ಕುಮಟಾ: ಇಲ್ಲಿನ ಕೊಂಕಣ ಎಜ್ಯುಕೇಶನ್ ಟ್ರಸ್ಟ್‍ನ ಸಿ.ವಿ.ಎಸ್.ಕೆ ಪ್ರೌಢಶಾಲೆ, ಬಿ.ಕೆ.ಭಂಡಾರ್ಕರ್‍ರವರ ಸರಸ್ವತಿ ಪ.ಪೂ ಕಾಲೇಜಿನ 2017-18ನೇ ಸಾಲಿನ ಎಸ್.ಎಸ್.ಎಲ್.ಸಿ ಹಾಗೂ ಪಿಯುಸಿ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗಾಗಿ ಪ್ರತಿಭಾ ಪುರಸ್ಕಾರ ಹಾಗೂ ಶಿಕ್ಷಕರಿಗೆ ಅಭಿನಂದನಾ ಕಾರ್ಯಕ್ರಮವನ್ನು ಸರಸ್ವತಿ ಮಾಳಪ್ಪ ಕಾಮತ ಕೃಷಿ-ವೃತ್ತಿ ಮತ್ತು ಕೌಶಲ್ಯ ಅಭಿವೃದ್ಧಿ ಸಂಸ್ಥೆಯ ಸಭಾಭವನದಲ್ಲಿ ಏರ್ಪಡಿಸಲಾಗಿತ್ತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಶ್ರೀಮತಿ ಪೂರ್ಣಿಮಾ ಪೈ, ಹಿರಿಯ ಸಿವಿಲ್ ನ್ಯಾಯಾಧೀಶರು, ಕುಮಟಾ ಇವರು “ಧನಾತ್ಮಕ ಚಿಂತನೆಯೊಂದಿಗೆ ಸತತ ಪ್ರಯತ್ನ ನಡೆಸಿದ್ದಲ್ಲಿ ಯಶಸ್ಸು ಕಟ್ಟಿಟ್ಟ ಬುತ್ತಿ. ವಿದ್ಯಾರ್ಥಿಗಳು ಕೇವಲ ಎಂಜಿನಿಯರಿಂಗ್, ಮೆಡಿಕಲ್ ವೃತ್ತಿಗಳಷ್ಟಕ್ಕೆ ಮಾತ್ರ ಅಂಟಿಕೊಳ್ಳದೇ, ಕಾನೂನು ಇನ್ನಿತರ ವೃತ್ತಿಗಳಲ್ಲಿಯೂ ತೊಡಗಿಸಿಕೊಳ್ಳುವುದರ ಮೂಲಕ ಸಮಾಜ ಸೇವೆ ಮಾಡಬೇಕು” ಎಂದರು.
ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಶ್ರೀ ಪಿ.ಕೆ.ಪ್ರಕಾಶ, ನಿವೃತ್ತ ಡಿ.ಡಿ.ಪಿ.ಐ, ಕಾರವಾರ ಇವರು ಮಾತನಾಡಿ, “ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವ ಮೌಲ್ಯಗಳು ಮತ್ತು ಸಂಸ್ಕೃತಿ ಅವರ ಉಜ್ವಲ ಭವಿಷ್ಯವನ್ನು ರೂಪಿಸಬಲ್ಲವು. ವಿದ್ಯಾರ್ಥಿ ಜೀವನದಲ್ಲಿ ಪ್ರಾಮಾಣ ಕತೆ, ಶ್ರದ್ಧೆ, ನಿಷ್ಠೆ ಹಾಗೂ ಸತತ ಪ್ರಯತ್ನ ಅವರನ್ನು ಎತ್ತರಕ್ಕೆ ಒಯ್ಯಬಲ್ಲವು” ಎಂದರು. ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಉಪಾಧ್ಯಕ್ಷರಾದ ಶ್ರೀ ವಿಠ್ಠಲ್ ಆರ್.ನಾಯಕ ಮಾತನಾಡಿ, “ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಲು ಸಂಸ್ಥೆ ಎಲ್ಲಾ ರೀತಿಯ ಸಹಕಾರವನ್ನು ನೀಡುತ್ತದೆ. ಪ್ರತಿಭಾವಂತ ವಿದ್ಯಾರ್ಥಿಗಳು ದೇಶದ ಆಸ್ತಿಯಾಗಬೇಕು” ಎಂದರು. ಶೈಕ್ಷಣ ಕವಾಗಿ ಸಾಧನೆಗೈದು ಶಾಲೆ-ಕಾಲೇಜಿಗೆ ಕೀರ್ತಿ ತಂದ ಎಲ್ಲಾ ವಿದ್ಯಾರ್ಥಿಗಳನ್ನು ವಿಶಿಷ್ಟ ರೀತಿಯಲ್ಲಿ ಸನ್ಮಾನಿಸಲಾಯಿತು. ತರುವಾಯ, ಈ ಸಾಧನೆಗೆ ಕಾರಣ ೀಕರ್ತರಾದ ಶಿಕ್ಷಕರನ್ನೂ ಅಭಿನಂದಿಸಲಾಯಿತು.
