ಈ ಹಿಂದೆ ಮಲೆನಾಡಿನಲ್ಲಿದ್ದ ಅನೇಕ ಜಾತಿಯ ಗಿಡಮರಗಳು ಇಂದು ಕಣ್ಮರೆ ಆಗುತ್ತಿದೆ. ಹಾಗಾಗಿ *84 ಕ್ಕೂ ಅಧಿಕ ಜಾತಿಯ ಸಸ್ಯಗಳನ್ನು ಇಂದು ನೆಡಲಾಗಿದೆ ಎಂದು ಇಂತಹ ಸಸ್ಯಗಳನ್ನು ನಾವು ಮುಂದಿನ ಪೀಳಿಗೆಗೆ ಉಳಿಸಿದರೆ ಮಾತ್ರ ನಾವು ಪರಿಸರಕ್ಕೆ ಮನುಷ್ಯರಾಗಿ ಕೊಡುವ ಒಂದು ಸಣ್ಣ ಕೊಡುಗೆಯಾಗಲಿದೆ* ಎಂದು ಬೆಂಗಳೂರಿನ ಆಯುರ್ವೇದ ವೈದ್ಯರಾದ ಡಾ .ಸೀತಾರಾಮ್ ಪ್ರಸಾದ್ ತಿಳಿಸಿದರು

ಮಲೆನಾಡು ಸಹಜವಾಗಿ ವೈವಿಧ್ಯಮಯ ಜಾತಿಯ ಗಿಡಮರಗಳಿಗೆ ಹೆಸರುವಾಸಿ. ಮನುಷ್ಯನಿಗೆ ಬೇಕಾದ ಪೌಷ್ಠಿಕಾಂಶಗಳು, ಔಷಧಿಗಳು ಎಲ್ಲವೂ ಮಲೆನಾಡಿನ ಪಶ್ಚಿಮ ಘಟ್ಟಗಳಲ್ಲಿ ಲಭ್ಯವಿತ್ತು. *ಆದರೆ ಇಂದು ಅನ್ಯಾನ್ಯ ಕಾರಣದಿಂದಾಗಿ ಅನೇಕಾನೇಕ ಸಸ್ಯಪ್ರಭೇದಗಳು ಕಣ್ಮರೆಯಾಗಿದೆ. ಇನ್ನಾದರೂ ನಾವು ಗಿಡಮರಗಳನ್ನು ಉಳಿಸಲು ಮುಂದಾಗದೇ ಹೋದಲ್ಲಿ ಹೀಗೆಯೇ ಎಲ್ಲ ಜಾತಿಯ ಸಸ್ಯ-ವೃಕ್ಷಗಳು ನಶಿಸಿ ಹೋಗಲಿದೆ,‌ಅಷ್ಟೇ ಅಲ್ಲ ಪರಿಸರವೂ ನಾಶವಾಗಲಿದೆ.* ಈ ಹಿನ್ನೆಲೆಯಲ್ಲಿ ನಾವು ಹೆಚ್ಚೆಚ್ಚು ಮರಗಳನ್ನು ಬೆಳೆಸುವ ಅವಶ್ಯಕತೆ ಇದ್ದು, ಸಸಿಗಳನ್ನು ನೆಟ್ಟು ಪಾಲನೆ ಪೋಷಣೆ ಮಾಡುವ ಜವಾಬ್ದಾರಿ ಪ್ರತಿಯೊಬ್ಬ ಮನುಷ್ಯನದ್ದಾಗಿದೆ.

ಪಶ್ಚಿಮಘಟ್ಟದ ಅರಣ್ಯ ಸಂಪತ್ತನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಶ್ರೀ ರಾಮಚಂದ್ರಪುರ ಮಠದ ಆವರಣದಲ್ಲಿರುವ *ಮಹಾನಂದಿ ಗೋಲೋಕದಲ್ಲಿ ಸಾವಿರಕ್ಕೂ ಹೆಚ್ಚು ಸಸಿಗಳನ್ನು ನೆಡುವ ವಿನೂತನ ಕಾರ್ಯಕ್ರಮ ಜೂನ್ 22- ಶುಕ್ರವಾರ ನಡೆಯಿತು.*

