ಭಟ್ಕಳದ ವಿದ್ಯಾಂಜಲಿ ಪಬ್ಲಿಕ್ ಸ್ಕೂಲ್ ನಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಆಚರಿಸಿದರು.
ಈ ದಿನದಂದು ಶಾಲೆಯಲ್ಲಿ ವಿದ್ಯಾಂಜಲಿ ಇಂಟಿಗ್ರೇಟಿವ್ ಯೋಗ (VIY)ಎಂಬ ಕಾರ್ಯಕ್ರಮವನ್ನು ಹೊಸದಾಗಿ ಪ್ರಾರಂಭಿಸಿದರು.
ಡಾ.ಆದಿತ್ಯ ಮತ್ತು ಶ್ರೀಮತಿ. ಸುಹಾಸಿನಿ ಶಂಕರ್ ರವರು ನೆರವೇರಿಸಿಕೊಟ್ಟರು.
ಡಾ.ಆದಿತ್ಯರವರು ಮಾತನಾಡಿ, ಪ್ರತಿದಿನ ಯೋಗ ಮತ್ತು ಧ್ಯಾನಚರಣೆ ಮಾಡಿದರೆ ಪ್ರತಿಯೊಬ್ಬರೂ ವಿಜ್ಞಾನಿಗಳಾಗಬಹುದೆಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಯೋಗ ಮತ್ತು ಧ್ಯಾನದ ಇತಿಹಾಸ ಮತ್ತು ಮಹತ್ವವನ್ನು ವಿವರಿಸಿದರು.
ಶ್ರೀಮತಿ. ಸುಹಾಸಿನಿರವರು ವಿದ್ಯಾರ್ಥಿಗಳಿಗೆ ಮೂಲ ಯೋಗಾಸನಗಳನ್ನು ಹೇಳಿಕೊಟ್ಟರು.
ಕಾರ್ಯಕ್ರಮಕ್ಕೆ ಅನುವು ಮಾಡಿಕೊಟ್ಟ ವಿದ್ಯಾಂಜಲಿ ಪಬ್ಲಿಕ್ ಸ್ಕೂಲ್ ನ ಆಢಳಿತ ಮಂಡಳಿಗೆ ವಂದಿಸಿದರು.
ಕಾರ್ಯಕ್ರಮದಲ್ಲಿ ಶಾಲೆಯ ಶೈಕ್ಷಣಿಕ ಸಲಹೆಗಾರರಾದ ಬಿ.ಆರ್.ಕೆ.ಮೂರ್ತಿರವರು, ಜ್ನಾನೇಶ್ವರಿ ಕಾಲೇಜ್ ಆಫ್ ಎಜ್ಯುಕೇಷನ್ ನ ಪ್ರಾಂಶುಪಾಲರಾದ ಡಾ.ನರಸಿಂಹಮೂರ್ತಿರವರು, ಪ್ರಾಂಶುಪಾಲರಾದ ಜ್ಯೋತಿಷ್ ರವರು ಉಪಸ್ಥಿತರಿದ್ದರು.