ಮುಜುಂಗಾವು ಶ್ರೀ ಭಾರತೀ ನೇತ್ರ ಚಿಕಿತ್ಸಾಲಯದಲ್ಲಿ ಉಚಿತ ಕಣ್ಣಿನ ಪೊರೆ ತಪಾಸಣಾ, ಶಸ್ತ್ರ ಚಿಕಿತ್ಸಾ ಶಿಬಿರ ಮತ್ತು ನೂತನ ಉಪಕರಣಗಳ ಲೋಕಾರ್ಪಣಾ ಕಾರ್ಯಕ್ರಮವು ಸಂಪನ್ನವಾಯಿತು
ಹೊಸನಗರ ಶ್ರೀ ರಾಮಚಂದ್ರಾಪುರಮಠ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ದಿಗ್ದರ್ಶನದಲ್ಲಿರುವ ಶ್ರೀ ಧರ್ಮ ಚಕ್ರ ಟ್ರಸ್ಟ್ ( ರಿ ), ಶ್ರೀ ಭಾರತೀ ನೇತ್ರ ಚಿಕಿತ್ಸಾಲಯ ಮುಜುಂಗಾವು, ಮತ್ತು ಕಾಸರಗೋಡು ಜಿಲ್ಲಾ ಅಂಧತ್ವ ನಿವಾರಣಾ ಸಮಿತಿ ಇವರ ಆಶ್ರಯದಲ್ಲಿ ಉಚಿತ ಕಣ್ಣಿನ ಪೊರೆ ತಪಾಸಣಾ ಮತ್ತು ಶಸ್ತ್ರ ಚಿಕಿತ್ಸಾ ಶಿಬಿರ ಮುಜುಂಗಾವಿನ ಶ್ರೀ ಭಾರತೀ ನೇತ್ರ ಚಿಕಿತ್ಸಾಲಯದಲ್ಲಿ 17.06.2018 ಆದಿತ್ಯವಾರ ಜರಗಿತು.

ಧ್ವಜಾರೋಹಣ, ಶಂಖನಾದ ಗುರುವಂದನೆಯೊಂದಿಗೆ ಕಾರ್ಯಕ್ರಮವು ಆರಂಭವಾಯಿತು.
ಮುಳ್ಳೇರ್ಯ ಹವ್ಯಕ ಮಂಡಲ ಅಧ್ಯಕ್ಷರಾದ ಪ್ರೊ ಶ್ರೀಕೃಷ್ಣ ಭಟ್ ಅವರು ದೀಪಜ್ವಲನ ಮಾಡಿ ಸಮಾರಂಭದ ಉದ್ಘಾಟನೆ ಮಾಡಿ ಶುಭ ಹಾರೈಸಿದರು.

* ಈ ಸಂದರ್ಭದಲ್ಲಿ ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ ಕೊಚ್ಚಿನ್ ಇವರು ಚಿಕಿತ್ಸಾಲಯಕ್ಕೆ ಕೊಡಮಾಡಿದ ನೂತನ ಉಪಕರಣಗಳಾದ ಸರ್ಜರೀ ಸಹಾಯಿ ಉಪಕರಣ ಓಪರೇಟಿಂಗ್ ಮೈಕ್ರೋಸ್ಕೋಪ್, ಅಟೋ ರಿಫ್ರೇಕ್ಟೋಮೀಟರ್, ರೆಟಿನಾ ಟೆಸ್ಟ್ ಮಾಡುವ ಎ ಸ್ಕೇನ್, ಸ್ಲಿಟ್ ಲೇಂಪ್, ವ್ಯಕ್ತಿಯ ಸ್ತಿತಿ ಮಾಹಿತಿ ಉಪಕರಣ ಯೂನಿಟ್ ಚೆಯರ್ ಇವುಗಳ ಲೋಕಾರ್ಪಣಾ ಕಾರ್ಯಕ್ರಮವು ಯಶಸ್ವಿಯಾಗಿ ಜರಗಿತು.

RELATED ARTICLES  ವಿದ್ಯಾರ್ಥಿಗಳೇ ಗಮನಿಸಿ..: SSLC ಪ್ರಶ್ನೆ ಪತ್ರಿಕೆಯಲ್ಲಿ ಬಹುಮುಖ್ಯ ಬದಲಾವಣೆ..!

