ಕುಮಟಾ : ಮಾಧ್ಯಮ ತನ್ನದೇ ಆದ ಪ್ರಾಮುಖ್ಯತೆಯನ್ನು ಪಡೆದಿದ್ದು, ಜನರಲ್ಲಿ ಸಂಚಲನ ಮೂಡಿಸುವ ಶಕ್ತಿಯನ್ನು ಹೊಂದಿದೆ ಎಂದು ಮಿರ್ಜಾನ್ ಜನತಾವಿದ್ಯಾಲಯದ ಮುಖ್ಯಾಧ್ಯಾಪಕ ಬಿ.ಲಕ್ಷ್ಮಣ ಹೇಳಿದರು.
ಅವರು ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಮಿರ್ಜಾನ್ ಜನತಾವಿದ್ಯಾಲಯದಲ್ಲಿ ಮಂಗಳವಾರ ಜರುಗಿದ ಪತ್ರಿಕಾದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಇಂತಹ ಗ್ರಾಮಾಂತರ ಪ್ರದೇಶದಲ್ಲಿ ಪತ್ರಿಕಾ ದಿನಾಚರಣೆಯನ್ನು ಆಚರಿಸಿ ಮಾಧ್ಯಮದ ಕುರಿತಾಗಿ ವಿದ್ಯಾರ್ಥಿಗಳಿಗೆ ತಿಳಿಯಪಡಿಸುತ್ತಿರುವುದು ಶ್ಲಾಘನೀಯವಾಗಿದೆ ಎಂದರು.

ಪತ್ರಕರ್ತರಾದ ಎಂ.ಜಿ.ನಾಯ್ಕ ಮತ್ತು ಗಣೇಶ ರಾವ್, ಮಾಧ್ಯಮಗಳ ಕುರಿತಾಗಿ ಉಪನ್ಯಾಸ ನೀಡಿ, ಸಾಮಾಜಿಕ ಸ್ವಾಸ್ಥ್ಯ ಕಾಪಾಡುವಲ್ಲಿ ಪ್ರಮುಖ ಪಾತ್ರವಹಿಸುತ್ತವೆ. ಮಕ್ಕಳು ಫೆಸ್‍ಬುಕ್, ವಾಟ್ಸ್‍ಅಪ್ ಹಾಗೂ ಇತರೆ ಸಾಮಾಜಿಕ ಜಾಲ ತಾಣಗಳ ಪ್ರಭಾವಕ್ಕೆ ತಮ್ಮ ಭವಿಷ್ಯವನ್ನು ಬಲಿ ಕೊಡದೆ, ಸಾಧನೆ ಪಥದತ್ತ ಗಮನ ಹರಿಸಬೇಕು. ಪತ್ರಿಕೆಗಳನ್ನು ಓದುವ ಅಭಿರುಚಿ ಬೆಳೆಸಿಕೊಂಡು ಜ್ಞಾನಾರ್ಜನೆ ಮಾಡಿಕೊಂಡು, ಉಜ್ವಲ ಭವಿಷ್ಯ ರೂಪಿಸಿಕೊಳ್ಳಬೇಕು ಎಂದರು.

RELATED ARTICLES  ವಾಟ್ಸಫ್ ಫೇಸ್ ಬುಕ್ ನ್ಯೂಸ್ ಗುಂಪುಗಳ ವಿರುದ್ಧ ಸಹಾಯಕ ಆಯುಕ್ತರಿಗೆ ಮನವಿ.

ಕಾರ್ಯನಿರತ ಪತ್ರಕರ್ತ ಸಂಘದ ತಾಲೂಕಾ ಅಧ್ಯಕ್ಷ ಸುಬ್ರಾಯ ಜಿ.ಭಟ್ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಈಗಿನ ಆಧುನಿಕ ಯುಗದಲ್ಲಿ ಮಾಧ್ಯಮ ಕ್ಷೇತ್ರದಲ್ಲೂ ತುರುಸಿನ ಸ್ಪರ್ಧೆ ಎದುರಾಗಿದೆ. ಪತ್ರಕರ್ತರು ತಮ್ಮ ಕಾರ್ಯಗಳ ಬಗೆಗೆ ಆತ್ಮಾವಲೋಕನ ಮಾಡಿಕೊಂಡು ಮೌಲ್ಯಾಧರಿತ ವರದಿಗಳ ಮೂಲಕ ಪ್ರಾಮಾಣಿಕ ಸೇವೆ ಸಲ್ಲಿಸುವ ಮೂಲಕ ಮಾಧ್ಯಮದ ಘನತೆಯನ್ನು ಹೆಚ್ಚಿಸಬೇಕು ಎಂದರು.

ಈ ಸಂದರ್ಭದಲ್ಲಿ ರಾಜ್ಯ ಗುಪ್ತವಾರ್ತೆ ಇಲಾಖೆಯಲ್ಲಿ ದಕ್ಷ ಹಾಗೂ ಪ್ರಾಮಾಣಿಕ ಸೇವೆ ಸಲ್ಲಿಸಿದಕ್ಕೆ ಮುಖ್ಯಮಂತ್ರಿ ಬಂಗಾರದ ಪದಕ ಪುರಸ್ಕøತರಾದ ದೀಪಕ ವಿನೋದ ನಾಯ್ಕ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ವಿದ್ಯಾರ್ಥಿಗಳಿಗೆ ಮೌಲ್ಯಾಧಾರಿತ ಪತ್ರಿಕೋದ್ಯಮ ಕುರಿತಾದ ಪ್ರಬಂಧ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ವಿಜೇತರಾದ ಹರ್ಷಾ ಭಟ್, ಮೇಘ ಗಾಂವ್ಕರ್, ವಾಣಿ ಪಟಗಾರ ಮತ್ತು ಶಿವಾನಿ ನಾಯ್ಕ ನಾಲ್ವರಿಗೆ ಬಹುಮಾನ, ಪ್ರಶಸ್ಥಿ ಪತ್ರ ವಿತರಿಸಲಾಯಿತು.
ಜನತಾವಿದ್ಯಾಲಯದ ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ಪತ್ರಕರ್ತ ಪ್ರವೀಣ ಹೆಗಡೆ ಸ್ವಾಗತಿಸಿ ನಿರೂಪಿಸಿದರು. ಪತ್ರಕರ್ತ ಸಂಘದ ಕಾರ್ಯದರ್ಶಿ ಜಿ.ಡಿ.ಶಾನಭಾಗ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕಿ ಉಮಾ ಹೆಗಡೆ ವಂದಿಸಿದರು. ಪತ್ರಕರ್ತರಾದ ಚರಣರಾಜ್ ನಾಯ್ಕ, ನಾಗರಾಜ ಪಟಗಾರ, ಚಂದ್ರಕಾಂತ ನಾಯ್ಕ, ಅಣ್ಣಪ್ಪ ಮಡಿವಾಳ, ಗಣಪತಿ ನಾಯ್ಕ, ಮಯೂರ ಪಟಗಾರ, ಪವನ ಹೆಗಡೆ, ಶಾಲಾ ಶಿಕ್ಷಕರು, ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಇದ್ದರು.

RELATED ARTICLES  "ಗೋಕರ್ಣ ಗೌರವ" ಕಾರ್ಯಕ್ರಮದಲ್ಲಿ ಭಾಗವಹಿಸಿದ ಶ್ರೀ ಶ್ರೀ ಮಡಿವಾಳಯ್ಯ ಸ್ವಾಮಿಗಳು.