ಮೇಕಪ್ ಮಾಡಿಕೊಂಡ ಬಳಿಕ ಎಂತವರು ಕೂಡ ತುಂಬಾ ಸುಂದರವಾಗಿ ಕಾಣುವರು. ಮೇಕಪ್ ಇಲ್ಲದೆ ಇದ್ದರೆ ಕೆಲವರ ಮುಖ ನೋಡಲು ಸಾಧ್ಯವಾಗದಂತೆ ಇರುವುದು. ಮೇಕಪ್ ಎಲ್ಲವನ್ನು ಮುಚ್ಚಿ ಅವರಿಗೆ ಸೌಂದರ್ಯ ನೀಡುವುದು. ಪ್ರತಿ ಮಹಿಳೆ ಕೂಡ ಬಯಸುವುದು ಸೌಂದರ್ಯವನ್ನು. ತಾನು ಸೌಂದರ್ಯವತಿಯಾಗಿ ಕಾಣಬೇಕೆಂದು ಆಕೆ ಬಯಸುವಳು. ಆದರೆ ಮೇಕಪ್ ಇಲ್ಲದೆಯೂ ನೀವು ಸುಂದರವಾಗಿ ಕಾಣುವುದು ಹೇಗೆ ಎಂದು ನಾವು ಈ ಲೇಖನದಲ್ಲಿ ನಿಮಗೆ ತಿಳಿಸಿಕೊಡಲಿದ್ದೇವೆ.
ಅನುವಂಶೀಯತೆ, ಹಾರ್ಮೋನು ಅಸಮತೋಲನ ಮತ್ತು ಕಲುಷಿತ ವಾತಾವರಣವು ಹಾನಿಯಾದ ಮತ್ತು ನಿಸ್ತೇಜ ಚರ್ಮಕ್ಕೆ ಕಾರಣವಾಗಿರುವುದು. ನಾವು ಮಾಡುವಂತಹ ಕೆಲವೊಂದು ತಪ್ಪುಗಳಿಂದಾಗಿ ನಮ್ಮ ಚರ್ಮದ ಕಾಂತಿಯು ನಿಸ್ತೇಜವಾಗುತ್ತದೆ ಎಂದು ನಾವು ತಿಳಿದಿಲ್ಲ. ಇದಕ್ಕಾಗಿ ನಾವು ಹಲವಾರು ರೀತಿಯ ಉತ್ಪನ್ನಗಳನ್ನು ಬಳಸಿದರೂ ಅದರಿಂದ ಯಾವುದೇ ರೀತಿಯ ಲಾಭವಾಗದು. ಮನೆಯಲ್ಲೇ ತಯಾರಿಸಬಹುದಾದ ಕೆಲವೊಂದು ಪ್ಯಾಕ್ ಮತ್ತು ಸ್ಕ್ರಬ್ ಗಳಿಂದ ನಿಮ್ಮ ಚರ್ಮದ ಕಾಂತಿ ಹೆಚ್ಚಿಸಿ.
ಟೊಮೆಟೊ ಫೇಸ್ ಪ್ಯಾಕ್
ಬೇಕಾಗುವ ಸಾಮಗ್ರಿಗಳು
1 ಟೊಮೆಟೋ
1 ಚಮಚ ಸಕ್ಕರೆ
ವಿಧಾನ
ಮೊದಲಿಗೆ ಟೊಮೆಟೋವನ್ನು ಸಣ್ಣಸಣ್ಣ ತುಂಡುಗಳನ್ನಾಗಿ ಕತ್ತರಿಸಿಕೊಂಡು ಹಿಚುಕಿಕೊಂಡು ಪೇಸ್ಟ್ ಮಾಡಿ. ಇದಕ್ಕೆ ಒಂದು ಚಮಚ ಸಕ್ಕರೆ ಸೇರಿಸಿಕೊಳ್ಳಿ ಮತ್ತು ಎರಡನ್ನು ಸರಿಯಾಗಿ ಮಿಶ್ರಣ ಮಾಡಿ. ಇದನ್ನು ಮುಖ ಹಾಗೂ ಕುತ್ತಿಗೆಗೆ ಹಚ್ಚಿಕೊಂಡು ನಿಧಾನಗತಿಯಲ್ಲಿ ವೃತ್ತಾಕಾರದಲ್ಲಿ ಮಸಾಜ್ ಮಾಡಿ. ಹತ್ತು ನಿಮಿಷ ಕಾಲ ಹಾಗೆ ಬಿಡಿ. ತಣ್ಣಗಿನ ನೀರಿನಿಂದ ತೊಳೆಯಿರಿ. ಇದನ್ನು ಎರಡು ದಿನಕ್ಕೊಮ್ಮೆ ಬಳಸಿ.
