ಭಟ್ಕಳ: ವಿದ್ಯಾಂಜಲಿ ಪಬ್ಲಿಕ್ ಸ್ಕೂಲ್ ಭಟ್ಕಳದಲ್ಲಿ ಎಲ್.ಕೆ.ಜಿ ವಿದ್ಯಾರ್ಥಿಗಳಿಗೆ ಅಕ್ಷರಾಭ್ಯಾಸ ಕಾರ್ಯಕ್ರಮವನ್ನು ವೇದಮೂರ್ತಿ ಪ್ರಮೋದ್ ಭಟ್ ರವರು ನೆರವೇರಿಸಿದರು. ಕಾರ್ಯಕ್ರಮದಲ್ಲಿ ಭಟ್ಕಳ್ ಎಜ್ಯುಕೇಷನ್ ಟ್ರಸ್ಟ್ ನ ಅಧ್ಯಕ್ಷರಾದ ಡಾ.ಸುರೇಶ್ ನಾಯ್ಕರವರು, ಟ್ರಸ್ಟಿಯಾದ ರಾಜೇಶ್ ನಾಯ್ಕರವರು, ಭಟ್ಕಳದ ಮಾಜಿ ಶಾಸಕರಾದ ಜೆ.ಡಿ.ನಾಯ್ಕರವರು, ಪ್ರಾಂಶುಪಾಲರಾದ ಜ್ಯೋತಿಷ್ ರವರು ಉಪಸ್ಥಿತರಿದ್ದರು.

RELATED ARTICLES  ದುರ್ಗಾಪರಮೇಶ್ವರಿ ಹೈಯರ್‌ಸೆಕೆಂಡರಿ ಶಾಲಾ ಪ್ರವೇಶೋತ್ಸವ

ವೇದಮೂರ್ತಿ ಲಕ್ಷ್ಮೀಕಾತ್ ಭಟ್ ರವರು ಅಕ್ಷರಾಭ್ಯಾಸದ ಆಚರಣೆಯ ವಿಧಾನ, ಇತಿಹಾಸ ಮತ್ತು ಅದರ ಮಹತ್ವವನ್ನು ವಿವರಿಸಿದರು.
IMG 20180618 WA0003
ಈ ಆಚರಣೆಯು ಧರ್ಮದ ಹಾಗೂ ಸಂಸ್ಕೃತಿಯ ಪ್ರತೀಕವೆಂದು ಕಾರ್ಯಕ್ರಮಕ್ಕೆ ಆಗಮಿಸಿದ ವಿದ್ಯಾರ್ಥಿಗಳ ಪೋಷಕರಿಗೆ ಮನದಟ್ಟು ಮಾಡಿದರು. ಈ ಆಚರಣೆಯನ್ನು ಮಾಡಿದ ವಿದ್ಯಾಂಜಲಿ ಶಾಲೆಗೆ ಪೋಷಕರು ವಂದಿಸಿದರು.

RELATED ARTICLES  ನವೋದಯಕ್ಕೆ ಆಯ್ಕೆ.