ಶಿರಸಿ: ಶಿರಸಿಯ ಯೋಗಮಂದಿರದಲ್ಲಿ ಸ್ವರ್ಣವಲ್ಲೀ ಮಠದ ಶ್ರೀ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ ದಿವ್ಯ ಸಾನಿಧ್ಯದಲ್ಲಿ ನಡೆದ ಪರಿಸರ ಕಾರ್ಯಕರ್ತರ ಸಭೆಯಲ್ಲಿ ಪಶ್ಚಿಮಘಟ್ಟದ ಪ್ರಚಲಿತ ವಿದ್ಯಮಾನಗಳ ಬಗ್ಗೆ ಸಮಾಲೋಚನೆ ನಡೆಸಲಾಯಿತು. ಪಶ್ಚಿಮಘಟ್ಟ ವ್ಯಾಪ್ತಿಯಲ್ಲಿ ನದಿ ತಿರುವು ಯೋಜನೆಗಳು, ಬೃಹತ್‌ ಅರಣ್ಯ ನಾಶೀ ಯೋಜನೆಗಳ ಜಾರಿಗೆ ತಯಾರಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ಸಹ್ಯಾದ್ರಿಯ ನದಿ ಕಣಿವೆಗಳ ಉಳಿವಿಗೆ ಸದಾ ಜಾಗೃತಿ, ಸಂಘಟನೆ, ಅವಶ್ಯ. ಕೇಂದ್ರ, ರಾಜ್ಯ ಸರ್ಕಾರಗಳ ಗಮನ ಸೆಳೆಯಲು ಜುಲೈ 22ರಂದು ರಾಜ್ಯ ಮಟ್ಟದ ಸಮಾವೇಶ ನಡೆಸಲು ಪರಿಸರ ಸಂಘಟನೆಗಳು ನಿಶ್ಚಯಿಸಿವೆ. ಪಶ್ಚಿಮ ಘಟ್ಟದಲ್ಲಿ ಕೈಗಾ ಘಟಕಗಳು ಕ್ಯಾನ್ಸರ್‌ ತರುತ್ತಿವೆ. ಶರಾವತಿ-ಅಘನಾಶಿನಿ ನದೀ ತಿರುವು ಯೋಜನೆಗಳ ಪ್ರಸ್ತಾಪವಾಗಿದೆ. ಅರಣ್ಯ ರಕ್ಷಣೆ, ಜಲ ಸಂವರ್ಧನೆ ಮಾಡಬೇಕಾದ ಸರ್ಕಾರಗಳೇ ಸಹ್ಯಾದ್ರಿಗೆ ಗಂಡಾಂತರ ತರುತ್ತಿದೆ. ಈ ಹಿನ್ನೆಲೆಯಲ್ಲಿ ಜನತೆಯನ್ನು ಒಗ್ಗೂಡಿಸಬೇಕು. ಪಶ್ಚಿಮಘಟ್ಟ ಉಳಿಸಬೇಕು. ಅದಕ್ಕಾಗಿ ಜುಲೈನಲ್ಲಿ ಪರಿಸರ ಸಮಾವೇಶ ನಡೆಸಬೇಕು. ಇದಕ್ಕೆ ಮೊದಲು ಪರಿಸರ ಸಂಪರ್ಕ ಅಭಿಯಾನ ನಡೆಸಿ ಸ್ವಾಮೀಜಿಯವರು ಪರಿಸರ ಕಾರ್ಯಕರ್ತರಿಗೆ ಕರೆ ನೀಡಿದರು.

RELATED ARTICLES  ಅರೋಗ್ಯವಂತ ಸಮಾಜ ನಿರ್ಮಾಣ ನಮ್ಮೆಲ್ಲರ ಜವಾಬ್ದಾರಿ : ದಿನಕರ ಶೆಟ್ಟಿ

ಬೃಹತ್‌ ಅರಣ್ಯ ನಾಶೀ ಯೋಜನೆಗಳ ವಿರುದ್ಧ ಜಾಗೃತಿ ಕಾರ್ಯಕ್ರಮಗಳು, ವೃಕ್ಷಾರೋಪಣ ಮುಂತಾದ ರಚನಾತ್ಮಕ ಕಾರ್ಯಕ್ರಮಗಳನ್ನು ಜುಲೈ 15ರವರೆಗೆ ವಿವಿಧ ಸ್ಥಳಗಳಲ್ಲಿ ನಡೆಸಲು ನಿಶ್ಚಯಿಸಲಾಯಿತು. 25 ವರ್ಷ ಹಿಂದೆ ಕೈಗಾ ಚಳುವಳಿಯಲ್ಲಿ ಪಾಲ್ಗೊಂಡ ಪೇಜಾವರ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಅವರನ್ನು ಪರಿಸರ ಸಮಾವೇಶಕ್ಕೆ ಆಹ್ವಾನಿಸಲು ಸಭೆ ನಿಶ್ಚಯಿಸಿತು.

RELATED ARTICLES  ಬೀದಿ ವ್ಯಾಪಾರಸ್ಥರು ಸ್ವಚ್ಚತೆಗೆ ಆದ್ಯತೆ ನೀಡಲು ಕರೆ!

ಆರಂಭದಲ್ಲಿ ಜಿಲ್ಲಾ ಪರಿಸರ ಸಮಿತಿ ಹಾಗೂ ವೃಕ್ಷಲಕ್ಷ ಆಂದೋಲನದ ಅಧ್ಯಕ್ಷ ಅನಂತ ಹೆಗಡೆ ಅಶೀಸರ ಮಾತನಾಡಿ, ಹಸಿರು ಸ್ವಾಮೀಜಿ ಖ್ಯಾತಿಯ ಸ್ವರ್ಣವಲ್ಲೀ ಶ್ರೀಗಳ 50ನೇ ವರ್ಧಂತಿ ಶುಭ ಸಂದರ್ಭದಲ್ಲಿ ಪರಿಸರ ಚಿಂತನೆ ನಡೆಸುತ್ತಿರುವುಉ ಸಂತಸ ತಂದಿದೆ ಎಂದರು. ಸಭೆಯಲ್ಲಿ ಪರಿಸರ ಕಾರ್ಯಕರ್ತರಾದ ಬಿ.ಜಿ.ಹೆಗಡೆ ಗೇರಾಳ, ರವಿ ಭಟ್ಟ, ಕೇಶವ ಕೊರ್ಸೆ, ರಘುನಂದನ ಭಟ್ಟ, ಉಮಾಪತಿ, ಗೋಪಾಲಕೃಷ್ಣ ತಂಗಾರ್ಮನೆ, ರಾಘವೇಂದ್ರ, ನರಸಿಂಹ ವಾನಳ್ಳಿ ಮುಂತಾದವರು ಮಾತನಾಡಿದರು.