ಕಾರವಾರ: ಸಾವು ಯಾರಿಗೆ ಯಾವ ರೀತಿ ಬರುತ್ತೋ ಯಾರಿಗೂ ತಿಳಿಯಲ್ಲ. ಆದರೆ ಕೈಯಾರೆ ಪ್ರಾಣ ಬಿಡೋರು ಈ ಜಗತ್ತಿನಲ್ಲಿ ಸಾಕಷ್ಟು ಜನ ಇದ್ದಾರೆ.ಅಂಥಹ ಘಟನೆಗೆ ಸಾಕ್ಷಿಯಾಗಿದ್ದು ಕಾರವಾರ ಕೇಂದ್ರ ಕಾರಾಗ್ರಹ.

ಇಲ್ಲಿ ನೇಣು ಬಿಗಿದುಕೊಂಡು ಜಿಲ್ಲಾ ಕಾರಾಗೃಹದಲ್ಲೇ ಖೈದಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಕೊಲೆ ಪ್ರಕರಣದಲ್ಲಿ ಬಂಧಿತನಾಗಿದ್ದ ಉಮೇಶ್ ಕೊಡಗು ಜಿಲ್ಲೆಯ ಸೋಮವಾರಪೇಟೆ ಮೂಲದವ. ಜೈಲು ಕೊಠಡಿಯಲ್ಲಿ ಟವಲ್​ನಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ ಎನ್ನಲಾಗಿದೆ.

RELATED ARTICLES  ದೋಣಿ ಹತ್ತುವ ವೇಳೆ ಅವಘಡ : ವ್ಯಕ್ತಿ ನೀರುಪಾಲು.

ಘಟನೆ ನಡೆದ ತಕ್ಷಣ ಕಾರಾಗೃಹ ಸಿಬ್ಬಂದಿ ಎಚ್ಚೆತ್ತು, ಈತನನ್ನು ನೇಣಿನಿಂದ ಕೆಳಗಿಳಿಸಿ ಆಸ್ಪತ್ರೆಗೆ ಸಾಗಿಸಿದ್ದಾರೆ. ಮಾರ್ಗ ಮಧ್ಯೆ ಖೈದಿ ಕೊನೆಯುಸಿರೆಳೆದಿದ್ದಾಗಿ ತಿಳಿದು ಬಂದಿದೆ. ಮಾನಸಿಕ ಖಿನ್ನತೆಗೊಳಗಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗ್ತಿದ್ದು, ಈ ಕುರಿತಂತೆ ಕಾರವಾರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ತನಿಖೆಯ ನಂತರ ಸತ್ಯಾಂಶ ಹೊರ ಬರಲಿದೆ.

RELATED ARTICLES  ಬೈಕ್ ಅಪಘಾತ :ಎಲ್ಲರನ್ನೂ ಮೌನವಾಗಿಸಿದ ಸುದ್ದಿ ಟಿವಿಯ ಶಿರಸಿ ವರದಿಗಾರ ಮೌನೇಶ