*ಶರಾವತಿ ತೀರದಲ್ಲಿ ಟೆಕ್ಕಿಗಳ ಕಲರವ:*
ಬೆಂಗಳೂರಿನ ‘ಓಪನ್ ಟೆಕ್ಟ್’ ಎಂಬ ಕಂಪನಿಯು ತಮ್ಮ ಸಿಎಸ್‍ಆರ್ ಯೋಜನೆಯ ಅಡಿಯಲ್ಲಿ ಈ ಯೋಜನೆಯನ್ನು ಹಾಕಿಕೊಂಡು, ಸೇ ಟ್ರೀ ಎಂಬ ಗಿಡ-ಮರಗಳ ಪಾಲನೆ ಪೋಷಣೆ ಮಾಡುವ ವೃತ್ತಿಪರ ಸಂಸ್ಥೆಯ ಮೂಲಕ ೧೦೦೦ ಸಸಿಗಳನ್ನು ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು‌‌‌.‌ ಇದನ್ನು ಸಂಯೋಜಿಸಿದ್ದು ಬೆಂಗಳೂರಿನ ಗೋ-ಪಾಲ್ಸ್ ಎಂಬ ದೇಶಿ ಗೋವುಗಳ ಸಂರಕ್ಷಣೆ, ಸಂಬೋಧನೆಯಲ್ಲಿ ತೊಡಗಿರುವ ಗೋಪರ ಕಾಳಜಿ ಇರುವ ವೃತ್ತಿಪರರ ತಂಡ.

RELATED ARTICLES  ಇನ್ನೂ ಎರಡು ವಾರ ಲಾಕ್ ಡೌನ್ : ವಿಭಿನ್ನವಾಗಿರಲಿದೆ‌ ಎಂದ ಮುಖ್ಯಮಂತ್ರಿ.

ಗೋಪಾಲ್ಸ್ ತಂಡ ಮುಂಚಿತವಾಗಿ ಮಹಾನಂದಿ ಗೋಲೋಕಕ್ಕೆ ಆಗಮಿಸಿ ಸ್ಥಳ ಪರಿಶೀಲನೆ ಮಾಡಿ ಎಲ್ಲೆಲ್ಲಿ ಗಿಡ ನೆಡಬಹುದೆಂದು ಯೋಜನೆ ರೂಪಿಸಿದ್ದರ ಜೊತೆಗೆ *ಮಲೆನಾಡು ಭಾಗದ ಸಸ್ಯ ಪ್ರಭೇದಗಳ ಕುರಿತು ಅಧ್ಯಯನ ನಡೆಸಿ ಯಾವ ಯಾವ ಜಾತಿಯ ಗಿಡಗಳನ್ನು ನೆಡಬೇಕು* ಎಂಬ ಯಾದಿಯನ್ನು ತಯಾರಿಸಿ ಓಪನ್ ಟೆಕ್ಸ್ಟ್ ಸಂಸ್ಥೆಗೆ ನೀಡಿದೆ. ಈ ಯಾದಿಯಲ್ಲಿ ಇರುವ‌ ಎಲ್ಲವೂ ಮಲೆನಾಡು ಭಾಗದ ಸ್ಥಳೀಯ ತಳಿಗಳೇ ಆಗಿದ್ದು, ಅದರಲ್ಲಿ ಚಂದನ, ರಕ್ತ ಚಂದನದಂತಹ ನೇರವಾದ ಔ಼ಷಧೀಯ ಸಸ್ಯಗಳು, ಹಲವು ರೀತಿಯ ಹಣ್ಣಿನ ಮರಗಳು, ಗೋವಿನ ಮೇವಿಗೆ ಉಪಯೋಗವಾಗಬಲ್ಲಂತಹ ಸಸ್ಯಗಳು ಹಾಗೂ ಮಹಾನಂದಿ ಗೋಲೊಕದಲ್ಲಿ ತಯಾರಾಗುವ ಗವ್ಯೋತ್ಪನ್ನಗಳಿಗೆ ಉಪಯೋಗವಾಗುವ ಗಿಡಮರದ ಸಸಿಗಳನ್ನು ನೆಡಲಾಗಿದ್ದು, ಸಸಿಯ ರಕ್ಷಣೆಗೆ ಅದರ ಸುತ್ತಲೂ ಟ್ರೀ-ಗಾರ್ಡ್(ರಕ್ಷಣಾ ಕವಚ)ವನ್ನು ಹಾಕಲಾಗಿದೆ. *ಪ್ರಮುಖವಾಗಿ ನೆಡಲಾದ ೮೪ ಜಾತಿಯ ಸಸ್ಯಗಳಲ್ಲಿ ಸುಮಾರು ೫೦ಕ್ಕೂ ಹೆಚ್ಚು ಜಾತಿ ಈಗಾಗಲೇ ನಶಿಸಿಹೋಗುವ(endangered) ಹಂತದಲ್ಲಿದೆ, ಆ ಜಾತಿಯನ್ನು ಉಳಿಸಿಕೊಂಡು ಹೋಗುವ ನಿಟ್ಟಿನಲ್ಲಿ ಗೋಪಾಲ್ಸ್ ಅವರ ಈ ಪ್ರಯತ್ನ ಶ್ಲಾಘನೀಯ.*

