ದೇಶದ ಟೆಲಿಕಾಂ ಕ್ಷೇತ್ರದಲ್ಲಿ ಕಳೆದ ಒಂದು ವರ್ಷದಲ್ಲಿ ಆಗಿರುವ ಬೆಳವಣಿಗೆ, ಬದಲಾವಣೆಗಳನ್ನು ನೋಡಿದ್ರೆ ಖಂಡಿತ ಆಶ್ಚರ್ಯ ಆಗತ್ತೆ! ಪ್ರಸ್ತುತ ಟೆಲಿಕಾಂ ಕಂಪನಿಗಳ ಮಧ್ಯೆ ಡೇಟಾ ಸಮರ ತುಂಬಾ ಜೋರಾಗಿ ನಡೆದಿದೆ. ತಮ್ಮ ಗ್ರಾಹಕರನ್ನು ಆಕರ್ಷಿಸಲು ಅಗ್ಗದ ದರದ ಯೋಜನೆಗಳನ್ನು ಪರಿಚಯಿಸುತ್ತಿವೆ. ಇದರಲ್ಲಿ ಜಿಯೋ, ಏರ್ಟೆಲ್ ಮುಂಚೂಣಿಯಲ್ಲಿದ್ದರೆ ಸರ್ಕಾರಿ ಸ್ವಾಮ್ಯದ ಬಿಎಸ್‌ಎನ್‌ಎಲ್ ಕೂಡ ಹಿಂದೆ ಬಿದ್ದಿಲ್ಲ.

RELATED ARTICLES  ನಾಗರಾಜ ನಾಯಕರ 'ಬೆಳಕಿನತ್ತ ಜನತೆಯ ಚಿತ್ತ'.

ಗ್ರಾಹಕರನ್ನು ಸೆಳೆಯಲು ಹಲಚು ಪ್ಲಾನ್ ಪರಿಚಯಿಸಿರುವ ಬಿಎಸ್‌ಎನ್‌ಎಲ್ 5G ಸೇವೆ ಒದಗಿಸಲು ತಯಾರಿ ನಡೆಸಿದ್ದು, 2020 ರ ವೇಳೆಗೆ 5 ಜಿ ಸೇವೆಯನ್ನು ಶುರು ಮಾಡಲಿದೆ ಎಂದು ಬಿಎಸ್‌ಎನ್‌ಎಲ್ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕ ಅನುಪಮ್ ಶ್ರೀವಾಸ್ತವ್ ಸಂಗತಿ ತಿಳಿಸಿದ್ದಾರೆ.

ಬಿಎಸ್‌ಎನ್‌ಎಲ್ ಭಾರತದಲ್ಲಿ ಮೊಟ್ಟ ಮೊದಲ ಬಾರಿ 3 ಜಿ ಸೇವೆ ನೀಡಿದ್ದು, ದೇಶದಲ್ಲಿ 5 ಜಿ ಸೇವೆ ಶುರುವಾದರೆ ಡಿಜಿಟಲ್ ಇಂಡಿಯಾಕ್ಕೆ ಬೆಂಬಲ ಹಾಗು ವೇಗ ಸಿಗಲಿದೆ ಎಂದಿದ್ದಾರೆ. ಪ್ರಸ್ತುತ ಬಿಎಸ್‌ಎನ್‌ಎಲ್ ಭಾರತದಾದ್ಯಂತ 4 ಜಿ ಸೇವೆಗಳನ್ನು ಆಕರ್ಷಕ ಪೋಸ್ಟ್ಪೇಯ್ಡ್ ಮತ್ತು ಪ್ರಿಪೇಡ್ ಆಫರ್ ಗಳೊಂದಿಗೆ ಒದಗಿಸುತ್ತಿದೆ. ಬಿಎಸ್‌ಎನ್‌ಎಲ್ ಪ್ರಸ್ತುತ ಅಖಿಲ ಭಾರತ ರೋಮಿಂಗ್ ಉಚಿತ ಕವರೇಜ್, ಅನಿಯಮಿತ ಕರೆ ಮತ್ತು ಡಾಟಾ ಪ್ಯಾಕ್ ಗಳನ್ನು ಒದಗಿಸುತ್ತಿದೆ.

RELATED ARTICLES  ಮಿರ್ಜಾನಿನ ಬಿಜಿಎಸ್ ಕೇಂದ್ರೀಯ ವಿದ್ಯಾಲಯದಲ್ಲಿ ನವೆಂಬರ್ 26ರಂದು ಸಂವಿಧಾನ ದಿನ ಆಚರಣೆ.

ಮಾಹಿತಿ : ಗುಡ್ ರಿಟರ್ನ್ಸ