ಕೆಲವೊಂದು ಸರಳವಾದ ಸೌಂದರ್ಯ ಸಲಹೆಗಳನ್ನು ಕುರಿತು ನಿಮ್ಮ ಅಜ್ಜಿ, ತಂದೆತಾಯಿ ಮತ್ತು ಸ್ನೇಹಿತರಿಂದ ನೀವು ತಿಳಿದುಕೊಂಡಿರಬಹುದು. ನೀವು ನೈಸರ್ಗಿಕವಾಗಿ ಸುಂದರಿಯಾಗಬೇಕೆಂಬ ಬಯಕೆಯಿಂದ ಅವುಗಳಲ್ಲಿ ಯಾವುದಾದರೊಂದನ್ನು ನೀವು ಪ್ರಯತ್ನಿಸಿರಬಹುದು. ನೈಸರ್ಗಿಕವಾಗಿ ಮಾರುಕಟ್ಟೆಯಲ್ಲಿ ಲಭ್ಯವಿರುವ ಹಲವಾರು ಪ್ರಸಾಧನಗಳ ಮೂಲಕ ನೀವು ಇನ್ನಷ್ಟು ಸುಂದರಿಯಾಗಿ ಕಾಣಬಹುದೆಂದು ತಜ್ಞರು ಹೇಳುತ್ತಾರೆ.
ಭಾರತೀಯ ಮಹಿಳೆಯರು ಮೇಕಪ್ ಇಲ್ಲದಿದ್ದರೂ ಸುಂದರಿಯರು ಎಂಬ ನಾಣ್ಣುಡಿ ಒಂದಿದೆ. ಆದ್ದರಿಂದ ನಿಮ್ಮನ್ನು ನೈಸರ್ಗಿಕವಾಗಿ ಸುಂದರಗೊಳಿಸುವ ಕೆಲವೊಂದು ವಿಧಾನಗಳ ಮೂಲಕ ನಿಮ್ಮ ಸೌಂದರ್ಯವನ್ನು ಇನ್ನಷ್ಟು ಚೆಂದಗಾಣಿಸೋಣ. ನೀವು ಪ್ರಯತ್ನಿಸಲೇಬೇಕಾದಂತಹ ಕೆಲವೊಂದು ನೈಸರ್ಗಿಕ ವಿಧಾನಗಳನ್ನು ಇಂದು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿವೆ.ಮೊಡವೆ ಕಪ್ಪು ಕಲೆಗಳನ್ನು ಹೋಗಲಾಡಿಸುವುದನ್ನು ಕುರಿತು ಚಿಂತಿತರಾಗಿರುವಿರಾ? ಹಾಗಿದ್ದರೆ ಇಲ್ಲಿ ನೀಡಿರುವ ನೈಸರ್ಗಿಕ ವಿಧಾನಗಳನ್ನು ಅನುಸರಿಸಿ ಅವುಗಳಿಂದ ಮುಕ್ತಿ ಪಡೆಯಿರಿ.
1.ಫೇಸ್ ಪ್ಯಾಕ್‌ಗಳು:
ನೀವು ಒಣಗಿದ ಚರ್ಮವನ್ನು ಹೊಂದಿರುವಿರಾ? ಇದನ್ನು ಪ್ರಯತ್ನಿಸಿ. ಸುಂದರವಾದ ವದನವನ್ನು ಪಡೆದುಕೊಳ್ಳಲು ಈ ನೈಸರ್ಗಿಕ ಸೌಂದರ್ಯ ವಿಧಾನವನ್ನು ಅನುಸರಿಸಿ. ಇದಕ್ಕೆ ನೀವು ಮಾಡಬೇಕಾಗಿರುವುದು ಇಷ್ಟೇ ಓಟ್ ಹುಡಿಯನ್ನು ಎರಡು ಟೇಸ್ಫೂನ್ ಜೇನಿನೊಂದಿಗೆ ಮಿಶ್ರ ಮಾಡಿಕೊಳ್ಳಿ, ಇದಕ್ಕೆ ಒಂದು ಟೇಸ್ಫೂನ್ ಸೂರ್ಯಕಾಂತಿ ಎಣ್ಣೆ ಮತ್ತು ಅರ್ಧ ಚಮಚ ವೆನಿಲ್ಲಾ ಪುಡಿಯನ್ನು ಸೇರಿಸಿ ನೀರು ಹಾಕಿ ಮಿಶ್ರ ಮಾಡಿಕೊಳ್ಳಿ. ತ್ವಚೆಗೆ ಈ ಮಿಶ್ರಣವನ್ನು ಹಚ್ಚಿಕೊಂಡು 15 ನಿಮಿಷಗಳ ನಂತರ ತೊಳೆದುಕೊಳ್ಳಿ.