ಓಪನ್ ಟೆಕ್ಸ್ಟ್ ಸಂಸ್ಥೆಯು *ತಮ್ಮ ನೂರಕ್ಕೂ ಹೆಚ್ಚು ಉದ್ಯೋಗಿಗಳನ್ನು* ಈ ಪವಿತ್ರ ಕಾರ್ಯಕ್ಕೆ ಕಳುಹಿಸಿಕೊಟ್ಟಿದ್ದಷ್ಟೇ ಅಲ್ಲದೇ, ಗೋಪಾಲ್ಸ್ ಅವರು ಕೊಟ್ಟ ಯಾದಿಯಂತೆ *ಸಸಿಗಳ ಲಭ್ಯತೆಯನ್ನು ಅಧ್ಯಯನ ಮಾಡಿ, ಹುಡುಕಿ ಪೂರೈಕೆ ಮಾಡಿದ್ದು, ನೆಡಲು ಬೇಕಾದ ಸಲಕರಣೆಗಳು, ರಕ್ಷಣೆಗೆ ಬೇಕಾದ ಕವಚಗಳನ್ನು ನಿರ್ಮಿಸಲು ಅಗತ್ಯ ಇರುವ ಸಾಮಾಗ್ರಿಗಳನ್ನೂ ಪೂರೈಸಿದೆ‌.* ಓಪನ್ ಟೆಕ್ಸ್ಟ್ ಸಂಸ್ಥೆಯ ಪರಿಸರ ಕಾಳಜಿ, *ಮುಂದಿನ ಪೀಳಿಗೆಗೆ ನಾವೇನಾದರೂ ಕೊಡುಗೆ ನೀಡಬೇಕೆಂಬ ಭಾವನೆ ಎಲ್ಲರಿಗೂ ಮಾದರಿ.

ವೃಕ್ಷಜನನಿ : ಈ ಕಾರ್ಯಕ್ರಮಕ್ಕೆ ವೃಕ್ಷಜನನಿ ಎಂದು ಹೆಸರಿಡಲಾಗಿದ್ದು, ಇದರ ಕಲ್ಪನೆ ಏನು ಎಂದು ಗೋಪಾಲ್ಸ್ ಅವರಲ್ಲಿ ಕೇಳಿದಾಗ
‘ಶ್ರೀಮಠದ ಮಹಾನಂದಿ ಗೋಲೋಕದಲ್ಲಿ ಈಗಾಗಲೇ ೩೦ ತಳಿಯ ೩೦೦ಕ್ಕೂ ಅಧಿಕ ದೇಸಿ ಗೋವುಗಳ ಸಂರಕ್ಷಣೆ, ಸಂವರ್ಧನೆ ಈಗಾಗಲೇ ನೆಡೆಯುತ್ತಿದೆ, ಇದರ ಜತೆಗೆ ಮಲೆನಾಡಿನ ಭಾಗದಲ್ಲಿ ಸಿಗುವ ವಿವಿದ ಜಾತಿಯ ಸಸ್ಯವನ್ನು ಪೋಷಿಸುವುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ, ಹಾಗೆ *ಗೋವು(ಜನನಿ) ಮತ್ತು ಮರ(ವೃಕ್ಷ) ಎರಡರ ಸಂಗಮವೇ ವೃಕ್ಷಜನನಿ ಎಂದು ಸಂಸ್ಥೆಯ ಪ್ರಮುಖರಾದ ಸಂದೀಪ್* ತಿಳಿಸಿದರು.

