶಾಲೆಯ ಬಗ್ಗೆ ಪ್ರೀತಿಯನ್ನು ಬೆಳೆಸಿಕೊಳ್ಳುವಂತೆ ಕರೆ ನೀಡಿದರು.

RELATED ARTICLES  ಗುರುಪ್ರಸಾದ ಪ್ರೌಢಶಾಲೆಯ ಮುಖ್ಯಾಧ್ಯಾಪಕರಾದ ಶ್ರೀ ಎಮ್. ಟಿ.ಗೌಡರವರಿಗೆ ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ

ಕಾರ್ಯಕ್ರಮದ ಅಧ್ಯಕ್ಷತೆಯನ್ನ ಮುಖ್ಯಾಧ್ಯಾಪಕರಾದ ಶ್ರೀ ವಿ. ಎಸ್.ಗೌಡ ವಹಿಸಿದ್ದರು.
received 2120691021507472
ವೇದಿಕೆಯಲ್ಲಿ ವಿದ್ಯಾರ್ಥಿ ಪರಿಷತ್ತಿನ ಅಧ್ಯಕ್ಷರಾದ ಶ್ರೀ ಎಂ ಆಯ್ ಭಟ್ ಹಾಗು ನಾಗವೇಣಿ ಹೆಗಡೆ ಪ್ರಾಥಮಿಕ ಶಾಲಾ ಮುಖ್ಯಾಧ್ಯಾಪಕರು ಉಪಸ್ಥಿತರಿದ್ದರು.

RELATED ARTICLES  ಆಸ್ತಿಯ ಕಲಹ ಕೊಲೆಯಲ್ಲಿ ಅಂತ್ಯ? ಹೊನ್ನಾವರದಲ್ಲಿ ಕತ್ತಿಯಿಂದ ಹೊಡೆದು ವ್ಯಕ್ತಿಯ ಕೊಲೆ?

ಮೊದಲು ಶ್ರೀ ರಾಘವೇಂದ್ರ ಭಟ್ ಸ್ವಾಗತಿಸಿದರು.ಶ್ರೀ ವಿ .ಜಿ ತಲವಾರ್ ವಿಧ್ಯಾರ್ಥಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಿದರು .ಕುಮಾರಿ ಗೀತಾ ಭಟ್ ವಂದಿಸಿದರು.ಶ್ರೀಮತಿ ಮಾಯಾ ನಾಯ್ಕ ನಿರ್ವಹಿಸಿದರು.