2.ಮೊಡವೆಗಾಗಿ ನೈಸರ್ಗಿಕ ಪರಿಹಾರ:
ಇದರಿಂದ ಮುಕ್ತಿ ಪಡೆದುಕೊಳ್ಳಲು ಬೇಕಿಂಗ್ ಸೋಡಾವನ್ನು ನೀರಿನೊಂದಿಗೆ ಮಿಶ್ರ ಮಾಡಿಕೊಂಡು ದಪ್ಪನೆಯ ಪೇಸ್ಟ್ ಮಾಡಿಕೊಳ್ಳಿ. ಮೊಡವೆ ಇರುವ ಭಾಗಕ್ಕೆ ಈ ಮಿಶ್ರಣವನ್ನು ಹಚ್ಚಿಕೊಂಡು ಸ್ವಚ್ಛ ಬಟ್ಟೆಯಿಂದ ಅದನ್ನು ಮುಚ್ಚಿ. ರಾತ್ರಿ ಪೂರ್ತಿ ಹಾಗೆಯೇ ಇಟ್ಟು ಮರುದಿನ ತೊಳೆದುಕೊಳ್ಳಿ. ನಿಮ್ಮನ್ನು ಇನ್ನಷ್ಟು ಸುಂದರಗೊಳಿಸಲು ಇದೊಂದು ಉತ್ತಮ ಸೌಂದರ್ಯ ಸಲಹೆಯಾಗಿದೆ.
3.ಕಪ್ಪುಕಲೆಗಳ ನಿವಾರಣೆಗೆ:
ತೆಂಗಿನ ಎಣ್ಣೆ ಮತ್ತು ಲಿಂಬೆ ರಸವನ್ನು ಮಿಶ್ರ ಮಾಡಿಕೊಂಡು ಕಪ್ಪು ಕಲೆಗಳಿರುವ ಜಾಗಕ್ಕೆ ವೃತ್ತಾಕಾರವಾಗಿ ಉಜ್ಜಿಕೊಳ್ಳಿ. ಆ ಜಾಗ ಮೃದುವಾಗಿದೆ ಎಂಬ ಭಾವನೆ ನಿಮಗುಂಟಾದರೆ ನಯವಾಗಿ ಅದನ್ನು ಉಜ್ಜಿ.
4.ನೈಸರ್ಗಿಕ ಮಾಯಿಶ್ಚರೈಸರ್:
ಇದೊಂದು ಉತ್ತಮ ನೈಸರ್ಗಿಕ ಸಲಹೆಯಾಗಿದ್ದು, ನಿಮ್ಮ ತ್ವಚೆಯನ್ನು ಕಾಂತಿಯುಕ್ತಗೊಳಿಸುತ್ತದೆ. ತರಕಾರಿ ಎಣ್ಣೆಯು ಚರ್ಮವನ್ನು ಮೃದುವಾಗಿಸುವುದರೊಂದಿಗೆ ಅದಕ್ಕೆ ಹೊಳಪು ನೀಡುತ್ತದೆ. ತ್ವಚೆಗೆ ಎಣ್ಣೆಯನ್ನು ಹಚ್ಚಿಕೊಂಡು 30 ನಿಮಿಷಗಳವರೆಗೆ ಹಾಗೆಯೇ ಬಿಡಿ. ನಿಮ್ಮ ಮುಖವನ್ನು ತಂಪಾದ ನೀರಿನಿಂದ ತೊಳೆದುಕೊಳ್ಳಿ.
5.ನೈಸರ್ಗಿಕ ಸ್ಪಾ:
ನೈಸರ್ಗಿಕ ಸ್ಪಾವನ್ನು ವಾರದಲ್ಲೊಮ್ಮೆ ಮಾಡುವುದು ಅಗತ್ಯವಾದುದಾಗಿದೆ. ಓಟ್ಸ್ ಪೌಡರ್, ಉಪ್ಪು, ತರಕಾರಿ ಎಣ್ಣೆ 2 ಟೇಸ್ಪೂನ್, ವೆನಿಲ್ಲಾ ಹುಡಿಯನ್ನು ಸ್ನಾನದ ನೀರಿಗೆ ಹಾಕಿಕೊಳ್ಳಿ. ಐದು ನಿಮಿಷದ ನಂತರ ಆ ನೀರಿನಲ್ಲಿ ನೆನೆಯಿರಿ.
6.ನಗು:
ನಿಮ್ಮ ಹಲ್ಲನ್ನು ಬೆಳ್ಳಗಾಗಿಸಿ. ನಿಮ್ಮ ಹಲ್ಲುಗಳನ್ನು ದಿನಕ್ಕೆರಡು ಬಾರಿ ತೊಳೆದುಕೊಳ್ಳುವುದು ನಿಮ್ಮ ಹಲ್ಲಿನ ಹೊಳಪನ್ನು ಕಾಪಾಡುತ್ತದೆ. ನಿಮ್ಮ ಹಲ್ಲಿಗೆ ಹಾನಿಯಾಗುವ ಯಾವುದೇ ಪಾನೀಯಗಳನ್ನು ತೆಗೆದುಕೊಳ್ಳಬೇಡಿ.
7.ಮನೆಯಲ್ಲೇ ತಯಾರಿಸಬಹುದಾದ ಕಂಡೀಷನರ್:
ಇದೊಂದು ಸರಳವಾದ ಸೌಂದರ್ಯ ವಿಧಾನವಾಗಿದೆ. 1 ಟೇ ಸ್ಫೂನ್ ಜೇನು ಮತ್ತು 2 ಟೇ.ಸ್ಫೂನ್ ಕ್ರೀಂ ಅನ್ನು ಜೊತೆಯಾಗಿ ಮಿಶ್ರ ಮಾಡಿಕೊಳ್ಳಿ. ಈ ಮಿಶ್ರಣವನ್ನು ನಿಮ್ಮ ಮುಖಕ್ಕೆ ಹಚ್ಚಿಕೊಳ್ಳಿ 10 ನಿಮಿಷದ ನಂತರ ತೊಳೆದುಕೊಳ್ಳಿ.