ಹಾಲಿನ ಮಾಸ್ಕ್
ಬೇಕಾಗುವ ಸಾಮಗ್ರಿಗಳು
*ಹಾಲಿನ ಹುಡಿ
*ನೀರು
ತಯಾರಿಸುವ ವಿಧಾನ
¼ ಚಮಚ ಹಾಲಿನ ಹುಡಿ ಮತ್ತು ಅದಕ್ಕೆ ತಕ್ಕಷ್ಟು ನೀರು ಹಾಕಿ ದಪ್ಪಗಿನ ಪೇಸ್ಟ್ ಮಾಡಿ. ಇದನ್ನು ಮುಖಕ್ಕೆ ಹಚ್ಚಿಕೊಂಡು ಸಂಪೂರ್ಣವಾಗಿ ಒಣಗಲು ಬಿಡಿ ಮತ್ತು ಉಗುರಬೆಚ್ಚಗಿನ ನೀರಿನಿಂದ ತೊಳೆಯಿರಿ. ನಿಮ್ಮ ತ್ವಚೆಯು ತುಂಬಾ ತಾಜಾ ಮತ್ತು ಪುನಶ್ಚೇತನಗೊಳ್ಳುವುದು.
ಜೇನುತುಪ್ಪ ಮತ್ತು ಕಿತ್ತಳೆ ಸ್ಕ್ರಬ್
ಬೇಕಾಗುವ ಸಾಮಗ್ರಿಗಳು
ಎರಡು ಚಮ ಕಿತ್ತಳೆ ಹಣ್ಣಿನ ಸಿಪ್ಪೆಯ ಹುಡಿ
1 ಚಮಚ ಓಟ್ಸ್
2-3 ಚಮಚ ಜೇನುತುಪ್ಪ
ವಿಧಾನ
ಕಿತ್ತಳೆ ಸಿಪ್ಪೆಯ ಹುಡಿ ಮತ್ತು ಓಟ್ಸ್ ನ್ನು ಸರಿಯಾದ ಪ್ರಮಾಣದಲ್ಲಿ ಮಿಶ್ರಣ ಮಾಡಿ ಮತ್ತು ಇದಕ್ಕೆ ಒಂದು ಚಮಚ ಜೇನುತುಪ್ಪ ಹಾಕಿ. ಇದನ್ನು ದಪ್ಪಗಿನ ಪೇಸ್ಟ್ ಮಾಡಿ. ಸ್ವಲ್ಪ ನೀರು ಹಾಕಿ.
ಮುಖ ತೊಳೆದ ಬಳಿಕ ಬೆರಳುಗಳಿಂದ ಹಚ್ಚಿಕೊಳ್ಳಿ. ಕೆಲವು ನಿಮಿಷ ಕಾಲ ಹಾಗೆ ಇರಲಿ ಮತ್ತು ಬಳಿಕ ನೀರಿನಿಂದ ತೊಳೆಯಿರಿ ಮತ್ತು ಒಣಗಿಸಿ. ಇದರ ಬಳಿಕ ಮೊಶ್ಚಿರೈಸರ್ ಹಚ್ಚಿ.
ಓಟ್ ಮೀಲ್ ಫೇಸ್ ಪ್ಯಾಕ್
ಬೇಕಾಗುವ ಸಾಮಗ್ರಿಗಳು
3 ಚಮಚ ಓಟ್ಸ್
2-3 ಚಮಚ ರೋಸ್ ವಾಟರ್
ವಿಧಾನ
ಓಟ್ ಮೀಲ್ ನ್ನು ಮಿಕ್ಸಿಗೆ ಹಾಕಿಕೊಂಡು ಹುಡಿ ಮಾಡಿ. ಇದಕ್ಕೆ ರೋಸ್ ವಾಟರ್ ಹಾಕಿಕೊಂಡು ದಪ್ಪಗಿನ ಪೇಸ್ಟ್ ಮಾಡಿ. ಇದನ್ನು ಮುಖ ಹಾಗೂ ಕುತ್ತಿಗೆಗೆ ಹಚ್ಚಿಕೊಳ್ಳಿ. 15 ನಿಮಿಷ ಕಾಲ ಹಾಗೆ ಬಿಡಿ ಮತ್ತು ಬಳಿಕ ನೀರಿನಿಂದ ತೊಳೆಯಿರಿ. ವಾರದಲ್ಲಿ ಎರಡು ಸಲ ಬಳಸಿದರೆ ಒಳ್ಳೆಯ ಫಲಿತಾಂಶ ಸಿಗುವುದು.
