ಕುಮಟಾ : ನಮ್ಮ ದೇಹ ಮನಸ್ಸು, ಬುದ್ಧಿಗಳನ್ನೆಲ್ಲ ಶ್ರುತಿಗೊಳಿಸುವಂತಹ ಅಪೂರ್ವ ಅಭ್ಯಾಸ ಯೋಗ. ಈ ಕಾರಣದಿಂದಲೇ ವಿಶ್ವಸಂಸ್ಥೆಯು ಜೂನ್ 21ನ್ನು ‘ವಿಶ್ವಯೋಗ ದಿನ’ ಎಂದು ಘೋಷಿಸಿತು. ಭಾರತೀಯ ಮೂಲದ ಈ ಯೋಗವಿದ್ಯೆ ಜಗತ್ತನ್ನೆಲ್ಲ ಆವರಿಸುತ್ತದೆ. ಎಂಬುದು ಹೆಮ್ಮೆಯ ಸಂಗತಿ ಎಂದು ಗೋಕರ್ಣ ಭದ್ರಕಾಳಿ ಹೈಸ್ಕೂಲಿನ ಮುಖ್ಯೋಧ್ಯಾಪಕ ಸಿ. ಜಿ. ನಾಯಕ ದೊರೆ ನುಡಿದರು.
ಅವರು ಹಿರೇಗುತ್ತಿ ಸೆಕೆಂಡರಿ ಹೈಸ್ಕೂಲಿನಲ್ಲಿ ವಿಶ್ವಯೋಗ ದಿನಾಚರಣೆಯ ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು “ಇಂದು ನಾವು ಯಾವ ವಾತವರಣದಲ್ಲಿ ಜೀವನ ನಡೆಸುತ್ತಿದ್ದೇವೆ? ಎಲ್ಲ ವಿಭಕ್ತ ಕುಟುಂಬಗಳು, ಹಣಕ್ಕಾಗಿ ಹಾತೊರೆಯುವ ಜನರು ಗಂಡ-ಹೆಂಡತಿಯನ್ನದೆ ಎಲ್ಲರೂ ದುಡಿಯುವವರೇ ಐಟಿ. ಬಿಟಿ. ಕಂಪನಿಗಳು ಬೆಳೆದು ಯಂತ್ರಗಳ ಮುಂದೆ ಯಂತ್ರಗಳಂತೆ ಕುಳಿತು ಮಾನವರು ಮುಂದೆ ಮಾಯಾಯಂತ್ರದಂತಾಗಿ ಮಾಯವಾಗುವರೋ ಎಂಬ ಪರಿಕಲ್ಲನೆ ಬಂದೊದಗಿದೆ” ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಹೈಸ್ಕೂಲ್ ಮುಖ್ಯೋಧ್ಯಾಪಕ ರೋಹಿದಾಸ್. ಎಸ್. ಗಾಂವಕರ “ಬಹುತೇಕ ಜನರು ಯೋಗ ಎಂದರೆ ಕೇವಲ ದೈಹಿಕ ವ್ಯಾಯಾಮ ಎಂದಷ್ಟೇ ಭಾವಿಸಿದ್ದಾರೆ ಆದರೆ ‘ಯೋಗವು ದೇಹ ಮತ್ತು ಮನಸ್ಸುಗಳನ್ನು ಬೆಸೆಯುವ ಆಧ್ಯಾತ್ಮಿಕ ಪ್ರಕ್ರೀಯೆ ಎಂದು ಹೇಳಿದವರು ಪ್ರಧಾನಿ ನರೇಂದ್ರ ಮೋದಿ. ನಮ್ಮಲ್ಲಿನ ಮನೋದೈಹಿಕ ತೊಂದರೆಗಳನ್ನು ಪರಿಹರಿಸಿಕೊಳ್ಳಲು ಯೋಗವು ಪೂರಕ” ಎಂದರು.
ದೈಹಿಕ ಶಿಕ್ಷಕ ನಾಗರಾಜ ಜಿ. ನಾಯಕ ಯೋಗ ಪ್ರಾತ್ಯಕ್ಷಿಕೆಯನ್ನು ವಿದ್ಯಾರ್ಥಿಗಳಾದ ಸಹನಾ ಗೌಡ, ಶಶಿ ಪಟಗಾರ, ಶ್ವೇತಾ, ಶಿವರಂಜಿನಿ, ಚೈತ್ರಾ, ಪ್ರಿಯಾಂಕ, ರವರಿಂದ ಯೋಗಾಸನದ ವಿವಿಧ ಆಸನಗಳನ್ನು ಮಾಡಿಸಿದರು. “ಚಿತ್ತ ವೃತ್ತಿ ನಿರೋಧಃ ಯೋಗಃ” ಎಂದರು.
ಕಾರ್ಯಕ್ರಮದ ವೇದಿಕೆಯಲ್ಲಿ ಶಿಕ್ಷಕರಾದ ಬಾಲಚಂದ್ರ ಹೆಗಡೆಕರ್, ಎನ್,ರಾಮು ಹಿರೇಗುತ್ತಿ, ವಿಶ್ವನಾಥ ಬೇವಿನಕಟ್ಟಿ, ಮಹಾದೇವ ಗೌಡ, ಜಾನಕಿ ಗೊಂಡ, ಇಂದಿರಾ ನಾಯಕ, ಶಿಲ್ಪಾ ನಾಯಕ ಉಪಸ್ಥಿತರಿದ್ದರು. ಶಶಿ ಸಂಗಡಿಗರು ಪ್ರಾರ್ಥನಗೀತೆಯೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು. ಸಹನಾ ಗೌಡ ಸರ್ವರನ್ನು ಸ್ವಾಗತಿಸಿದರು. ವೆಂಕಟೇಶ ಪಟಗಾರ ಕಾರ್ಯಕ್ರಮ ನಿರೂಪಣೆ ಮಾಡಿದರು ವಿನಯ ಗೌಡ ಸರ್ವರನ್ನು ವಂದಿಸಿದರು.
-ಎನ್. ರಾಮು ಹಿರೇಗುತ್ತಿ