– ಸಭಾಸಮಾರಂಭದಲ್ಲಿ ಗೋಕರ್ಣ ಮಹಾ ಮಂಡಲಾಧ್ಯಕ್ಷೆ ಈಶ್ವರೀ ಬೇರ್ಕಡವು ಅಧ್ಯಕ್ಷಸ್ಥಾನ ವಹಿಸಿ ಶುಭಾಶಂಸನೆಯಿತ್ತರು.
ವಿದ್ಯಾಪೀಠ ವಿಧ್ಯಾರ್ಥಿನಿಗಳಿಂದ ಪ್ರಾರ್ಥನೆ ನಡೆಯಿತು. ಆಡಳಿತಾಧಿಕಾರಿಗಳಾದ ಡಾ // ಯಂ ಶ್ರೀಧರ ಭಟ್ ಅವರು ಪ್ರಾಸ್ತಾವಿಕ ಮಾತುಗಳನ್ನಾಡಿ ಚಿಕಿತ್ಸಾಲಯದ ಅಂದು – ಇಂದು – ಮುಂದು ಎಂಬುದಾಗಿ ಯೋಜನೆಗಳ ಬಗ್ಗೆ ಸವಿಸ್ತಾರ ಮಾಹಿತಿಗಳನ್ನಿತ್ತರು. ಡಾ // ಕೆ ವಿ ಶ್ರೀರಾಮ ವೈದ್ಯರು ಕಾಸರಗೋಡು, ಡಾ// ಪ್ರಶಾಂತ ಕುಮಾರ್ ನೇತ್ರ ತಜ್ಞರು , ಡಾ// ಆನಂದ್ ಇವರು ಸಮಾರಂಭದಲ್ಲಿ ಶುಭಾಶಂಸನಾ ನುಡಿಗಳನ್ನಾಡಿದರು.

RELATED ARTICLES  ಉಡುಪಿ: ಪಿಯುಸಿ ಪರೀಕ್ಷೆಯಲ್ಲಿ ಅನುತ್ತೀರ್ಣ – ವಿದ್ಯಾರ್ಥಿನಿ ಆತ್ಮಹತ್ಯೆ

* ಸಭೆಯಲ್ಲಿ – ಚಿಕಿತ್ಸಾಲಯಕ್ಕೆ ಸೂಕ್ತ ಸಮಯದಲ್ಲಿ ನೂತನ ಉಪಕರಣವನ್ನು ಒದಗಿಸುವಲ್ಲಿ ಸಕ್ರಿಯವಾಗಿ ಸಹಕರಿಸಿ ವ್ಯವಸ್ಥೆ ಮಾಡಿದ ಕೃಷ್ಣ ಪ್ರವೀಣ ಓಪ್ಟಿನ್ ಹೆಲ್ತ್ ಕೇರ್ ಮಂಗಳೂರು , ಚಿಕಿತ್ಸಾಲಯದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಸದಾ ಕಾಲ ಸಹಕರಿಸುತ್ತಾ ಬಂದಿರುವ ಡಾ// ಪ್ರಶಾಂತ್ ಕುಮಾರ್ ನೇತ್ರ ತಜ್ಞರು, ಡಾ// ಕಾರ್ತಿಕ್ ವೈದ್ಯರು ಶ್ರೀ ಭಾರತೀ ಸ್ವಾಸ್ಥ್ಯ ಮಂದಿರ , ಡಾ// ಆನಂದ್ ಇವರನ್ನು ಹಾರಾರ್ಪಣೆ ಮಾಡಿ ಶಾಲು ಹೊದೆಸಿ, ಫಲ ಮತ್ತು ಸ್ಮರಣಿಕೆಯನ್ನಿತ್ತು ಸನ್ಮಾನಿಸಲಾಯಿತು.

ಕುಂಬಳೆ ವಲಯಾಧ್ಯಕ್ಷರಾದ ಶ್ರೀ ಬಾಲಕೃಷ್ಣ ಶರ್ಮ ಸ್ವಾಗತಿಸಿ ನೇತ್ರಚಿಕಿತ್ಸಾಲಯದ ಕಾರ್ಯದರ್ಶಿಗಳಾದ ಕೃಷ್ಣ ಮೋಹನ ಭಟ್ ಎಡನಾಡು ಇವರು ಧನ್ಯವಾದವಿತ್ತರು. ಶ್ರೀ ಭಾರತೀ ವಿದ್ಯಾಪೀಠದ ಪ್ರಾಂಶುಪಾಲರಾದ ಶ್ರೀ ಶಾಮ ಭಟ್ ದರ್ಭೆ ಇವರು ಕಾರ್ಯಕ್ರಮದ ನಿರೂಪಣೆಯನ್ನು ಯಶಸ್ವಿಯಾಗಿ ಮಾಡಿದರು.

ಚಿಕಿತ್ಸಾಲಯದ ಆಡಳಿತ ಮಂಡಳಿ ಸದಸ್ಯರು , ಮಂಡಲ ವಲಯದ ಪದಾಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ತಿತರಿದ್ದರು .