ಕಾಂತಿಯುತ ತ್ವಚೆಗೆ ಫೇಶಿಯಲ್ ಮಸಾಜ್
ಮೊಸರಿನ ಪ್ಯಾಕ್
ಬೇಕಾಗುವ ಸಾಮಗ್ರಿಗಳು
2 ಚಮಚ ಮೊಸರು
1 ಚಮಚ ಜೇನುತುಪ್ಪ
ವಿಧಾನ
ಒಂದು ಪಿಂಗಾಣಿಯಲ್ಲಿ ಎರಡು ಚಮಚ ಮೊಸರು ಮತ್ತು ಒಂದು ಚಮಚ ಜೇನುತುಪ್ಪ ಹಾಕಿಕೊಂಡು ಸರಿಯಾಗಿ ಮಿಶ್ರಣ ಮಾಡಿ. ಇದನ್ನು ಮುಖ ಹಾಗೂ ಕುತ್ತಿಗೆಗೆ ಸರಿಯಾಗಿ ಹಚ್ಚಿಕೊಳ್ಳಿ. 20 ನಿಮಿಷ ಕಾಲ ಹಾಗೆ ಬಿಡಿ. ಬಳಿಕ ತಣ್ಣೀರಿನಿಂದ ತೊಳೆಯಿರಿ.
ಮೊಟ್ಟೆಯ ಫೇಸ್ ಪ್ಯಾಕ್
ಬೇಕಾಗುವ ಸಾಮಗ್ರಿಗಳು
1 ಮೊಟ್ಟೆಯ ಬಿಳಿ ಲೋಳೆ
1 ಚಮಚ ಕಡಲೆಹಿಟ್ಟು
ಲಿಂಬೆರಸ
ವಿಧಾನ
ಮೊಟ್ಟೆಯ ಬಿಳಿ ಭಾಗವನ್ನು ಪಿಂಗಾಣಿಗೆ ಹಾಕಿ ಕಲಿಸಿಕೊಳ್ಳಿ. ಇದಕ್ಕೆ ಒಂದು ಚಮಚ ಕಡಲೆ ಹಿಟ್ಟು ಹಾಕಿ ಮಿಶ್ರಣ ಮಾಡಿ. ಇದಕ್ಕೆ ತಾಜಾ ನಿಂಬೆಹಣ್ಣಿನ ಕೆಲವು ಹನಿ ಹಾಕಿ. ಇದನ್ನು ಮುಖದ ಮೇಲೆ ಪದರದಂತೆ ಹಚ್ಚಿಕೊಳ್ಳಿ ಮತ್ತು 15-20 ನಿಮಿಷ ಕಾಲ ಹಾಗೆ ಬಿಡಿ. 20 ನಿಮಿಷ ಬಳಿಕ ಸಾಮಾನ್ಯ ನೀರಿನಿಂದ ತೊಳೆಯಿರಿ. ನಿಮ್ಮದು ಒಣ ಚರ್ಮವಾಗಿದ್ದರೆ ಒಂದು ಚಮಚ ಜೇನುತುಪ್ಪ ಹಾಕಿಕೊಂಡು ಮಿಶ್ರಣ ಮಾಡಿ.
ಸೌತೆಕಾಯಿ ಮಾಸ್ಕ್
ಬೇಕಾಗುವ ಸಾಮಗ್ರಿಗಳು
ಸೌತೆಕಾಯಿ
1 ಚಮಚ ಅಲೋವೆರಾ ಲೋಳೆ
ವಿಧಾನ
ಸೌತೆಕಾಯಿಯನ್ನು ಸಣ್ಣ ತುಂಡುಗಳನ್ನಾಗಿ ಮಾಡಿ, ರುಬ್ಬಿಕೊಂಡು ದಪ್ಪಗಿನ ಪೇಸ್ಟ್ ಮಾಡಿ. ಇದಕ್ಕೆ ಒಂದು ಚಮಚ ತಾಜಾ ಅಲೋವೆರಾದ ಲೋಳೆ ಹಾಕಿ. ಇವೆರಡನ್ನು ಸರಿಯಾಗಿ ಮಿಶ್ರಣ ಮಾಡಿಕೊಳ್ಳಿ. ಇದನ್ನು ಮುಖಕ್ಕೆ ಹಚ್ಚಿಕೊಳ್ಳಿ ಮತ್ತು 15-20 ನಿಮಿಷ ಕಾಲ ಹಾಗೆ ಬಿಡಿ. ತಣ್ಣಗಿನ ನೀರಿನಿಂದ ಮುಖ ತೊಳೆಯಿರಿ. ಉತ್ತಮ ಹಾಗೂ ವೇಗದ ಫಲಿತಾಂಶಕ್ಕಾಗಿ ಪ್ರತಿನಿತ್ಯ ಇದನ್ನು ಬಳಸಿಕೊಳ್ಳಿ.