ಸಿದ್ಧಾಪುರ: ಇಂದಿನ ದಿನಗಳಲ್ಲಿ ಲೈಬ್ರರಿಗೆ ಹೋಗಿ ಓದುವ ಜನರ ಸಂಖ್ಯೆ ಬೆರಳಣಿಕೆಯಷ್ಟು. ಅದಕ್ಕೋಸ್ಕರ ಈಗ ಡಿಜಿಟಲ್ ಲೈಬ್ರರಿಗಳು ಹುಟ್ಟಿಕೊಳ್ಳುತ್ತಿವೆ. ವಕೀಲರಿಗೂ ಕೂಡ ಸೆಕ್ಷನ್ಗಳ ಅಧ್ಯಯನಕ್ಕೆ ಇ-ಲೈಬ್ರರಿ ಉಪಯುಕ್ತವಾಗಿದೆ. ಆದ್ರೆ ಈಗ ನ್ಯಾಯಾಲಯಕ್ಕೂ ಕೂಡ ಡಿಜಿಟಲ್ ಲೈಬ್ರರಿ ಬಂದಿರೋದು ಖುಷಿಯ ವಿಚಾರವಾಗಿದೆ ಅಂತಾ ಜಿಲ್ಲಾ ಸತ್ರ ನ್ಯಾಯಾಧೀಶ ವಿಠ್ಠಲ್ ಧಾರವಾಡಕರ್ ಹೇಳಿದರು.ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಅನೇಕ ವಿಶೇಷತೆಗಳನ್ನು ಹೊಂದಿರುವ ಡಿಜಿಟಲ್ ಇ-ಲೈಬ್ರರಿಯೊಂದು ಜಿಲ್ಲೆಯಲ್ಲಿ ಪ್ರಥಮವಾಗಿ ಸಿದ್ದಾಪುರದ ಜೆಎಂಎಫ್ಸಿ ಕೋರ್ಟ್ನಲ್ಲಿ ಆರ್.ವಿ. ದೇಶಪಾಂಡೆ ಮೆಮೋರಿಯಲ್ ಟ್ರಸ್ಟ್ ಸಹಯೋಗದೊಂದಿಗೆ ಉದ್ಘಾಟನೆಗೊಂಡಿದ್ದು ಸಂತಸದ ವಿಚಾರ ಅಂತ ನಾಯಮೂರ್ತಿಗಳು ತಿಳಿಸಿದ್ದಾರೆ.
ವಿವಿಧ ಹಂತದ ಕೋರ್ಟ್ಗಳು ಹಾಗೂ ಸುಪ್ರೀಂ ಕೋರ್ಟ್ನ ಎಲ್ಲ ತೀರ್ಪುಗಳನ್ನು ಕಂಪ್ಯೂಟರ್ಗೆ ಫೀಡ್ ಮಾಡಲಾಗಿರುತ್ತದೆ. ಅಲ್ಲದೇ, ಕಾನೂನಿನ ಎಲ್ಲ ಸೆಕ್ಷನ್ಗಳನ್ನು ಒಂದು ಸಾಫ್ಟ್ವೇರ್ ಅಡಿಯಲ್ಲಿ ದಾಖಲಿಸಲಾಗಿರುತ್ತದೆ. ಕಂಪ್ಯೂಟರ್ ಪರದೆಯಲ್ಲಿ ಈ-ಲೈಬ್ರರಿಯನ್ನು ಆಯ್ಕೆ ಮಾಡಿಕೊಂಡು ಬರೀ ಒಂದು ಅಕ್ಷರ ಟೈಪ್ ಮಾಡಿದ್ರೆ ಸಾಕು. ಅದರ, ಅಡಿಯಲ್ಲಿ ಬರುವ ಸೆಕ್ಷನ್ಗಳು ಹಾಗೂ ತೀರ್ಪುಗಳ ಉಲ್ಲೇಖ ನಮಗೆ ಸುಲಭವಾಗಿ ಲಭ್ಯವಾಗುತ್ತದೆ.