ಕುಂಬಳೆ : ಶ್ರೀ ರಾಮಚಂದ್ರಾಪುರ ಮಠ ಶ್ರೀ ಗುರುಗಳ ನಿರ್ದೇಶಾನುಸಾರ; ಕುಂಬಳೆ ವಲಯ ಮಾತೃವಿಭಾಗ ಆಯೋಜಿಸಿದ ಸ್ವಾಸ್ಥ್ಯ ಮಂಗಲಕಾರ್ಯಕ್ರಮವು 4-7-2017ರಂದು ಅಪರಾಹ್ನ ಮುಜುಂಗಾವು ವಿದ್ಯಾಪೀಠದಲ್ಲಿ ನೆರವೇರಿತು. ಶಂಖನಾದದೊಂದಿಗೆ ಪ್ರಾರಂಭವಾಗಿ, ವಲಯದ ಉಪಾಧ್ಯಕ್ಷೆ ಶ್ರೀಮತಿ ಪದ್ಮಾವತಿ ಡಿ.ಪಿ.ಭಟ್ ದೀಪಬೆಳಗಿ ಉದ್ಘಾಟಿಸಿದರು. ವಲಯಾಧ್ಯಕ್ಷರಾದ ಬಾಲಕೃಷ್ಣ ಶರ್ಮರು ಪ್ರಾಸ್ತಾವಿಕ ನುಡಿಗಳನ್ನಾಡಿದರು.
ಕಾರ್ಯಕ್ರಮಕ್ಕೆ ಸಂಪನ್ಮೂಲ ವ್ಯಕ್ತಿಯಾಗಿ ಆಯುರ್ವೇದ ತಜ್ಞೆ ಡಾ|ಶೋಭಾ ಕೃಷ್ಣರಾಜ ಕಾಟಿಪ್ಪಳ್ಳ, ಆಹ್ವಾನಿತರಾಗಿ ಆಗಮಿಸಿದ್ದರು. ಶ್ರೀಮತಿಯವರು ಆಹಾರದಲ್ಲಿ ಸ್ವಾಸ್ಥ್ಯ ಕಾಪಾಡುವ ಬಗೆಯಲ್ಲಿ ಮುಖ್ಯ ಪಾತ್ರವಹಿಸುವ ಅಡಿಗೆ ತಯಾರಿಸುವ,ಸೇವಿಸುವ ಕ್ರಮ, ಪಾತ್ರೆ,ಅಡಿಗೆ ಮನೆ,ಸಾವಯವ ತರಕಾರಿಗಳ ಬಗ್ಗೆ ವಿಶದವಾಗಿ ತಿಳಿಸಿದ್ದಲ್ಲದೆ; ಶೋತೃಗಳ ಸಂಶಯ, ಸಂದೇಹಗಳಿಗೂ ಉತ್ತರಿಸಿದರು.
ಶಿಕ್ಷಣ ತಜ್ಞರೂ ಪ್ರಖ್ಯಾತ ಸಾಹಿತಿಗಳೂ ಆದ ವಿ.ಬಿ.ಕುಳಮರ್ವರು, ಕಾರ್ಯಕ್ರಮದ ಕೊನೆಗೆ ತಮ್ಮ ಉತ್ತಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ವಲಯಮಾತೃಪ್ರಧಾನರಾದ ಶಿವಕುಮಾರಿ ಕುಂಚಿನಡ್ಕ, ವಲಯದ ಕಾರ್ಯದರ್ಶಿಗಳಾದ ಸೇಡಿಗುಮ್ಮೆ ಗೋಪಾಲಕೃಷ್ಣಭಟ್,ವಿದ್ಯಾಪೀಠದ ಆಡಳಿತಾಧಿಕಾರಿ ಶ್ಯಾಂಭಟ್ ದರ್ಭೆಮಾರ್ಗ ಉಪಸ್ಥಿತರಿದ್ದರು.
ಡಾ| ಶೋಭಾ ಕೃಷ್ಣರಾಜ ಕಾಟಿಪ್ಪಳ್ಳ ಇವರಿಗೆ; ಶ್ರೀಮತಿ ಸಾವಿತ್ರಿ ದೊಡ್ಡಮಾಣಿ ಹಾಗೂ ವಿಜಯಾಸುಬ್ರಹ್ಮಣ್ಯ ಸ್ಮರಣಿಕೆಯಿತ್ತು ಗೌರವಿಸಿದರು.

RELATED ARTICLES  ಸರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿಯಾಗಿ ಇಂದು ಮಲ್ಹೋತ್ರಾ ನೇಮಕ.

IMG 20170705 WA0002
ಶ್ರೀಮತಿ ದೀಪಾ ದೊಡ್ಡಮಾಣಿ ನಿರೂಪಣೆಯಿತ್ತರು. ಶ್ರೀಮತಿ ಪಾರ್ವತಿ ಪೆರಡಾನ ವಂದನಾರ್ಪಣೆ ಗೈದರು.

ಮುಂದೆ ಮಾತೆಯರಿಂದ ಕುಂಕುಮಾರ್ಚನೆ ನೆರವೇರಿತು.

ವರದಿ–ವಿಜಯಾಸುಬ್ರಹ್ಮಣ್ಯ.