ನವದೆಹಲಿ, -ದೇಶದ ನಗರಗಳಲ್ಲಿ ಆರಾಮದಾಯಕ, ಸುಖಕರ, ಅನುಕೂಲಕರ ಹಾಗೂ ಕೈಗೆಟುಕುವ ದರದಲ್ಲಿ ಸಾರಿಗೆ ವ್ಯವಸ್ಥೆಗಳನ್ನು ಕಲ್ಪಿಸುವುದು ಕೇಂದ್ರ ಸರ್ಕಾರದ ಆದ್ಯತೆಯಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ರಾಜಧಾನಿ ದೆಹಲಿಯಲ್ಲಿ ಇಂದು ಮೆಟ್ರೋದ ಮುಂಡ್ಕಾ-ಬಹದುರ್ಗಾ ವಿಭಾಗವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸಾರಿಗೆ ಸಂಪರ್ಕ ಹಾಗೂ ಅಭಿವೃದ್ಧಿ ನಡುವೆ ಒಂದಕ್ಕೊಂದು ಸಂಪರ್ಕವಿದೆ ಎಂದು ಹೇಳಿದರು.

RELATED ARTICLES  ಹವ್ಯಕ ಮಹಾಸಭಾದಿಂದ ನಡೆದ "ಹವ್ಯಕ ಮಹಿಳಾ ಸಮಾವೇಶ" ಯಶಸ್ವಿ: ಅಪಪ್ರಚಾರಗಳಿಗೆ ತಕ್ಕ ಉತ್ತರವನ್ನು ನೀಡಲು ಒಗ್ಗಟ್ಟಾಗಲು ಕರೆ.

ಮೆಟ್ರೋಗಳಿಗೆ ಸಂಬಂಧಪಟ್ಟಂತೆ ನಮ್ಮ ಸರ್ಕಾರ ನೀತಿಯೊಂದನ್ನು ಜಾರಿಗೊಳಿಸಿದೆ. ಮೆಟ್ರೋ ವ್ಯವಸ್ಥೆಗಳಿಗೆ ಸಂಬಂಧಪಟ್ಟ ಅಂಶಗಳು ಮೂಲ ಗುಣಮಟ್ಟಗಳಿಗೆ ಅನುಗುಣವಾದ ಸುಸಂಬದ್ಧತೆ ಹಾಗೂ ಕಾರ್ಯವನ್ನು ಅವಲಂಬಿಸಿರುತ್ತವೆ. ಭಾರತದಲ್ಲೇ ಮೆಟ್ರೋ ಕೋಚ್‍ಗಳನ್ನು ತಯಾರಿಸುವ ಮೂಲಕ ಸ್ವಾವಲಂಬನೆ ಸಾಧಿಸಬೇಕೆಂದು ತಮ್ಮ ಸರ್ಕಾರದ ಬಯಕೆಯಾಗಿದೆ ಎಂದು ಪ್ರಧಾನಿ ತಿಳಿಸಿದರು.

RELATED ARTICLES  ಸರಳ ವಾಸ್ತು ಖ್ಯಾತಿಯ ಚಂದ್ರಶೇಖರ್‌ ಗುರೂಜಿ ಕೊಲೆ..?