ಸನ್ಮಾನ್ಯ ಶ್ರೀ ಕೃಷ್ಣ ಉದಪುಡಿ ನಿವೃತ್ತ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಯವರಿಗೆ ಸನ್ಮಾನ ಸಮಾರಂಭ ಯಶಸ್ವಿಯಾಗಿ ಸಂಪನ್ನವಾಯಿತು.

ಈ ಸಂದರ್ಭದಲ್ಲಿ ಶ್ರೀ ಆರ್.ಜಿ. ಭಟ್ಟ, ಉಪ ಅರಣ್ಯ ಸಂರಕ್ಷಣಾಧಿಕಾರಿಗಳು ಸಾಮಾಜಿಕ ಅರಣ್ಯ ವಿಭಾಗ ಉಡುಪಿ ಜಿಲ್ಲೆರವರು ಇವತ್ತಿನ ಸಮಾರಂಭದ ಕುರಿತು ಮಾತನಾಡಿ ನಾನು ಕುಮಟಾ ಉಪವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾಗ ಅವರು ಹಾಕಿಕೊಟ್ಟ ದಾರಿ ಹಾಗೂ ಅವರು ಹುರಿದುಂಬಿಸುತ್ತಿರುವ ಸೇವೆಯ ಬಗ್ಗೆ ವಿವರಿಸಿ ಇವತ್ತು ಹೊನ್ನಾವರ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸಲು ಮಾನ್ಯರವರು ಕೈಗೊಂಡ ದಕ್ಷ ಆಡಳಿತವೇ ಮಾದರಿಯಾಗಿರುತ್ತದೆ ಎಂದರು.

ಸನ್ಮಾನ್ಯ ಶ್ರೀ ಕೆ.ಡಿ. ಉದಪುಡಿ ನಿವೃತ್ತ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳು ಸನ್ಮಾನ ಸ್ವೀಕರಿಸಿ ಮಾತನಾಡಿ ಅರಣ್ಯ ಸೇವೆ ಪ್ರಕೃತಿಯನ್ನು ಸುಸ್ಥಿರವಾಗಿ ಉಳಿಸಿಕೊಳ್ಳುವುದು ನಮ್ಮೆಲ್ಲರ ಮುಖ್ಯ ಕರ್ತವ್ಯವಾಗಿರುತ್ತದೆ. ನಾನು ಹೊನ್ನಾವರ ವಿಭಾಗಕ್ಕೆ ಕರ್ತವ್ಯ ನಿರ್ವಹಿಸುತ್ತಿದ್ದಾಗ ಅನೇಕ ಅಡತಡೆಗಳು ಬಂದರೂ ಎದೆಗುಂದದೆ ಅರಣ್ಯ ಸಂರಕ್ಷಣೆಗಾಗಿ ಸಿಬ್ಬಂದಿಗಳ ಸಹಕಾರದೊಂದಿಗೆ ಹೊನ್ನಾವರ ವಿಭಾಗದ ಎಲ್ಲಾ ಅನಧೀಕೃತ ಕ್ವಾರಿಗಳನ್ನು ಬಂದು ಮಾಡಿ ಕ್ವಾರಿ ಸ್ಥಳದಲ್ಲಿ ವಿಶೇಷವಾಗಿ ಅನುದಾನ ತಂದು ಗಿಡಗಳನ್ನು ನೆಡಲಾಗಿದೆ. ಇಂತಹ ಪ್ರದೇಶವನ್ನು ನಾವೆಲ್ಲರೂ ಮುಂದಿನ ಜನಾಂಗಕ್ಕೆ ಉಳಿಸಿಕೊಂಡು ಹೋಗುವದು ಮುಖ್ಯ ಆದ್ಯತೆಯಾಗಿರುತ್ತದೆ. ಹೊನ್ನಾವರ ವಿಭಾಗದಲ್ಲಿ ಅನೇಕ ಪರಿಸರ ಪ್ರವಾಸೋದ್ಯಮ ಪ್ರದೇಶವಿದ್ದು ಅದರ ಅಭಿವೃದ್ಧಿಗೆ ಮೂಲ ಸ್ಪೂರ್ತಿದಾರರಾಗಲು ಅರಣ್ಯಾಧಿಕಾರಿಗಳ ಸಹಕಾರ ಅತ್ಯುತ್ತಮವಾಗಿದೆ. ಈಗಾಗಲೇ ಹೊನ್ನಾವರ ವಿಭಾಗದಲ್ಲಿ ಇಡಗುಂಜಿ ದೈವೀವನ, ಅಪ್ಸರಕೊಂಡ, ಇಕೋಬೀಚ್, ಬೆಳ್ಳಂಗಿ ನೇಚರ ಕ್ಯಾಂಪ್, ಓಂಬೀಚ್ ಗಾರ್ಡನ್ ಮುಂತಾದ ಅಭಿವೃದ್ಧಿ ಚಟುವಟಿಕೆಗಳನ್ನು ಕೈಗೊಂಡಿದ್ದು ಅದರ ನಿರ್ವಹಣೆ ಅತೀ ಮುಖ್ಯವಾಗಿರುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

