ಕುಮಟಾ: ಕುಮಟಾ ಹಾಗೂ ಸುತ್ತಮುತ್ತ ಗೋ ಕಳ್ಳ ಸಾಗಣೆಯ ಬಗ್ಗೆ ಆಗಾಗ ವರದಿಯಾಗುತ್ತಿತ್ತು. ಆದರೆ ಯಾರು ಏನು ಎಂಬುದಕ್ಕೆ ಉತ್ತರ ಸಿಕ್ಕಿರಲಿಲ್ಲ. ಹೇಗೆ ಕಳ್ಳತನ ನಡೆಯುವುದು ಎಂಬ ಬಗ್ಗೆ ಊಹೆಯನ್ನೂ ಮಾಡಲಾಗದ ರೀತಿಯಲ್ಲಿ ಘಟನೆ ನಡೆದಿದೆ. ಇಂದು ನಡೆದ ಹೈಟೆಕ್‌ಕಾರಿನಲ್ಲಿ ಗೋ ಸಾಗಾಣಿಕೆ ಜನತೆ ಬೆಚ್ಚಿಬೀಳುವಂತೆ ಮಾಡಿದೆ.

ಕೊಟ್ಟಿಗೆಯಲ್ಲಿ ಕಟ್ಟಿದ್ದ ಕರುಗಳನ್ನ ಸಿನಿಮೀಯ ರೀತಿಯಲ್ಲಿ ಎಗರಿಸುತ್ತಿದ್ದ ಕಳ್ಳರನ್ನು ಪೋಲೀಸರು ಚೇಸ್ ಮಾಡಿ, ಕುಮಟಾ ಪೊಲೀಸರು ಗೋವುಗಳನ್ನು ರಕ್ಷಣೆ ಮಾಡಿದ್ದಾರೆ.

RELATED ARTICLES  ಒಂದು ವರ್ಷದಿಂದ ಸ್ವೀಕಾರ ಕೇಂದ್ರದಲ್ಲಿದ್ದ ಮಹಿಳೆ ಮರಳಿ ಮನೆಗೆ

ರಿಜಿಸ್ಟರ್​ ಆಗದ ಮಾರುತಿ ಸುಜುಕಿ ಇಗ್ನಿಸ್‌ ಕಾರಿನಲ್ಲಿ ಬೆಳಗ್ಗೆ 2 ಕರುಗಳನ್ನ ಕದ್ದು ಕಸಾಯಿಖಾನೆಗೆ ಸಾಗಿಸಲಾಗುತ್ತಿತ್ತು. ಕುಮಟಾದ ಹಳಕಾರ್​ನ ಹರಿಕಾಂತ್ರ ಕೇರಿಯಲ್ಲಿದ್ದ ಕರುಗಳನ್ನು ಕಾರಿನಲ್ಲಿ ಸಾಗಿಸುತ್ತಿದ್ದರು ಎನ್ನಲಾಗಿದೆ.

ಈ ಘಟನೆಗಳು ನಡೆಯುವಾಗ ರಾತ್ರಿ ಗಸ್ತಿನಲ್ಲಿದ್ದ ಕುಮಟಾ ಠಾಣೆ ಪಿಎಸ್​​ಐ ಸಂಪತ್​ ಕುಮಾರ್​​ ತಂಡ ಕಾರನ್ನು ಬೆನ್ನಟ್ಟಿದೆ. ಈ ವೇಳೆ ಪೊಲೀಸರಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ ಕಾರು ಕುಮಟಾದ ಹಳಕಾರ್​​ ಹರಿಕಾಂತ್ರ ಕೇರಿ ಕ್ರಾಸ್​​ ಬಳಿ ಅಪಘಾತವಾಗಿದೆ.

RELATED ARTICLES  ಮುಂಡಗೋಡ: `ಜೆಡಿಎಸ್ ನಡಿಗೆ ಸೌಹಾರ್ದತೆಯ ಕಡೆಗೆ’ ಕಾರ್ಯಕ್ರಮಕ್ಕೆ ಭರದ ಸಿದ್ಧತೆ

ಆದರೆ ಕಾರು ನಿಲ್ಲುತ್ತಿದ್ದಂತೆ ಆರೋಪಿಗಳು ಪರಾರಿಯಾಗಿದ್ದಾರೆ. ಪೊಲೀಸರು 2 ಕರುಗಳನ್ನ ರಕ್ಷಣೆ ಮಾಡಿದ್ದು, ಕಾರನ್ನ ವಶಕ್ಕೆ ಪಡೆದು ಆರೋಪಿಗಳಿಗೆ ಬಲೆ ಬೀಸಿದ್ದಾರೆ.