ಪ್ರತಿನಿತ್ಯದ ಜೀವನದಲ್ಲಿ ಮನುಷ್ಯ ಆರಾಮದಿಂದ ಇರಬೇಕಾದರೆ ಯೋಗ ಬೇಕೇ ಬೇಕು ಎಂದು ಸಿಂದೂತಾಯಿ ಮಹಾದೇವರಾವ್ ದಳವಾಯಿ ಶಿಕ್ಷಣ ಸಂಸ್ಥೆಯ ಧರ್ಮದರ್ಶಿ ಅರವಿಂದ ದಳವಾಯಿ ಹೇಳಿದರು. ಡಾ. ಎಮ್.ಎಮ್.ದಳವಾಯಿ ಪ್ರೌಢಶಾಲೆ ಹಾಗೂ ಸಿಂದೂ-ಮಾಧವ ಪಬ್ಲಿಕ್ ಸ್ಕೂಲ್‍ಗಳ ಸಹಯೋಗದಲ್ಲಿ ಮುಂಜಾನೆ: 7-00 ಘಂಟೆಗೆ ಹಮ್ಮಿಕೊಂಡ ವಿಶ್ವ ಯೋಗದಿನ ಕಾರ್ಯಕ್ರಮದಲ್ಲಿ ಮಾತನಾಡುತ್ತ ಯೋಗ ನಮ್ಮ ದೇಶದ ಪ್ರಾಚೀನ ಕಲೆ, ಪರಂಪರೆಯಾಗಿದ್ದು ಇಂದು ವಿಶ್ವದಾದ್ಯಂತ ಜನರು ಆರಾಮದಿಂದಿರಲು ಯೋಗವನ್ನು ಪ್ರತಿನಿತ್ಯ ಮಾಡುತ್ತಾರೆ. ಆದರೆ ನಾವೇ ಯೋಗಕ್ಕೆ ಮಹತ್ವ ಕೊಡದೇ ನಮ್ಮ ಆರೋಗ್ಯವನ್ನು ಸರಿಯಾಗಿ ಇಟ್ಟುಕೊಳ್ಳುವಲ್ಲಿ ವಿಫಲರಾಗಿದ್ದೇವೆ. ಕಾರಣ, ನಮ್ಮ ಶಾಲೆಯ ವಿದ್ಯಾರ್ಥಿಗಳು ಪ್ರತಿನಿತ್ಯ ಮನೆಯಲ್ಲಿ ಮತ್ತು ವಾರದಲ್ಲಿ ಎರಡು ಬಾರಿ ಶಾಲಾ ಅವಧಿಯಲ್ಲಿ ಯೋಗದಲ್ಲಿ ತೊಡಗಬೇಕೆಂದು ತಿಳಿಸಿ ವಿದ್ಯಾರ್ಥಿಗಳು ಅಭ್ಯಾಸದ ಜೊತೆಗೆ ಆರೋಗ್ಯಕ್ಕೂ ಹೆಚ್ಚು ಮಹತ್ವ ನೀಡಲು ತಿಳಿಸಿದರು.

RELATED ARTICLES  ನಿಮ್ಮ ಜನ್ಮರಾಶಿಗೆ ಅನುಗುಣವಾಗಿ (ದಿನಾಂಕ 30-12-2018) ಇಂದಿನ ದಿನ ಫಲಾನುಫಲಗಳು ಹೇಗಿರಲಿದೆ ಗೊತ್ತೆ?

ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷ ಅನಿಲಕುಮಾರ ದಳವಾಯಿ, ಹಿರಿಯರಾದ ಸಿದ್ದಪ್ಪ ಖಾನಟ್ಟಿ, ಮುಖ್ಯೋಪಾಧ್ಯಾಯ ವಿವೇಕ ಹಳ್ಳೂರ, ಶಿಕ್ಷಕವೃಂದ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.

RELATED ARTICLES  ನನ್ನ ಮೇಲಿನ ಆರೋಪ ಸಾಬೀತಾದರೆ ಪೀಠತ್ಯಾಗಕ್ಕೂ ಸಿದ್ಧ ಎಂದು ಸವಾಲೆಸೆದ ಪೇಜಾವರ ಶ್ರೀ! ಅದೇಕೆ ಗೊತ್ತಾ?