RELATED ARTICLES  ಉತ್ತರ ಕೊಪ್ಪ ಗುಜಮಾವಿನಲ್ಲಿ ದೇವಾಲಯದ ಮೇಲೆ ಮರಬಿದ್ದು ಹಾನಿ.

ಅಧ್ಯಕ್ಷತೆ ವಹಿಸಿದ ಶ್ರೀ ವಸಂತ ರೆಡ್ಡಿ, ಆಯ್.ಎಫ್.ಎಸ್. ಉಪಸಂರಕ್ಷಣಾಧಿಕಾರಿಗಳು ಹೊನ್ನಾವರ ವಿಭಾಗ ಹೊನ್ನಾವರ ಸನ್ಮಾನಿತರಿಗೆ ಸನ್ಮಾನಿಸಿ ಮಾನ್ಯರವರ ಬಗ್ಗೆ ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದರು. ಶ್ರೀ ಕೆ.ಡಿ.ಉದಪುಡಿಯವರು ಹಾಕಿಕೊಟ್ಟ ಕರ್ತವ್ಯದ ದಾರಿಯು ಈಗ ನಮ್ಮೆಲ್ಲರ ಯುವಜನತೆ, ಸಿಬ್ಬಂದಿಗಳಿಗೆ ಸಹಕಾರಿಯಾಗಿದೆ. ಅವರು ಕೈಗೊಂಡ ಅನೇಕ ಅಭಿವೃದ್ಧಿ ಕಾರ್ಯಕ್ರಮಗಳನ್ನು ನಾವೆಲ್ಲರೂ ಸೇರಿ ನಿರ್ವಹಣೆ ಮಾಡಿಕೊಂಡು ಹೋಗುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿರುತ್ತದೆ. ಅದರಲ್ಲೂ ವಿಶೇಷವಾಗಿ ಹೊನ್ನಾವರ ವಿಭಾಗದ ಎಲ್ಲಾ ಕ್ವಾರಿಗಳನ್ನು ಬಂದು ಮಾಡಿ ಗಿಡಗಳನ್ನು ಬೆಳೆಸಿದಕ್ಕೆ ನಮ್ಮ ರಾಜ್ಯಕ್ಕೆ ಒಂದು ಮಾದರಿಯ ಉತ್ತಮ ಅಧಿಕಾರಿಯಾಗಿ ಹೊರಹೊಮ್ಮಿದ್ದಾರೆ. ಅವರು ಈ ವಿಭಾಗದಲ್ಲಿ ಉಪ ಅರಣ್ಯ ಸಂರಕ್ಷಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವಾಗ ಭಟ್ಕಳದಲ್ಲಿ ನಡೆದಂತಹ ಒಂದು ಕರ್ತವ್ಯನಿಷ್ಠೆ ಇಂದಿಗೂ ನಮಗೆ ನೆನಪಿರಲು ಸಹಕಾರಿಯಾಗಿರುತ್ತದೆ. ಅವರು ಕರ್ತವ್ಯ ನಿರ್ವಹಿಸಿದ ಎಲ್ಲಾ ಕಡೆಗಳಲ್ಲಿ ಅವರ ಒಂದು ಸಾಧನೆಯು ಈಗಾಗಲೇ ಅವರ ಅಭಿಮಾನಿಗಳು