RELATED ARTICLES  ಟಿಪ್ಪುವಿನಂತೆ ಅನ್ಯಾಯಕ್ಕೆ ಒಳಗಾದ ವ್ಯಕ್ತಿ ನಮಗೆ ಇತಿಹಾಸದಲ್ಲಿಯೇ ಸಿಕ್ಕುವುದಿಲ್ಲ ; ಡಾ| ಪಾಟೀಲ ಪುಟ್ಟಪ್ಪ

ಸಸಿ ನೆಡಲು ಬಂದ ಓಪನ್ ಟೆಕ್ಸ್ಟ್, ಸೇ ಟ್ರೀ, ಗೋಪಾಲ್ಸ್ ನ ಸಹೊದ್ಯೋಗಿ ಮಿತ್ರರು, ಶ್ರೀರಾಮಚಂದ್ರಾಪುರ ಮಠದ ಕಾರ್ಯಕರ್ತರೆಲ್ಲರು ಅತ್ಯಂತ ಉತ್ಸಾಹದಿಂದ ಪಾಲ್ಗೊಂಡರು. ದಿನವಿಡಿ ವಾತಾವರಣ ಅತ್ಯಂತ ಪೂರಕವಾಗಿತ್ತು. ಮಧ್ಯಾಹ್ನದ ಮೇಲೆ ಸಣ್ಣದಾಗಿ ಸುರಿಯುತ್ತಿದ್ದ ಮಳೆಯಲ್ಲೂ ಕೆಲಸ‌ ನಿಲ್ಲಿಸದೇ ಮಹಿಳೆಯರೂ ಗುಂಡಿ ತೋಡಿ, ಮಣ್ಣು ತೆಗೆದು, ಗಿಡ ನೆಡುವ ಕಾರ್ಯದಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದು ಸ್ಪೂರ್ತಿದಾಯಕವಾಗಿತ್ತು.‌ ಆಂದ್ರಪ್ರದೇಶ, ತಮಿಳುನಾಡು, ಮಹಾರಾಷ್ಟ್ರ, ಪಂಜಾಬ್ ಹೀಗೆ ದೇಶದ ನಾನಾ ಭಾಗದ ಮೂಲದವರು ಬೆಂಗಳೂರಿನಲ್ಲಿ ನೆಲೆಸಿದ ಕಾರ್ಯಕರ್ತರೆಲ್ಲ ಭಾಗವಹಿಸಿದ್ದರು.
*ಭಾಷೆ ಬೇರೆ, ಪ್ರದೇಶಗಳು ಬೇರೆ ಬೇರೆಯಾದರೂ ಸಮಾಜದ ಪರಿಸರದ ಸೇವೆಗಾಗಿ ಎಲ್ಲರೂ ಒಂದುಗೂಡಿದ್ದು ವಿಶೇಷವಾಗಿತ್ತು.*

ಓಪನ್ ಟೆಕ್ಸ್ಟ್, ಸೇ ಟ್ರೀಸ್, ಗೋಪಾಲ್ಸ್ ಸಂಸ್ಥೆಗಳ ಜೊತೆ *ಯುವಾಬ್ರಿಗೇಡ್, ನಮ್ಮದೇ ನಗರ, ಜಯನಗರ ವಲಯದ ಧರ್ಮಸ್ಥಳ ಸ್ವಸಹಾಯ ಸಂಘ ಹಾಗು ಶ್ರೀಮಠದ ಶ್ರೀಭಾರತೀ ಗುರುಕುಲಮ್‍ನ ವಿದ್ಯಾರ್ಥಿಗಳು* ಈ ಪುಣ್ಯಕಾರ್ಯದಲ್ಲಿ ಕೈಜೋಡಿಸಿ ತಮ್ಮ ಸಹಕಾರವನ್ನು ನೀಡಿದರು.
IMG 20180623 WA0008
ಈ ಸಂದರ್ಭದಲ್ಲಿ ಮಹಾನಂದಿ ಗೋಲೋಕದ ಅಧ್ಯಕ್ಷರಾದ ಕೃಷ್ಣಪ್ರಸಾದ ಎಡಪ್ಪಾಡಿ, ಪದಾಧಿಕಾರಿಗಳಾದ ಜಿ.ಟಿ.ದಿವಾಕರ್, ಭಾರತೀಯ ಗೋಪರಿವಾರದ ಕಾರ್ಯದರ್ಶ ಮಧು ಗೋಮತಿ, ಸಹಕಾರ್ಯದರ್ಶಿ ಶಿಶಿರ್ ಹೆಗಡೆ, ಯುವಾ ಬ್ರಿಗೇಡಿನ ಪ್ರಸನ್ನ ಭಟ್ ಹಾಜರಿದ್ದರು.

~
ವರದಿ:ಶಿಶಿರ ಹೆಗಡೆ