ಈ ಸಂದರ್ಭದಲ್ಲಿ ಕೊಂಕಣದ ಎಲ್ಲಾ ಅಂಗ ಸಂಸ್ಥೆಗಳ ಮುಖ್ಯಸ್ಥರನ್ನು ಸಂಸ್ಥೆಯ ವತಿಯಿಂದ ಪುರಸ್ಕರಿಸಲಾಯಿತು. ಸಂಸ್ಥೆಯ ಗೌರವ ಕಾರ್ಯದರ್ಶಿಗಳಾದ ಶ್ರೀ ಮುರಲೀಧರ ಪ್ರಭು ಪ್ರಾಸ್ತಾವಿಕ ಮಾತನಾಡಿ ಸ್ವಾಗತಿಸಿದರು. ಪ್ರೌಢಶಾಲೆಯ ಮುಖ್ಯಾಧ್ಯಾಪಕಿ ಶ್ರೀಮತಿ ಸುಮಾ ಪ್ರಭು ಹಾಗೂ ಕಾಲೇಜಿನ ಪ್ರಾಚಾರ್ಯೆ ಶ್ರೀಮತಿ ಸುಲೋಚನಾ ರಾವ್ ಫಲಿತಾಂಶ ವಿಶ್ಲೇಷಣೆ ಮಾಡಿದರು. ವಿಶ್ವಸ್ಥರುಗಳಾದ ಸಹಕಾರ್ಯದರ್ಶಿ ಶ್ರೀ ಶೇಷಗಿರಿ ಶಾನಭಾಗ, ಶ್ರೀ ರಮೇಶ ಪ್ರಭು, ಶ್ರೀ ದಾಸಾ ಶಾನಭಾಗ, ಶ್ರೀ ಅಶೋಕ ಪ್ರಭು ಹಾಗೂ ಪ್ರೌಢಶಾಲೆಯ ಸಲಹೆಗಾರರಾದ ಶ್ರೀ ಆರ್.ಎಚ್.ದೇಶಭಂಢಾರಿ, ಕಾಲೇಜಿನ ಸಲಹೆಗಾರರಾದ ಶ್ರೀಮತಿ ಲೀಲಾವತಿ ನಾಯಕ, ಕೊಂಕಣ ಅಂಗ ಸಂಸ್ಥೆಗಳ ಮುಖ್ಯಾಧ್ಯಾಪಕಿಯರಾದ ಶ್ರೀಮತಿ ಸುಜಾತಾ ನಾಯ್ಕ, ಸಾವಿತ್ರಿ ಹೆಗಡೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಶಿಕ್ಷಕರ ಪರವಾಗಿ ಶ್ರೀ ಶಿವಾನಂದ ಭಟ್ಟ ಅಭಿನಂದನೆಗಳನ್ನರ್ಪಿಸಿದರು, ಶ್ರೀ ಚಿದಾನಂದ ಭಂಡಾರಿ ಅತಿಥಿಗಳನ್ನು ಪರಿಚಯಿಸಿದರು, ಶ್ರೀ ಪ್ರಕಾಶ ಗಾವಡಿ ನಿರೂಪಿಸಿದರು, ವಿದ್ಯಾರ್ಥಿಗಳಾದ ತೇಜಸ್ವಿನಿ ಸಂಗಡಿಗರು ಪ್ರಾರ್ಥಿಸಿದರು, ವಿಶ್ವಸ್ಥರಾದ ಶ್ರೀ ಡಿ.ಡಿ.ಕಾಮತ ಧನ್ಯವಾದ ಸಮರ್ಪಿಸಿದರು.