ವ್ಯಕ್ತಪಡಿಸಿದ್ದಾರೆ. ಉದಾಹರಣೆಗಾಗಿ ಆಲಮಟ್ಟಿ ಗಾರ್ಡನ್ ಇನ್ನೂ ವಿಶೇಷತೆಯನ್ನು ಪಡೆದುಕೊಂಡಿದೆ. ಅದರಲ್ಲೂ ಬೇರೆ ಇಲಾಖೆಗಳಲ್ಲಿ ಕೊಪ್ಪಳ ಜಿಲ್ಲೆಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಕೆಲಸ ನಿರ್ವಹಿಸಿ ಪ್ರಧಾನಿಯವರ ಸ್ವಚ್ಛ ಭಾರತ ಯೋಜನೆಯಡಿಯಲ್ಲಿ ಈಡೀ ಜಿಲ್ಲೆಯಾದ್ಯಂತ ಶೌಚಾಲಯಗಳನ್ನು ನಿರ್ಮಿಸಿ ಈಡೀ ದೇಶಕ್ಕೆ ಮಾದರಿಯಾಗಿ ಪ್ರಶಸ್ತಿಗೆ ಬಾದಕರಾಗಿರುತ್ತಾರೆ. ಇಂತಹ ಅಧಿಕಾರಿಗಳು ನಮಗೆ ಸಿಕ್ಕಿರುವುದು ಅತ್ಯಂತ ಸಂತೋಷದ ವಿಷಯ. ಇಂತಹ ಅಧಿಕಾರಿಗಳಿಗೆ ದೇವರು ಆರೋಗ್ಯ, ಐಶ್ವರ್ಯ ಕೊಟ್ಟು ಸದಾ ನಮ್ಮ ಹೊನ್ನಾವರ ವಿಭಾಗ ನೆನಪಿನಲ್ಲಿಟ್ಟುಕೊಳ್ಳಲು ಶಿರಾಲಿಯಲ್ಲಿ ರಕ್ಷಣಾ ಶಿಬಿರಕ್ಕೆ ಕೃಷ್ಣ ಅಂತಾ ಹೆಸರಿಟ್ಟು ಅವರು ನೆನಪಿಸಿಕೊಳ್ಳಲು ವಿಶೇಷವಾಗಿರುತ್ತದೆ ಎಂದು ತಿಳಿಸಿದರು.

RELATED ARTICLES  ಇನ್ನೂ ದೊರೆಯದ ತ್ರಿವೇಣಿ ಅಂಬಿಗಳ ಶವ

ಶ್ರೀ ಮಂಜುನಾಥ ನಾವಿ, ಶ್ರೀ ಬಿ.ಎಸ್. ಗೊಂಡ, ಶ್ರೀ ಜಿ.ವಿ. ನಾಯ್ಕ, ಶ್ರೀ ವಿ.ಎಚ್. ನಾಯ್ಕ, ಶ್ರೀ ಉಮೇಶ ಭಟ್ಟ ಮುಂತಾದವರು ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದರು. ಶ್ರೀ ಸಿ.ಎನ್. ಹರೀಶರವರು ಕಾರ್ಯಕ್ರಮವನ್ನು ರೂಪಿಸಿದರು. ಶ್ರೀ ರಾಜು ನಾಯ್ಕ, ಕಾರ್ಯಕ್ರಮ ಸಂಘಟಿಸಿದರು. ಶ್ರೀ ಪ್ರವೀಣ ನಾಯಕ ಕಾರ್ಯಕ್ರಮಕ್ಕೆ ವಂದನಾರ್ಪಣೆ ಮಾಡಿದರು.